Yash : ಅಪ್ಪಾ ನಿಂಗೆ ಶಕ್ತಿನೇ ಇಲ್ಲ.. ನನ್ನ ನೋಡು..! ಯಶ್‌ ಯಥರ್ವ ತುಂಟಾಟ

ಕೆಜಿಎಫ್‌ 2 ನಂತರ ಯಶ್‌ ತಮ್ಮ ಫುಲ್‌ ಟೈಮ್‌ ಕುಟುಂಬದ ಜೊತೆ ಕಳೆಯುತ್ತಿದ್ದಾರೆ. ಅಭಿಮಾನಿಗಳಂತೂ ರಾಕಿ ಭಾಯ್‌ ಏನ್‌ ಮಾಡ್ತೀದಾರೆ.. ಯಾವಾಗ ನೆಕ್ಸ್ಟ್‌ ಸಿನಿಮಾ ಅನೌಸ್ಸ್‌ ಮಾಡ್ತಾರೆ ಅಂತ ಫುಲ್‌ ಟೆನಕ್ಷನ್‌ ಆಗಿದೆ. ಆದ್ರೆ ಯಶ್‌ ಮಾತ್ರ ಮಕ್ಕಳ ಜೊತೆ ಆಟ ಆಡ್ತಾ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಇದೀಗ ಮಗ ಯಥರ್ವ್‌ ಜೊತೆ ಯಶ್‌ ತುಂಟಾಟವಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

Written by - Krishna N K | Last Updated : Feb 5, 2023, 02:08 PM IST
  • ಕೆಜಿಎಫ್‌ 2 ನಂತರ ಯಶ್‌ ತಮ್ಮ ಫುಲ್‌ ಟೈಮ್‌ ಕುಟುಂಬದ ಜೊತೆ ಕಳೆಯುತ್ತಿದ್ದಾರೆ.
  • ಮಕ್ಕಳ ಜೊತೆ ಆಟ ಆಡ್ತಾ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ.
  • ಇದೀಗ ಮಗ ಯಥರ್ವ್‌ ಜೊತೆ ಯಶ್‌ ತುಂಟಾಟವಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.
Yash : ಅಪ್ಪಾ ನಿಂಗೆ ಶಕ್ತಿನೇ ಇಲ್ಲ.. ನನ್ನ ನೋಡು..! ಯಶ್‌ ಯಥರ್ವ ತುಂಟಾಟ title=

Yash son Yatharv : ಕೆಜಿಎಫ್‌ 2 ನಂತರ ಯಶ್‌ ತಮ್ಮ ಫುಲ್‌ ಟೈಮ್‌ ಕುಟುಂಬದ ಜೊತೆ ಕಳೆಯುತ್ತಿದ್ದಾರೆ. ಅಭಿಮಾನಿಗಳಂತೂ ರಾಕಿ ಭಾಯ್‌ ಏನ್‌ ಮಾಡ್ತೀದಾರೆ.. ಯಾವಾಗ ನೆಕ್ಸ್ಟ್‌ ಸಿನಿಮಾ ಅನೌಸ್ಸ್‌ ಮಾಡ್ತಾರೆ ಅಂತ ಫುಲ್‌ ಟೆನಕ್ಷನ್‌ ಆಗಿದೆ. ಆದ್ರೆ ಯಶ್‌ ಮಾತ್ರ ಮಕ್ಕಳ ಜೊತೆ ಆಟ ಆಡ್ತಾ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಇದೀಗ ಮಗ ಯಥರ್ವ್‌ ಜೊತೆ ಯಶ್‌ ತುಂಟಾಟವಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ವೈರಲ್‌ ವಿಡಿಯೋದಲ್ಲಿ, ಯಶ್​ ಮಗನ ಜೊತೆ ಮುದ್ದಾದ ಮಾತುಕತೆ ನಡೆಯುತ್ತಿರುವುದನ್ನು ಕಾಣಬಹುದು. ಇಬ್ಬರಲ್ಲಿ ಯಾರ ತೋಳು ಗಟ್ಟಿಯಾಗಿದೆ ಎಂಬ ಕುರಿತು ಯಶ್​ ಮತ್ತು ಯಥರ್ವ್​ ಚರ್ಚೆ ಮಾಡುತ್ತಿದ್ದಾರೆ. ಯಥರ್ವ್‌ ಮಾತ್ರ ಅಪ್ಪನಿಗಿಂತ ನಾನೇ ಗಟ್ಟಿ ಅಂತ ವಾದ ಮಾಡ್ತೀದಾನೆ. ಈ ಕ್ಯೂಟ್‌ ವಿಡಿಯೋವನ್ನು ಸ್ವತಃ ಯಶ್​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Yash (@thenameisyash)

ಇದನ್ನೂ ಓದಿ: Shubman Gill : ಈ ಅಭಿಮಾನಿಯ ಪ್ರಪೋಸಲ್‌ ಒಪ್ಪಿಕೊಂಡ ಶುಭಮನ್ ಗಿಲ್!! ಸಾರಾ ಗತಿಯೇನು?

ವಿಡಿಯೋದಲ್ಲಿ, ಯಶ್​ ಅವರ ತೋಳನ್ನು ಮುಟ್ಟಿ ಯಥರ್ವ್​ ತುಂಬ ಸಾಫ್ಟ್​ ಆಗಿದೆ ಅಂತ ಹೇಳ್ತಾನೆ. ನಂತರ ತನ್ನ ತೋಳು ತೋರಿಸಿ ʼತುಂಬ ಗಟ್ಟಿಯಾಗಿದೆʼ ಅಂತ ಹೇಳಿ ನಗ್ತಾನೆ. ಅಲ್ಲದೆ, ಯಶ್‌ ಕೂಡ ʼಸೂಪರ್​, ನೀನೇ ಎಲ್ಲರಿಗಿಂತ ಸ್ಟ್ರಾಂಗ್​ʼ ಅಂತ ಬೆನ್ನು ತಟ್ಟುತ್ತಾರೆ. ಸದ್ಯ ಅಪ್ಪ-ಮಗನ ಕ್ಯೂಟ್‌ ಕನ್ವರ್ಸೇಶನ್ ವಿಡಿಯೋವನ್ನು ಯಶ್‌ ಫ್ಯಾನ್ಸ್ ತುಂಬಾ ಇಷ್ಟ ಪಟ್ಟಿದ್ದಾರೆ.​ ಅಲ್ಲದೆ, ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಸೋಷಿಯಲ್‌ ಮೀಡಿದಾದಲ್ಲಿ ಸದಾ ಆಕ್ಟಿವ್‌ ಇರುವ ಯಶ್‌ಗೆ ಇನ್​ಸ್ಟಾಗ್ರಾಮ್​ನಲ್ಲಿ 1.3 ಕೋಟಿಗೂ ಅಧಿಕ ಜನರು ಫಾಲೋವರ್ಸ್‌ ಇದ್ದಾರೆ. ಆಗಾಗ ತಮ್ಮ ಮಕ್ಕಳ ತುಂಟಾಟದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ರಾಕಿಂಗ್‌ ಸ್ಟಾರ್‌ ಯಶ್​ ಮುಂಬರುವ ಸಿನಿಮಾಗಾಗಿ ಅವರ ಅಭಿಮಾನಿಗಳು ಬಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇನ್ನು ಯಶ್‌ ಪ್ಯಾನ್‌ ವರ್ಲ್ಡ್‌ ಸಿನಿಮಾ ಮಾಡಲಿದ್ದಾರೆ ಅದಕ್ಕಾಗಿಯೆ ಅವರು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂಬ ಟಾಕ್‌ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News