ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದ್ದಾರೆ: ಪ್ರಹ್ಲಾದ್‌ ಜೋಶಿ

Lok Sabha Election 2024: ಗ್ಯಾರಂಟಿ ಗ್ಯಾರಂಟಿ ಎನ್ನುತ್ತಾ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಕಡೇ ಪಕ್ಷ ರಸ್ತೆಗಳಿಗೆ ಒಂದು ಬುಟ್ಟಿ ಮಣ್ಣು ಸಹ ಹಾಕಿಲ್ಲವೆಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಾಗ್ದಾಳಿ ನಡೆಸಿದರು.

Written by - Puttaraj K Alur | Last Updated : Apr 5, 2024, 10:10 PM IST
  • ರಾಜ್ಯದಲ್ಲಿ 4,000 ರೂ. ʼಕಿಸಾನ್ ಸಮ್ಮಾನ್ ನಿಧಿʼ ಬಂದ್ ಮಾಡಿದ ಕಾಂಗ್ರೆಸ್ ಸರ್ಕಾರ
  • ಸಿಎಂ ಸಿದ್ದರಾಮಯ್ಯನವರು ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದ್ದಾರೆ
  • ಒಂದೇ ಒಂದು ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕಿಲ್ಲವೆಂದು ಪ್ರಹ್ಲಾದ್‌ ಜೋಶಿ ವಾಗ್ದಾಳಿ
ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದ್ದಾರೆ: ಪ್ರಹ್ಲಾದ್‌ ಜೋಶಿ  title=
ಕಾಂಗ್ರೆಸ್‌ ವಿರುದ್ಧ ಜೋಶಿ ವಾಗ್ದಾಳಿ!

ಹುಬ್ಬಳ್ಳಿ: ರಾಜ್ಯದಲ್ಲಿ ರೈತರಿಗೆ ನೀಡುತ್ತಿದ್ದ 4,000 ರೂ. ʼಕಿಸಾನ್ ಸುಮ್ಮಾನ್ ನಿಧಿʼಯನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ್ ಮಾಡಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ. ಕಲಘಟಗಿ ವಿಧಾನಸಭಾ ಕ್ಷೇತ್ರದ ನಿಗದಿ ಗ್ರಾಮದಲ್ಲಿ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನೀಡುತ್ತಿದ್ದ 4,000 ರೂ. ʼಕಿಸಾನ್ ಸಮ್ಮಾನ್ ನಿಧಿʼಯನ್ನು ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಸ್ಥಗಿತಗೊಳಿಸಿದ್ದಾರೆ ಎಂದು ಕಿಡಿಕಾರಿದರು. 

ಕೇಂದ್ರ ಸರ್ಕಾರ ಪ್ರಧಾನಿ ಮೋದಿಯವರು ಘೋಷಿಸಿದಂತೆ ಇಂದಿಗೂ 6,000 ರೂ. ʼಕಿಸಾನ್ ಸಮ್ಮಾನ್ ನಿಧಿʼಯನ್ನು ನೇರವಾಗಿ ರೈತರ ಖಾತೆಗೆ ಹಾಕುತ್ತಿದೆ. ಆದರೆ ರಾಜ್ಯ ಸರ್ಕಾರ ಅದನ್ನು ನಿಲ್ಲಿಸಿಬಿಟ್ಟಿದೆ. ರೈತರ ಮೇಲೆ ನಿಜಕ್ಕೂ ಇವರಿಗೆ ಕಾಳಜಿಯೇ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. 

ಇದನ್ನೂ ಓದಿ: Career News: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮೇ 4 ಕೊನೆ ದಿನ 

ಆರ್ಥಿಕ ಸಂಕಷ್ಟದಲ್ಲಿ ಸರ್ಕಾರ: ಗ್ಯಾರಂಟಿ ಗ್ಯಾರಂಟಿ ಎನ್ನುತ್ತಾ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಕಡೇ ಪಕ್ಷ ರಸ್ತೆಗಳಿಗೆ ಒಂದು ಬುಟ್ಟಿ ಮಣ್ಣು ಸಹ ಹಾಕಿಲ್ಲ ಎಂದರು.

ನಮ್ಮ ಕಾಮಗಾರಿ ಉದ್ಘಾಟಿಸಿ ಫೋಸ್ ಕೊಡುತ್ತಿದ್ದಾರೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಾರ್ಯಗತಗೊಳಿಸಿದ್ದ ಕಾಮಗಾರಿಗಳನ್ನು ಉದ್ಘಾಟನೆ, ಭೂಮಿಪೂಜೆ ಮಾಡಿ ಕಾಂಗ್ರೆಸ್ಸಿಗರು ಫೋಟೋಗೆ ಫೋಸ್ ಕೊಡುತ್ತಿದ್ದಾರೆ ಎಂದು ಸಚಿವ ಜೋಶಿ ಕಿಡಿಕಾರಿದರು.

ಕಾಂಗ್ರೆಸ್‌ಗೆ ಮತ ನೀಡಬೇಡಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಸಮಾರಂಭವನ್ನು ಬೈಕಾಟ್ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಡಿ ಎಂದು ಪ್ರಹ್ಲಾದ ಜೋಶಿ ಕರೆ ನೀಡಿದರು. ಕಾಂಗ್ರೆಸ್ ಪಕ್ಷ ಸರ್ಜಿಕಲ್ ಸ್ಟ್ರೈಕ್‌ಗೆ, ರಾಮ ಜನ್ಮ ಸ್ಥಳಕ್ಕೆ ಸಾಕ್ಷಿ ಕೇಳಿತ್ತು. ಇಂತಹ ಪಕ್ಷಕ್ಕೆ ನೀವು ಬೆಂಬಲ ನೀಡಬೇಕೇ? ಎಂದು ಮಾರ್ಮಿಕವಾಗಿ ಹೇಳಿದರು.

ಕಾಂಗ್ರೆಸ್‌ಗೆ ದೇಶದ ಹಿತ ಬೇಕಿಲ್ಲ: ಕಾಂಗ್ರೆಸ್ ಪಕ್ಷ ಎಂದೂ ದೇಶದ ಹಿತದ ಬಗ್ಗೆ ಚಿಂತಿಸಿಲ್ಲ. ಬದಲಿಗೆ ತುಷ್ಟಿಕರಣದ ರಾಜಕಾರಣ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ ಬಂದಿದೆ ಎಂದು ಜೋಶಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ರಾಹುಲ್ ಗಾಂಧಿಗೆ ಬದ್ಧತೆ ಇಲ್ಲ: ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಗೆ ಬದ್ಧತೆಯೇ ಇಲ್ಲ. ಏನು ಮಾತನಾಡುತ್ತೇನೆ ಎಂಬುದು ಅವರಿಗೇ ತಿಳಿಯದು, ಅವರ ಪಕ್ಷದವರಿಗೂ ಅರ್ಥವಾಗದು. ಆ ರೀತಿ ತಾಳ-ಮೇಳ ಇಲ್ಲದಂತೆ ರಾಹುಲ್ ಬಾಬಾ ಮಾತನಾಡುತ್ತಾರೆ. ಹೀಗಿರುವಾಗ ದೇಶ ಆಳುವ ಬದ್ಧತೆ ಇವರಿಗೆಲ್ಲಿ ಬರಬೇಕು? ಎಂದು ಸಚಿವ ಜೋಶಿ ಲೇವಡಿ ಮಾಡಿದರು.

ಇದನ್ನೂ ಓದಿ: ಕೇಂದ್ರದಿಂದ GST ಮೋಸ: ಬಹಿರಂಗ ಚರ್ಚೆಗೆ ನಾನು ಸಿದ್ಧ, ನಿರ್ಮಲಾ ಸೀತಾರಾಮನ್ ಸಿದ್ಧರಿದ್ದಾರಾ?

ಮೋದಿ ಮೊದಲ 5 ವರ್ಷ ಕಾಂಗ್ರೆಸ್ ರಾಡಿ ಬಳಿಯಬೇಕಾಯಿತು: ಕಾಂಗ್ರೆಸ್ ಆಡಳಿತದಲ್ಲಿ ಬಂಗಾರ ಒತ್ತೆ ಇಡುವ ಮಟ್ಟಕ್ಕೆ ದೇಶ ತಲುಪಿತ್ತು. ಪ್ರಧಾನಿ ಮೋದಿ ಮೊದಲ 5 ವರ್ಷ ಕಾಂಗ್ರೆಸ್ ಮಾಡಿದ್ದ ರಾಡಿ ಬಳಿಯಬೇಕಾಯಿತು. ನಂತರದ 5 ವರ್ಷದಲ್ಲಿ ದೇಶವನ್ನು ಆರ್ಥಿಕ ಸುಧಾರಣೆಯತ್ತ ತಂದರು. ಈಗ ಭಾರತ ಭಿಕ್ಷೆ ಬೇಡುವ ಪರಿಸ್ಥಿತಿ ಇಲ್ಲ. ಜಗತ್ತಿನ ಹಿರಿಯಣ್ಣ ಅಮೆರಿಕ ಮೋದಿಯವರ ಆಟೋಗ್ರಾಫ್ ಕೇಳುವಷ್ಟರ ಮಟ್ಟಿಗೆ ಭಾರತ ಸಶಕ್ತವಾಗಿ ಬೆಳೆದು ನಿಂತಿದೆ. ವಿಶ್ವ ಸಂಸ್ಥೆ ಒತ್ತಡಕ್ಕೂ ಮಣಿಯದೇ ಧೈರ್ಯವಾಗಿ ಪ್ರಶ್ನಿಸುವ ತಾಕತ್ತು ಪ್ರದರ್ಶಿಸುತ್ತಿದೆ ಎಂದು ಹೇಳಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News