Corona Newstrain : ನೈಟ್ ಕರ್ಫ್ಯು ಬೇಕು ಎಂದ ಅಶೋಕ್, ಬೇಡ ಎಂದ ಸುಧಾಕರ್, ಗೊಂದಲದಲ್ಲಿ ಸರ್ಕಾರ

ನೈಟ್ ಕರ್ಫ್ಯು ಜಾರಿ ಗೊಳಿಸುವ ಬಗ್ಗೆ ಯಡಿಯೂರಪ್ಪ ಸಂಪುಟದ ಇಬ್ಬರು ಸಚಿವರು ಪರಸ್ಪರ ತದ್ವಿರುದ್ದ ಹೇಳಿಕೆ ನೀಡಿ, ಗೊಂದಲ ಸೃಷ್ಟಿಸಿದ್ದಾರೆ. 

Written by - Zee Kannada News Desk | Last Updated : Dec 30, 2020, 05:13 PM IST
  • ರಾಜ್ಯದಲ್ಲಿ ಮತ್ತೆ ಸುದ್ದಿಯಲ್ಲಿದೆ ನೈಟ್ ಕರ್ಫ್ಯು
  • ನೈಟ್ ಕರ್ಫ್ಯು ಬಗ್ಗೆ ಸಚಿವರ ತದ್ವಿರುದ್ಧ ಹೇಳಿಕೆ
  • ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ ಸಚಿವರ ಹೇಳಿಕೆ
Corona Newstrain : ನೈಟ್ ಕರ್ಫ್ಯು ಬೇಕು ಎಂದ ಅಶೋಕ್, ಬೇಡ ಎಂದ ಸುಧಾಕರ್, ಗೊಂದಲದಲ್ಲಿ  ಸರ್ಕಾರ title=
ನೈಟ್ ಕರ್ಫ್ಯು ಬಗ್ಗೆ ಸಚಿವರಿಬ್ಬರ ತದ್ವಿರುದ್ಧ ಹೇಳಿಕೆ(file photoe)

ಬೆಂಗಳೂರು : ರೂಪಾಂತರಿತ ಕರೋನಾ (covid new strain) ರಾಜ್ಯದಲ್ಲಿ ತಾಂಡವವಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ರಾಜ್ಯದಲ್ಲಿ ನೈಟ್ ಕರ್ಫ್ಯು  ಮತ್ತೆ ಸುದ್ದಿಯಲ್ಲಿದೆ. ಈ ಸಲ ನೈಟ್   ಕರ್ಪ್ಯು ಸುದ್ದಿಯಲ್ಲಿರುವುದು ಬೇರೆಯೇ ವಿಷಯಕ್ಕೆ. ನೈಟ್ ಕರ್ಫ್ಯು ಜಾರಿ ಗೊಳಿಸುವ ಬಗ್ಗೆ ಯಡಿಯೂರಪ್ಪ (Yadiyurappa) ಸಂಪುಟದ ಇಬ್ಬರು ಸಚಿವರು ಪರಸ್ಪರ ತದ್ವಿರುದ್ದ ಹೇಳಿಕೆ ನೀಡಿ, ಗೊಂದಲ ಸೃಷ್ಟಿಸಿದ್ದಾರೆ. 

ನೈಟ್ ಕರ್ಫ್ಯು ಮುಗಿದ ಆಧ್ಯಾಯ ಎಂದ ಡಾ. ಸುಧಾಕರ್ :

ನೈಟ್ ಕರ್ಫ್ಯು ಬಗ್ಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ (Dr.K Sudhakar) ಅವರನ್ನು ಪ್ರಶ್ನಿಸಿದಾಗ,  ರಾಜ್ಯದಲ್ಲಿಏಳು ಮಂದಿಯಲ್ಲಿ ರೂಪಾಂತರಿತ ಕರೋನಾ (covid new strain) ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಆದರೆ, ನೈಟ್ (night curfew) ಕರ್ಫ್ಯುಜಾರಿಗೊಳಿಸುವ ಯಾವುದೇ ಯೋಚನೆ ಸರ್ಕಾರಕ್ಕೆ ಇಲ್ಲ. ನೈಟ್ ಕರ್ಫ್ಯು ಮುಗಿದ ಆಧ್ಯಾಯ ಎಂದು ಹೇಳಿದ್ದಾರೆ

ALSO READ : Corona Strain: ಬೆಂಗಳೂರಿನ ಬಳಿಕ ಶಿವಮೊಗ್ಗಕ್ಕೂ ಶಾಕ್

ರಿಯಲ್ ನೈಟ್ ಕರ್ಫ್ಯು ಅಗತ್ಯವಿದೆ ಎಂದ ಸಚಿವ ಆರ್ ಅಶೋಕ್ :

ಸಚಿವ ಡಾ. ಸುಧಾಕರ್ ಕೇಳಿದ ಪ್ರಶ್ನೆಯನ್ನೇ ಕಂದಾಯ ಸಚಿವ ಆರ್ ಅಶೋಕ್ (R Ashok) ಅವರಿಗೆ ಕೇಳಿದಾಗ ಬಂದ ಉತ್ತರ ಹೀಗಿತ್ತು. ರಾಜ್ಯದಲ್ಲಿ ರಿಯಲ್ ನೈಟ್ ಕರ್ಫ್ಯು ಅಗತ್ಯಿವಿದೆ. ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಿ ಈ ಬಗ್ಗೆ ಒಂದು ನಿರ್ಧಾರಕ್ಕೆ ಬರಲಾಗುವುದು. ಲಾಕ್ ಡೌನ್ ಚಿಂತನೆ ಸರ್ಕಾರದ ಮುಂದೆ ಇಲ್ಲ. ನಿರ್ದಿಷ್ಟ ಜಿಲ್ಲೆಗಳಲ್ಲಿ ಲಾಕ್ ಡೌನ್ (Lockdown)ಬೇಕಾ ಬೇಡ್ವಾ ಎಂಬ  ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಕರೋನಾ (COVID-19) ನಿಯಂತ್ರಣ ವಿಚಾರದಲ್ಲಿ ಹಲವು ಗೊಂದಲಕಾರಿ ನಿರ್ಣಯಗಳನ್ನು ಕೈಗೊಂಡು ರಾಜ್ಯ ಸರ್ಕಾರ ನಗೆಪಾಟಿಲಿಗೀಡಾಗಿದ್ದು ಇದೇ ಮೊದಲೇನಲ್ಲ. ಡಿಸೆಂಬರ್ 25 ರಿಂದ ರಾಜ್ಯದಲ್ಲಿ ನೈಟ್ ಕರ್ಫ್ಯು ಜಾರಿಗೊಳಿಸಲಾಗುವುದು ಎಂದು ಸ್ವಲ್ಪ ದಿನಗಳ ಹಿಂದೆ ಯಡಿಯೂರಪ್ಪ ಸರ್ಕಾರ ನಿರ್ಧರಿಸಿತ್ತು. ಆದರೆ, ಸಂಜೆಯೊಳಗೆ ಉಲ್ಟಾ ಹೊಡೆದ ಸರ್ಕಾರ ನೈಟ್ ಕರ್ಫ್ಯು ನಿರ್ಧಾರದಿಂದ ಹಿಂದೆ ಸರಿದಿತ್ತು.  ಈ ನಿರ್ಧಾರ ಪ್ರತಿಪಕ್ಷಗಳ ಟೀಕೆಗೆ ಮತ್ತು ಜನರ ನಗೆಪಾಟೀಲಿಗೆ ಈಡಾಗಿತ್ತು.

ALSO READ : Coronavirus : ಲಂಡನ್ ವೈರಸ್ ನಿಂದ ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ.. ರೂಪಾಂತರಿ ಕರೋನಾ ಮಕ್ಕಳಿಗೆ ಮಾರಕವೇ..?

ಈಗ  ನೈಟ್ ಕರ್ಫ್ಯು ಕುರಿತಂತೆ ಇಬ್ಬರು ಸಚಿವರು ಗೊಂದಲಕಾರಿ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ರೂಪಾಂತರಿತ ಕರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚತ್ತಿದೆ. ಜೊತೆಗೆ ಈ ಬಗ್ಗೆ ಕಾರ್ಯತಂತ್ರ ರೂಪಿಸಬೇಕಾದ ಸಚಿವರುಗಳು ಪರಸ್ಪರ ವಿರುದ್ಧ ಹೇಳಿಕೆ ನೀಡುತ್ತಿರುವುದು ಜನರನ್ನು ಗೊಂದಲಕ್ಕೆ ತಳ್ಳಿದೆ. ನೈಟ್ ಕರ್ಫ್ಯು ಬೇಕಾ ಬೇಡವಾ ಎನ್ನುವ ಬಗ್ಗೆ ಸರ್ಕಾರ ಇನ್ನೂ ಗೊಂದಲದಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News