ಬೆಂಗಳೂರು : ಬೆಂಬಿಡದೆ ಕಾಡುತ್ತಿರುವ ಕರೋನಾವೈರಸ್ ಎಂಬ ಸಾಂಕ್ರಾಮಿಕ ರೋಗ ಸದ್ಯಕ್ಕೆ ನೆಮ್ಮದಿಯಿಂದ ಉಸಿರಾಡಲು ಬಿಡುವುದಿಲ್ಲ ಎಂದು ತೋರಿತ್ತಿದೆ. ಇತ್ತೀಚಿಗೆ ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಕರೋನಾವೈರಸ್ ಹೊಸ ತಳಿ ಭಾರತಕ್ಕೂ ಕಾಲಿಟ್ಟಿದೆ. ಮಾತ್ರವಲ್ಲ ಬ್ರಿಟನ್‌ನಿಂದ ರಾಜ್ಯಕ್ಕೆ ಮರಳಿದ್ದವರಲ್ಲಿ ಕೂಡ ಕೆಲವರಿಗೆ ರೂಪಾಂತರಿ ಕೊರೊನಾವೈರಸ್ ಸೋಂಕು ದೃಢಪಟ್ಟಿದೆ.
ಹೌದು ನಿನ್ನೆಯಷ್ಟೇ ಬ್ರಿಟನ್‌ನಿಂದ ರಾಜ್ಯಕ್ಕೆ ಮರಳಿದ್ದ ಮೂರು ಜನರಲ್ಲಿ ರೂಪಾಂತರಿ ಕರೋನಾವೈರಸ್ (Coronavirus) ಪತ್ತೆಯಾಗಿತ್ತು. ಇದೀಗ ಇನ್ನೂ ನಾಲ್ವರಿಗೆ ಹೊಸ ಕರೋನಾ ತಟ್ಟಿದ್ದು ಹೊಸದಾಗಿ ವರದಿಯಾಗಿರುವ ಸೋಂಕಿನ ಪ್ರಕರಣಗಳು ಶಿವಮೊಗ್ಗದಲ್ಲಿ ಪತ್ತೆಯಾಗಿವೆ. ಸದ್ಯ ಅವರೆಲ್ಲರೂ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: Corona new strain: ಈ ದೇಶದಲ್ಲಿ ಪ್ರಯಾಣ ಇತಿಹಾಸ ಹೊಂದಿರದ ಯುವಕನಲ್ಲೂ ಸೋಂಕು ಪತ್ತೆ
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ನವೆಂಬರ್ 25 ರಿಂದ ಡಿಸೆಂಬರ್ 23 ರವರೆಗೆ ಬ್ರಿಟನ್‌ನ (Britain) ವಿವಿಧ ನಗರಗಳಿಂದ ಸುಮಾರು 33 ಸಾವಿರ ಪ್ರಯಾಣಿಕರು ಭಾರತವನ್ನು ತಲುಪಿದ್ದಾರೆ. ಈ ಎಲ್ಲ ಪ್ರಯಾಣಿಕರನ್ನು ಈಗಾಗಲೇ ಟ್ರ್ಯಾಕ್ ಮಾಡಲಾಗಿದೆ ಮತ್ತು ಅವರೆಲ್ಲರಿಗೂ ಆರ್‌ಟಿ-ಪಿಸಿಆರ್ (RT-PCR) ಟೆಸ್ಟ್ ಕೂಡ ಮಾಡಲಾಗಿದೆ. ಇವರಲ್ಲಿ 114 ಜನರಲ್ಲಿ ಕರೋನಾವೈರಸ್ ದೃಢಪಟ್ಟಿದೆ.
ಇದನ್ನೂ ಓದಿ: Corona Strain: ವಿದೇಶದಿಂದ ಹಿಂದಿರುಗಿದ 6 ಪ್ರಯಾಣಿಕರಲ್ಲಿ 'ಬ್ರಿಟನ್' ಕರೋನಾ, ಹೆಚ್ಚಿದ ಆತಂಕ
ಇನ್ನು ರೂಪಾಂತರಿ ಕೊರೊನಾವೈರಸ್ ಸೋಂಕು ಹರಡುವ ಹಿನ್ನಲೆಯಲ್ಲಿ ಬ್ರಿಟನ್‌ನಿಂದ ಬರುವ ವಿಮಾನಗಳನ್ನು ನಿಷೇಧಿಸುವ ಸಾಧ್ಯತೆ ಇದೆ. ಇದರೊಂದಿಗೆ ಅಂತಹ ಪ್ರಯಾಣಿಕರನ್ನು ಗುರುತಿಸಲು ಪರೀಕ್ಷೆ, ಚಿಕಿತ್ಸೆ, ಕಣ್ಗಾವಲು ಮತ್ತು ಧಾರಕ ವಲಯಗಳನ್ನು ರಚಿಸಲು ಒತ್ತು ನೀಡಲಾಯಿತು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ -19 (Covid 19) ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.