ಲೋಕಸಭಾ ಚುನಾವಣೆಗೆ ತನ್ನ ಪಟಾಲಂ ಸಾಕಲು ಧನಸಂಗ್ರಹಿಸುತ್ತಿರುವ ಕಾಂಗ್ರೆಸ್: ಬಿಜೆಪಿ ಆರೋಪ

ಪ್ರವಾಹ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ಸ್ಥಳೀಯ ಮಟ್ಟದಲ್ಲಿ ಲಭ್ಯವಿರಬೇಕಾಗಿದ್ದ ಶಾಸಕರನ್ನು ಒತ್ತಾಯಪೂರ್ವಕವಾಗಿ ಬೆಂಗಳೂರಿಗೆ ಕರೆಸಿ ಸಿದ್ದರಾಮಯ್ಯನವರು ಹೊತ್ತಲ್ಲದ ಹೊತ್ತಲ್ಲಿ ಶಾಸಕಾಂಗ ಸಭೆ ನಡೆಸಿದ್ದರು ಎಂದು ಬಿಜೆಪಿ ಕಿಡಿಕಾರಿದೆ.

Written by - Puttaraj K Alur | Last Updated : Aug 2, 2023, 09:27 PM IST
  • ರಾಜ್ಯವೇ ಪ್ರವಾಹ ಮತ್ತು ಬೆಲೆಯೇರಿಕೆಯಿಂದ ತತ್ತರಿಸಿದ್ರೆ ಸಿದ್ದರಾಮಯ್ಯ ಅಂಡ್ ಕಂಪನಿ ದೆಹಲಿಯಲ್ಲಿದೆ
  • ಸಚಿವರು, ಶಾಸಕರು ಸಮತೇ ಸಿಎಂ ಸಿದ್ದರಾಮಯ್ಯರು ಕರ್ನಾಟಕ ತೊರೆದು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ
  • ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ದೊರೆಗಳ ಮುಂದೆ ತನ್ನ ಕೊಳಲು ಬಾರಿಸಲು ದೆಹಲಿಗೆ ಹೋಗಿದೆ
ಲೋಕಸಭಾ ಚುನಾವಣೆಗೆ ತನ್ನ ಪಟಾಲಂ ಸಾಕಲು ಧನಸಂಗ್ರಹಿಸುತ್ತಿರುವ ಕಾಂಗ್ರೆಸ್: ಬಿಜೆಪಿ ಆರೋಪ   title=
ಸಿದ್ದರಾಮಯ್ಯ ಅಂಡ್ ಕಂಪನಿ ದೆಹಲಿಯಲ್ಲಿದೆ!

ಬೆಂಗಳೂರು: ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೋ ವಯಲಿನ್ ಬಾರಿಸುತ್ತಾ ಕುಳಿತ ರೀತಿ, ರಾಜ್ಯವೇ ಪ್ರವಾಹ - ಬೆಲೆಯೇರಿಕೆಯಿಂದ ತತ್ತರಿಸುತ್ತಿರುವ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರು ಮತ್ತು ಶಾಸಕರು ಕರ್ನಾಟಕ ತೊರೆದು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಪ್ರಕೃತಿ ವಿಕೋಪದ ಪರಿಸ್ಥಿತಿ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ, ಜನರ ಸಮಸ್ಯೆಗಳಿಗೆ ದನಿಯಾಗಿ, ಪರಿಹಾರ ಕಾರ್ಯದಲ್ಲಿ ಭಾಗಿಯಾಗಬೇಕು. ಆದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮಾತ್ರ ದೊರೆಗಳ ಮುಂದೆ ತನ್ನ ಕೊಳಲು ಬಾರಿಸಲು ದೆಹಲಿಗೆ ಹೋಗಿದೆ’ ಎಂದು ಟೀಕಿಸಿದೆ.

ಇದನ್ನೂ ಓದಿ: ಆದೇಶ ಉಲ್ಲಂಘಿಸಿ ದಶಪಥ ಹೆದ್ದಾರಿಯಲ್ಲಿ ಬೈಕ್‌ಗಳ ಸಂಚಾರ

‘ಪ್ರವಾಹ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ಸ್ಥಳೀಯ ಮಟ್ಟದಲ್ಲಿ ಲಭ್ಯವಿರಬೇಕಾಗಿದ್ದ ಶಾಸಕರನ್ನು ಒತ್ತಾಯಪೂರ್ವಕವಾಗಿ ಬೆಂಗಳೂರಿಗೆ ಕರೆಸಿ ಸಿದ್ದರಾಮಯ್ಯನವರು ಹೊತ್ತಲ್ಲದ ಹೊತ್ತಲ್ಲಿ ಶಾಸಕಾಂಗ ಸಭೆ ನಡೆಸಿದ್ದರು. ಈಗ ಪ್ರವಾಹ ಪೀಡಿತ ಪ್ರದೇಶಗಳ ವಸ್ತುಸ್ಥಿತಿ ಅಧ್ಯಯನ ನಡೆಸಿ, ಪರಿಹಾರ ಕಾರ್ಯಕ್ರಮಗಳನ್ನು ಘೋಷಿಸಬೇಕಾಗಿದ್ದ ಮುಖ್ಯಮಂತ್ರಿಗಳು, ಸಚಿವರು ಮತ್ತು ಶಾಸಕರ ಜೊತೆ ತಮ್ಮ ತಮ್ಮ ಇಲಾಖೆಯ ಕಲೆಕ್ಷನ್‌ ಲೆಕ್ಕ ಒಪ್ಪಿಸಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ’ ಎಂದು ಬಿಜೆಪಿ ಕುಟುಕಿದೆ.

‘ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಪಟಾಲಂ ಅನ್ನು ಸಾಕಲು ಹೇರಳ ಧನಸಂಗ್ರಹಣೆಯಲ್ಲಿ ತೊಡಗಿದೆ. ಪರಿಣಾಮವಾಗಿ ಇಲ್ಲಿನ ಮುಖ್ಯಮಂತ್ರಿಗಳು ಹಾಗೂ ವಿವಿಧ ಪ್ರಮುಖ ಇಲಾಖೆಗಳ ಸಚಿವರನ್ನು ಪದೇ ಪದೇ ಕರೆಸಿ ಕಲೆಕ್ಷನ್‌ನ ಹೊಸ ಟಾರ್ಗೆಟ್‌ ನೀಡುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ. 

ಇದನ್ನೂ ಓದಿ: ತುಘಲಕ್ ಸರ್ಕಾರದ ಕಲುಷಿತ ನೀರು ಪೂರೈಕೆಯಿಂದ ಅಮಾಯಕ ಜೀವ ಬಲಿ: ಬಿಜೆಪಿ

‘ತಮಗೆ ಮತ ನೀಡಿರುವ ಜನತೆಯನ್ನು ಸಂಕಷ್ಟದ ಸಮಯದಲ್ಲಿ ಭೇಟಿಯಾಗಬೇಕಿದ್ದ ಮುಖ್ಯಮಂತ್ರಿಗಳು ಮತ್ತು ಕಂಪನಿ ತಮ್ಮ ಜವಾಬ್ದಾರಿ ಮರೆತು ದೆಹಲಿಯಲ್ಲಿ ಕೂತು ಸಮಯ ಕಳೆಯುತ್ತಿರುವುದು ಖಂಡನೀಯ. ಆದರೆ ಹಿಂದಿರುಗಿ ಬಂದ ನಂತರ ಮತ್ತಷ್ಟು ಕಲೆಕ್ಷನ್‌ ಹೆಚ್ಚು ಮಾಡಲಿರುವ ಅವರು ಮರಳಿ ಬಂದರೂ ರಾಜ್ಯಕ್ಕೆ ಅಪಾಯ ತಪ್ಪಿದ್ದಲ್ಲ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.     

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News