ಇಂದಿನಿಂದ ಸರ್ಕಾರಿ ನೌಕರರ ಪ್ರೊಟೆಸ್ಟ್- ಜನಸಾಮಾನ್ಯರ ಮೇಲೆ ಡೈರೆಕ್ಟ್ ಎಫೆಕ್ಟ್

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದಿನಿಂದ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಸರ್ಕಾರಿ ನೌಕರರ ಮುಷ್ಕರದಿಂದಾಗಿ ಇಂದಿನಿಂದ ಜನಸಾಮಾನ್ಯರಿಗೆ ತುರ್ತು ಸರ್ಕಾರಿ ಸೇವೆಗೂ ಅಡಚಣೆ ಉಂಟಾಗಲಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಸೇವೆ ಬಿಟ್ಟು ಎಲ್ಲವೂ ಸ್ಥಗಿತಗೊಳ್ಳಲಿದೆ.

Written by - Yashaswini V | Last Updated : Mar 1, 2023, 08:45 AM IST
  • ರಾಜ್ಯದಲ್ಲಿ ಸರ್ಕಾರಿ ನೌಕರರ ಮುಷ್ಕರ
  • ಸರ್ಕಾರಿ ನೌಕರರ ಸ್ಯಾಲರಿ ಸಮರ..!
  • ಜನಸಾಮಾನ್ಯರ ಬದುಕು ಹರೋಹರ‌.!
ಇಂದಿನಿಂದ ಸರ್ಕಾರಿ ನೌಕರರ ಪ್ರೊಟೆಸ್ಟ್- ಜನಸಾಮಾನ್ಯರ ಮೇಲೆ ಡೈರೆಕ್ಟ್ ಎಫೆಕ್ಟ್  title=
Govt Employees Strike

ಬೆಂಗಳೂರು:  ರಾಜ್ಯದಲ್ಲಿ ಇಂದಿನಿಂದ ವಿಧಾ‌ನಸೌಧದಿಂದ ಹಿಡಿದು ಪಂಚಾಯತಿ ಯವರೆಗೆ, ಸರ್ಕಾರಿ ಆಸ್ಪತ್ರೆಯಿಂದ ಹಿಡಿದು ಸರ್ಕಾರಿ ಶಾಲೆಯವರೆಗೆ, ಜಲಮಂಡಳಿ ಬಿಬಿಎಂಪಿ ಬಿಡಿಎ ಕಂದಾಯ ಇಲಾಖೆ ಎಲ್ಲವೂ ಸ್ತಬ್ಧವಾಗಲಿದೆ. ವೇತನ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ವ್ಯವಸ್ಥೆಗೆ ಆಗ್ರಹಿಸಿ ಸರ್ಕಾರಿ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದಾರೆ. ಒಟ್ಟು ಹತ್ತು ಲಕ್ಷ ಜನ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಪ್ರತಿಭಟನೆ ಕೈಬಿಡುವಂತೆ ಸಿಎಂ ಮನವಿಗೂ ಡೋಂಟ್ ಕೇರ್..!
ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು, ಸರ್ಕಾರಿ ನೌಕರರು ತಮ್ಮ ಮುಷ್ಕರದ ನಿರ್ಧಾರವನ್ನು ಕೈ ಬಿಡುವಂತೆ ನಿನ್ನೆ ( 28 ಫೆಬ್ರವರಿ, ಮಂಗಳವಾರ) ಸರ್ಕಾರಿ ನೌಕರರ  ಪದಾಧಿಕಾರಿಗಳ ಜೊತೆಗೆ ಸಾಲು ಸಾಲು ಸಭೆ ನಡೆಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. 

ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಾನು ವೇತನ ಆಯೋಗದ ಜೊತೆ ವರದಿ ತರಿಸಿ ಅದಷ್ಟು ಶೀಘ್ರವಾಗಿ ವೇತನ ಆಯೋಗ ಜಾರಿಯಾಗುವಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸರ್ಕಾರದ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿಲ್ಲದ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಶೇಕಡ 40ರಷ್ಟು ವೇತನ ಹೆಚ್ಚಳ ಸಾಧ್ಯವಿಲ್ಲ. ಬದಲಿಗೆ 7 ಅಥವಾ 8ರಷ್ಟು ಮಾತ್ರ ವೇತನ ಹೆಚ್ಚಿಸಲು ಸಾಧ್ಯ ಎಂದು ಸಿಎಂ ಹೇಳಿದ್ದು ಇದಕ್ಕೆ ನೌಕರರ ಸಂಘದ ಪದಾಧಿಕಾರಿಗಳು ಸುತಾರಂ ಒಪ್ಪದೆ ಸಭೆಯಿಂದ ಹೊರನಡೆದಿದ್ದಾರೆ. 

ಇದನ್ನೂ ಓದಿ- ನಂದಿ ಬೆಟ್ಟಕ್ಕೆ ರೋಪ್ ವೇ: 15 ದಿನಗಳಲ್ಲಿ ಚಾಲನೆ ನೀಡಲಿದ್ದಾರೆ ಸಿಎಂ ಬೊಮ್ಮಾಯಿ

ಸಭೆ ಬಳಿಕ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌ ಷಡಕ್ಷರಿ, ನೌಕರರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಸಿಎಂ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ಆದೇಶ ಹೊರಡಿಸಲು ಒಂದಷ್ಟು ಸಮಯ ಕೇಳಿದ್ದಾರೆ. ಹೀಗಾಗಿ ಸಂಘದ ಪದಾಧಿಕಾರಿಗಳ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು. 

ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿ.ಎಸ್‌ ಷಡಾಕ್ಷರಿ, ಪೂರ್ವ ನಿರ್ಧಾರದಂತೆ ಇಂದಿನಿಂದ ಮುಷ್ಕರ ನಡೆಯಲಿದೆ. ನಮ್ಮ ಮತ್ತು ಸರ್ಕಾರ ನಡುವೆ ಮಾತುಕತೆಗಳು ನಡೆಯುತ್ತಿರುತ್ತವೆ ಎಂದು ಹೇಳಿದರು.

ಇದನ್ನೂ ಓದಿ- Deve Gowda: ಅನಾರೋಗ್ಯ ಹಿನ್ನಲೆಯಲ್ಲಿ ಆಸ್ಪತ್ರೆ ಗೆ ದಾಖಲಾದ ದೇವೇಗೌಡ್ರು!

ಸರ್ಕಾರಿ ನೌಕರರ ವರ್ಸಸ್ ಸರ್ಕಾರದ ಹಗ್ಗ ಜಗ್ಗಾಟ ಜಟಾಪಟಿಯ ಎಫೆಕ್ಟ್ ಜನಸಾಮಾನ್ಯರ ಮೇಲೆ ನೇರವಾಗಿ ತಟ್ಟಲಿದೆ. ಚುನಾವಣೆ ಹೊಸ್ತಿಲಲ್ಲಿ ನೌಕರರ ರೋಷಾಗ್ನಿಯ ಜ್ವಾಲೆ ಸರ್ಕಾರದ ಪಾಲಿಗೆ ಸುಡುವ ಸೆರೆಗಿನ ಕೆಂಡದಂತಾಗಿದೆ.ರಾಜ್ಯ ಸರ್ಕಾರಿ ನೌಕರರ ಸ್ಯಾಲರಿ ಸಮರದಿಂದ ಜನ ಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಲಿದ್ದು ಇಂದಿನಿಂದ ಯಾವೆಲ್ಲಾ ಇಲಾಖೆಗಳು ಬಂದ್ ಆಗಲಿವೆ ಎಲ್ಲಿದೆ ವಿವರ:

ಯಾವ ಇಲಾಖೆಗಳು ಬಂದ್ ಆಗಲಿವೆ...?
- ವಿಧಾನಸೌಧದ ಎಲ್ಲಾ ಕಚೇರಿಗಳು ಬಂದ್
-ಸಚಿವಾಲಯದ ಎಲ್ಲಾ ಕಚೇರಿಗಳು
- ಬಿಬಿಎಂಪಿ 
- ತಾಲೂಕು ಕಚೇರಿ
- ಜಿಲ್ಲಾಧಿಕಾರಿ ಕಚೇರಿ
- ಗ್ರಾಮ ಪಂಚಾಯಿತಿ
-ಸರ್ಕಾರಿ ಶಾಲೆಗಳು, ಕಾಲೇಜು , ವಿವಿ
- ಸರ್ಕಾರಿ  ಆಸ್ಪತ್ರೆ 
- ಪ್ರಾಥಮಿಕ ಆರೋಗ್ಯ ಕೇಂದ್ರ
- ಪುರಸಭೆ
- ಕಂದಾಯ ಇಲಾಖೆ 
- ಸರ್ಕಾರಿ ಹಾಸ್ಟೆಲ್ ಗಳು 
- ತಾಲೂಕು ಕಚೇರಿ, ಜಿಲ್ಲಾ ಕಚೇರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News