ಅಬಕಾರಿ ಟೆಂಡರ್ ಅವ್ಯವಹಾರ… ಕಾಂಗ್ರೆಸ್ ವಿವರ ನೀಡಲಿ: ಸಿಎಂ ಬೊಮ್ಮಾಯಿ

ಶಾಸಕ ಪ್ರಿಯಾಂಕ ಖರ್ಗೆ ಆಡಿಯೋ ಬಿಡುಗಡೆ ಮಾಡಿರುವ ಬಗ್ಗೆ ಉತ್ತರಿಸಿ ಅವರ ಬಗ್ಗೆಯೇ ಸಾಕಷ್ಟು ಆರೋಪಗಳಿವೆ ಪಿ.ಎಸ್.ಐ ಪ್ರಕರಣದಲ್ಲಿ ಅವರ ಮೇಲೆ ಆರೋಪವಿದೆ. ವಿವರಗಳನ್ನು ನೀಡಲಿ. ಈಗ ಲೋಕಾಯುಕ್ತವಿದ್ದು, ದೂರು ನೀಡಿದರೆ, ತನಿಖೆಯಾಗುತ್ತದೆ ಎಂದರು.

Written by - Prashobh Devanahalli | Edited by - Bhavishya Shetty | Last Updated : Feb 28, 2023, 05:34 PM IST
    • ಶಾಸಕ ಪ್ರಿಯಾಂಕ ಖರ್ಗೆ ಆಡಿಯೋ ಬಿಡುಗಡೆ ಮಾಡಿರುವ ಬಗ್ಗೆ ಉತ್ತರಿಸಿ ಅವರ ಬಗ್ಗೆಯೇ ಸಾಕಷ್ಟು ಆರೋಪಗಳಿವೆ
    • ಪಿ.ಎಸ್.ಐ ಪ್ರಕರಣದಲ್ಲಿ ಅವರ ಮೇಲೆ ಆರೋಪವಿದೆ. ವಿವರಗಳನ್ನು ನೀಡಲಿ.
    • ಈಗ ಲೋಕಾಯುಕ್ತವಿದ್ದು, ದೂರು ನೀಡಿದರೆ, ತನಿಖೆಯಾಗುತ್ತದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಬಕಾರಿ ಟೆಂಡರ್ ಅವ್ಯವಹಾರ… ಕಾಂಗ್ರೆಸ್ ವಿವರ ನೀಡಲಿ: ಸಿಎಂ ಬೊಮ್ಮಾಯಿ title=

ಉತ್ತರ ಕನ್ನಡ (ಸಿದ್ಧಾಪುರ):  ಅಬಕಾರಿ ಟೆಂಡರ್ ನಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದ್ದು, ಈ ಬಗ್ಗೆ ವಿವರಗಳನ್ನು ನೀಡಲಿ. ಯಾವುದೇ ತನಿಖೆಗೆ ನಾವು ಸಿದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: ಟಾಲಿವುಡ್ ನಲ್ಲಿ ನಟಿ ಶ್ರೀಲೀಲಾಗೆ ಫುಲ್ ಅವಕಾಶ.. ಸೈಡ್ ಲೈನ್ ಆಗ್ತಾ ಇದ್ದಾರಾ ರಶ್ಮಿಕಾ ಮಂದಣ್ಣ..!

ಅವರು  ಇಂದು ಸಿದ್ಧಾಪುರ ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯ ವಿತರಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ  ನೀಡಿದರು. ಅಬಕಾರಿ ಟೆಂಡರ್ ನಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿರುವ ಬಗ್ಗೆ  ವಿವರ ಪ್ರತಿಕ್ರಿಯೆ ನೀಡಿ ವಿವರಗಳನ್ನು ನೀಡಲಿ. ಯಾವುದೇ ವಿವರಗಳನ್ನು ನೀಡದೇ ಆರೋಪ ಮಾಡಿದರೆ ಪ್ರಯೋಜನವಿಲ್ಲ ಎಂದರು.

ಲೋಕಾಯುಕ್ತಕ್ಕೆ ದೂರು ನೀಡಲಿ:

ಶಾಸಕ ಪ್ರಿಯಾಂಕ ಖರ್ಗೆ ಆಡಿಯೋ ಬಿಡುಗಡೆ ಮಾಡಿರುವ ಬಗ್ಗೆ ಉತ್ತರಿಸಿ ಅವರ ಬಗ್ಗೆಯೇ ಸಾಕಷ್ಟು ಆರೋಪಗಳಿವೆ ಪಿ.ಎಸ್.ಐ ಪ್ರಕರಣದಲ್ಲಿ ಅವರ ಮೇಲೆ ಆರೋಪವಿದೆ. ವಿವರಗಳನ್ನು ನೀಡಲಿ. ಈಗ ಲೋಕಾಯುಕ್ತವಿದ್ದು, ದೂರು ನೀಡಿದರೆ, ತನಿಖೆಯಾಗುತ್ತದೆ ಎಂದರು.

ಇಂದು ಸಂಜೆ ವೇತನ ಆಯೋಗ ಹಾಗೂ  ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಎಂದರು.

ಸರ್ಕಾರಿ ನೌಕರರು ನಮ್ಮವರು. ಅವರ ವೇತನ  ಪರಿಷ್ಕರಣೆಗೆ 7 ನೇ ವೇತನ ಆಯೋಗ ರಚನೆಯಾಗಿದೆ. ನೌಕರರು ಮಧ್ಯಂತರ ವರದಿಯನ್ನು ಪಡೆದು ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಬೇಡಿಕೆ ಇದೆ. ಆಯೋಗದ ಸಂಪರ್ಕದಲ್ಲಿ ರಾಜ್ಯ ಸರ್ಕಾರವಿದ್ದು, ಕೂಡಲೇ ಮಧ್ಯಂತರ ವರದಿ ನೀಡಲು ಕೋರಲಾಗಿದೆ ಎಂದರು.

ಇದನ್ನೂ ಓದಿ: WATCH : ದೈತ್ಯ ಹೆಬ್ಬಾವಿನ ಮೇಲೆ ಪುಟ್ಟ ಹುಡುಗಿಯ ಸವಾರಿ, ವಿಡಿಯೋ ವೈರಲ್

ವಿಧಾನಸಭೆಯಲ್ಲಿಯೂ ಈ ಬಗ್ಗೆ ಸ್ಪಷ್ಟಪಡಿಸಲಾಗಿದೆ.  ವೇತನ ಆಯೋಗ ರಚನೆಯಾದ ನಂತರ ಅದರ ಶಿಫಾರಸ್ಸುಗಳನ್ನು ಜಾರಿ ಮಾಡಬೇಕಾಗುತ್ತದೆ ಎಂದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News