ಸಾರಿಗೆ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ಸಾರಿಗೆ ಸಂಸ್ಥೆಗಳಲ್ಲಿ‌ ಕಳೆದ 8 ವರುಷಗಳಿಂದ ಅಂದರೆ 2016 ರಲ್ಲಿನ  ನೇಮಕಾತಿ ನಂತರ ಯಾವುದೇ ನೇಮಕಾತಿ ಆಗಿರಲಿಲ್ಲ.  ಈ ಸಂಬಂಧ 4  ಸಾರಿಗೆ ಸಂಸ್ಥೆಗಳಲ್ಲಿ 2016 ರಿಂದ ಇಲ್ಲಿಯವರೆಗೆ  ಸಿಬ್ಬಂದಿಗಳ ನಿವೃತ್ತಿ ಹಾಗೂ ಇತರೆ ಕಾರಣಗಳಿಂದ 13669

Written by - Prashobh Devanahalli | Edited by - Manjunath N | Last Updated : Oct 21, 2023, 09:00 PM IST
  • KKRTC ಅಲ್ಲಿ ಈಗಾಗಲೇ 1619 ಚಾಲನಾ ಸಿಬ್ಬಂದಿಗಳ ನೇಮಕಾತಿ‌ ಪ್ರಕ್ರಿಯೆ ‌ಪ್ರಾರಂಭವಾಗಿದ್ದು, ಚಾಲನಾ ಪರೀಕ್ಷೆ ನಡೆಯುತ್ತಿದ್ದು,
  • KKRTC ಯಲ್ಲಿ 300 ಕಂಡಕ್ಟರ್ ಗಳ ನೇಮಕಾತಿಗೆ ಅನುಮತಿ ದೊರಕಿದ್ದು, ಅಧಿಸೂಚನೆ ಹೊರಡಿಸುವ ಹಂತದಲ್ಲಿದೆ.
  • ಒಟ್ಟಾರೆ 8719 ಚಾಲನಾ‌ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಚಾಲನೆ ದೊರಕಿದೆ.
ಸಾರಿಗೆ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಗ್ರೀನ್ ಸಿಗ್ನಲ್ title=

ಬೆಂಗಳೂರು: ಸಾರಿಗೆ ಸಂಸ್ಥೆಗಳಲ್ಲಿ‌ ಕಳೆದ 8 ವರುಷಗಳಿಂದ ಅಂದರೆ 2016 ರಲ್ಲಿನ  ನೇಮಕಾತಿ ನಂತರ ಯಾವುದೇ ನೇಮಕಾತಿ ಆಗಿರಲಿಲ್ಲ.  ಈ ಸಂಬಂಧ 4  ಸಾರಿಗೆ ಸಂಸ್ಥೆಗಳಲ್ಲಿ 2016 ರಿಂದ ಇಲ್ಲಿಯವರೆಗೆ  ಸಿಬ್ಬಂದಿಗಳ ನಿವೃತ್ತಿ ಹಾಗೂ ಇತರೆ ಕಾರಣಗಳಿಂದ 13669
ಖಾಲಿ ಹುದ್ದೆಗಳಿದ್ದವು. 

ಈ ಬಗ್ಗೆ 13000 ಚಾಲನಾ  ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸಾರಿಗೆ ಸಂಸ್ಥೆಗಳಿಗೆ  ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು.ಅದರಂತೆ ಮೊದಲನೇ ಹಂತದಲ್ಲಿ 6500 ಚಾಲನಾ ಸಿಬ್ಬಂದಿಗಳಿಗೆ ಹಾಗೂ 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರದಿಂದ ಅನುಮತಿ ದೊರಕಿದೆ.  ಸಂಸ್ಥೆವಾರು ನೇಮಕಾತಿ ವಿವರ ಈ‌ ಕೆಳಕಂಡಂತಿದೆ.

KSRTC: ಡ್ರೈವರ್ ಕಮ್ ಕಂಡಕ್ಟರ್ : 2000
 ತಾಂತ್ರಿಕ ಸಿಬ್ಬಂದಿ : 300

NWKRTC :  ಡ್ರೈವರ್ ಕಮ್ ಕಂಡಕ್ಟರ್ 2000

BMTC : ಕಂಡಕ್ಟರ್ 2500

KKRTC ಅಲ್ಲಿ ಈಗಾಗಲೇ 1619 ಚಾಲನಾ ಸಿಬ್ಬಂದಿಗಳ ನೇಮಕಾತಿ‌ ಪ್ರಕ್ರಿಯೆ  ‌ಪ್ರಾರಂಭವಾಗಿದ್ದು, ಚಾಲನಾ ಪರೀಕ್ಷೆ ನಡೆಯುತ್ತಿದ್ದು, ಜನವರಿ 2024 ರ ಕೊನೆಯಲ್ಲಿ ಅಂತಿಮ ಆಯ್ಕೆಪಟ್ಟಿ ಬಿಡುಗಡೆಗೊಳಿಸಲಾಗುವುದು ಹಾಗೂ KKRTC ಯಲ್ಲಿ 300 ಕಂಡಕ್ಟರ್ ಗಳ ನೇಮಕಾತಿಗೆ ಅನುಮತಿ ದೊರಕಿದ್ದು, ಅಧಿಸೂಚನೆ ಹೊರಡಿಸುವ ಹಂತದಲ್ಲಿದೆ. ಒಟ್ಟಾರೆ 8719 ಚಾಲನಾ‌ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಚಾಲನೆ ದೊರಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News