ಶ್ರೀಶೈಲದಲ್ಲಿ ಕನ್ನಡಿಗರ ಸುರಕ್ಷತೆ; ಆಂಧ್ರ ಅಧಿಕಾರಿಗಳ ಜೊತೆ ಎಚ್‍ಡಿಕೆ ಮಾತುಕತೆ

ಶ್ರೀಶೈಲ ನಮ್ಮೆಲ್ಲರ ಪಾಲಿನ ಶ್ರದ್ಧಾಕೇಂದ್ರ. ಅಲ್ಲಿ ನಡೆದ ಅಹಿತಕರ ಘಟನೆಯಿಂದ ಭಗವಂತನ ದರ್ಶನಕ್ಕೆ, ಭಕ್ತರಿಗೆ ಅಡ್ಡಿಯಾಗುವುದು ಬೇಡವೆಂದು ಎಚ್‍ಡಿಕೆ ಹೇಳಿದ್ದಾರೆ.

Written by - Zee Kannada News Desk | Last Updated : Apr 1, 2022, 09:38 PM IST
  • ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಶೈಲದಲ್ಲಿ ಅಹಿತಕರ ಘಟನೆ ನಡೆದಿರುವ ಹಿನ್ನೆಲೆ
  • ಕನ್ನಡಿಗರ ಸುರಕ್ಷತೆ ಬಗ್ಗೆ ಆಂಧ್ರಪ್ರದೇಶದ ಅಧಿಕಾರಿಗಳ ಜೊತೆಗೆ ಕುಮಾರಸ್ವಾಮಿ ಮಾತುಕತೆ
  • ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವ ಕನ್ನಡಿಗರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ
ಶ್ರೀಶೈಲದಲ್ಲಿ ಕನ್ನಡಿಗರ ಸುರಕ್ಷತೆ; ಆಂಧ್ರ ಅಧಿಕಾರಿಗಳ ಜೊತೆ ಎಚ್‍ಡಿಕೆ ಮಾತುಕತೆ    title=
ಕನ್ನಡಿಗರ ರಕ್ಷಣೆಗೆ ಕುಮಾರಸ್ವಾಮಿ ಮನವಿ

ಬೆಂಗಳೂರು: ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಶೈಲ(Srisailam)ದಲ್ಲಿ ನಡೆದಿರುವ ಅಹಿತಕರ ಘಟನೆ ಹಿನ್ನೆಲೆ ಕನ್ನಡಿಗರ ಸುರಕ್ಷತೆ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಆಂಧ್ರಪ್ರದೇಶದ ಹಿರಿಯ ಅಧಿಕಾರಿಗಳ ಜೊತೆ ಶುಕ್ರವಾರ ಮಾತುಕತೆ ನಡೆಸಿದ್ದಾರೆ. ಕರ್ನೂಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆಗೆ ಮಾತನಾಡಿರುವ ಎಚ್‍ಡಿಕೆ ಕನ್ನಡಿಗರಿಗೆ ಸೂಕ್ತ ಭದ್ರತೆ(Kannadigas Safety) ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ‘ಶ್ರೀ ಮಲ್ಲಿಕಾರ್ಜುನನ ಪುಣ್ಯಕ್ಷೇತ್ರ(Srisaila Mallikarjuna Temple), ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದು ಶ್ರೀಶೈಲ. ನಮ್ಮೆಲ್ಲರ ಪಾಲಿನ ಶ್ರದ್ಧಾಕೇಂದ್ರ. ಅಲ್ಲಿ ನಡೆದ ಸಣ್ಣ ಅಹಿತಕರ ಘಟನೆಯಿಂದ ಭಗವಂತನ ದರ್ಶನಕ್ಕೆ, ಭಕ್ತರಿಗೆ ಅಡ್ಡಿಯಾಗುವುದು ಬೇಡ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಸಿಬಿ ಕೆಲಸಕ್ಕೆ ನೋ ಸಾಥ್: ಭ್ರಷ್ಟ ಅಧಿಕಾರಿಗಳ ಬೆನ್ನಿಗೆ ನಿಲ್ತಾ ರಾಜ್ಯ ಸರ್ಕಾರ..!?

‘ಆಂಧ್ರ, ತೆಲಂಗಾಣ, ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶದ ಪ್ರತಿ ಭಕ್ತನೂ ಶ್ರೀ ಮಲ್ಲಿಕಾರ್ಜುನ(Srisaila Mallikarjuna)ನ ದರ್ಶನಕ್ಕೆ ತವಕಿಸುತ್ತಾನೆ. ಅಂಥ ಪಾವನ ಕ್ಷೇತ್ರದಲ್ಲಿ ಹಿಂಸೆ ಬೇಡ. ಭಗವಂತನ ಸನ್ನಿಧಾನದಲ್ಲಿ ಭಕ್ತಿ ಬಿಟ್ಟರೆ ಬೇರೇನೂ ಅಗತ್ಯವಿಲ್ಲ. ನಾಳೆ ಬೆಳಗ್ಗೆ ಯುಗಾದಿ ಹಬ್ಬ. ತಲೆ ತಲಾಂತರಗಳಿಂದ ಅಣ್ಣ-ತಮ್ಮಂದಿರಂತೆ ಬಾಳಿ ಬದುಕುತ್ತಿರುವ ಕನ್ನಡಿಗರು, ತೆಲುಗರು ಅಷ್ಟೇ ಅಲ್ಲ, ಎಲ್ಲ ಭಕ್ತರು ಶ್ರೀಶೈಲ ಮಲ್ಲಿಕಾರ್ಜುನನ್ನು ದರ್ಶನ ಮಾಡಬೇಕು ಎನ್ನುವುದು ನನ್ನ ಕಾಳಜಿ’ ಎಂದು ಎಚ್‍ಡಿಕೆ ಟ್ವೀಟ್ ಮಾಡಿದ್ದಾರೆ.

‘ನಾನು ಈಗಾಗಲೇ ಕರ್ನೂಲು ಪೋಲಿಸ್ ಜಿಲ್ಲಾ ವರಿಷ್ಠಾಧಿಕಾರಿ(Andhra Officials) ಅವರೊಂದಿಗೆ ಮಾತನಾಡಿದ್ದೇನೆ. ಅವರು ಸುರಕ್ಷತೆಯ ಎಲ್ಲ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಕನ್ನಡಿಗ ಭಕ್ತರೆಲ್ಲರೂ ದೇವರ ದರ್ಶನ ಮಾಡಿಕೊಳ್ಳಬಹುದು. ಆಂಧ್ರ ಪ್ರದೇಶದ ವೈ.ಎಸ್.ಜಗನ್ಮೋಹನ್ ರೆಡ್ಡಿ(YS Jagan Mohan Reddy) ಸರ್ಕಾರ ಕನ್ನಡಿಗರಿಗೆ ಭದ್ರತೆ ನೀಡುತ್ತದೆ ಎಂಬ ವಿಶ್ವಾಸವಿದೆ. ಒಂದು ವೇಳೆ ಏನಾದರೂ ಸಮಸ್ಯೆಯಾದರೆ ನನ್ನ ಗಮನಕ್ಕೆ ತನ್ನಿ ಎಂದು ನನ್ನ ಭಕ್ತ ಬಂಧುಗಳಲ್ಲಿ ವಿನಂತಿಸುತ್ತೇನೆ’ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಗೆದ್ದ ಎಂಎಲ್ಎ ಗಳ ಜೊತೆ ರಾಹುಲ್ ಗಾಂಧಿ ನಡೆಸಿದ ಚರ್ಚೆ ಏನು ಗೊತ್ತೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News