ಜನಾರ್ಧನರೆಡ್ಡಿ, ಅಲಿಖಾನ್ ವಿರುದ್ಧ ತನಿಖೆ ನಡೆಸದಿರಲು ಸಿಸಿಬಿಗೆ ಹೈಕೋರ್ಟ್ ಸೂಚನೆ

ಮಾಜಿ ಸಚಿವ ಜನಾರ್ಧನ ರೆಡ್ಡಿ ಮತ್ತು ಅವರ ಆಪ್ತ ಅಲಿಖಾನ್ ಅವರ ವಿರುದ್ಧ ಬಲವಂತ ತನಿಖೆ ನಡೆಸದಂತೆ ಹೈಕೋರ್ಟ್ ಮಂಗಳವಾರ ಸಿಸಿಬಿಗೆ ಸೂಚನೆ ನೀಡಿದೆ.

Last Updated : Nov 27, 2018, 06:07 PM IST
ಜನಾರ್ಧನರೆಡ್ಡಿ, ಅಲಿಖಾನ್ ವಿರುದ್ಧ ತನಿಖೆ ನಡೆಸದಿರಲು ಸಿಸಿಬಿಗೆ ಹೈಕೋರ್ಟ್ ಸೂಚನೆ title=

ಬೆಂಗಳೂರು: ಆ್ಯಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಮತ್ತು ಅವರ ಆಪ್ತ ಅಲಿಖಾನ್ ಅವರ ವಿರುದ್ಧ ಬಲವಂತ ತನಿಖೆ ನಡೆಸದಂತೆ ಹೈಕೋರ್ಟ್ ಮಂಗಳವಾರ ಸಿಸಿಬಿಗೆ ಸೂಚನೆ ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆಯನ್ನು ತಡೆಹಿಡಿಯುವಂತೆ ಜನಾರ್ಧನ್ ರೆಡ್ಡಿ ಮತ್ತು ಅಲಿಖಾನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ, ಮುಂದಿನ ವಿಚಾರಣೆವರೆಗೂ ಜನಾರ್ದನ ರೆಡ್ಡಿ ಹಾಗೂ ಅಲಿಖಾನ್​ ವಿರುದ್ಧ ತನಿಖೆ ನಡೆಸದಿರಲು ಸಿಸಿಬಿಗೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 4 ಕ್ಕೆ ಮುಂದೂಡಿದೆ.

ಇನ್ನು, ಜನಾರ್ಧನರೆಡ್ಡಿ ಆಪ್ತ ಅಲಿಖಾನ್ ಅವರಿಗೆ 1ನೇ ಎಸಿಎಂಎಂ ಕೋರ್ಟ್ ಈಗಾಗಲೇ ನವೆಂಬರ್ 29ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಆರೋಪಿ ಮೇಲೆ ಯಾವುದೇ ದೌರ್ಜನ್ಯ ಎಸಗುವಂತಿಲ್ಲ ಮತ್ತು ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು ಎಂದು ಸಿಸಿಬಿ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.

Trending News