Indira Canteens: ಶೀಘ್ರವೇ ಇಂದಿರಾ ಕ್ಯಾಂಟೀನ್ಗಳಲ್ಲಿ ಅತ್ಯುತ್ತಮ ಆಹಾರ- ಕಾಂಗ್ರೆಸ್

Indira Canteens: ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಜನಪ್ರಿಯತೆ ಸಾಧಿಸಿದ್ದ ಹಿನ್ನೆಲೆ 2017ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯನವರ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು.

Written by - Zee Kannada News Desk | Last Updated : May 22, 2023, 08:16 PM IST
  • ಕಾಂಗ್ರೆಸ್ ಸರ್ಕಾರ ಕಾಯಕಯೋಗಿ ಬಸವಣ್ಣನವರ ದಾಸೋಹ ತತ್ವದಲ್ಲಿ ನಂಬಿಕೆ ಇಟ್ಟಿದೆ
  • ಕಾಂಗ್ರೆಸ್ ಸರ್ಕಾರ ಬಡಜನರ 'ಇಂದಿರಾ ಕ್ಯಾಂಟೀನ್‌'ಗಳನ್ನು ಪುನಶ್ಚೇತನಗೊಳಿಸಲಿದೆ
  • ಬಿಜೆಪಿ ಸರ್ಕಾರದ ಅವಾಂತರ ಸರಿಪಡಿಸಿ ಶೀಘ್ರವೇ ಇಂದಿರಾ ಕ್ಯಾಂಟೀನ್‌ಗಳಲ್ಲಿ ಅತ್ಯುತ್ತಮ ಆಹಾರ
Indira Canteens: ಶೀಘ್ರವೇ ಇಂದಿರಾ ಕ್ಯಾಂಟೀನ್ಗಳಲ್ಲಿ ಅತ್ಯುತ್ತಮ ಆಹಾರ- ಕಾಂಗ್ರೆಸ್ title=
'ಇಂದಿರಾ ಕ್ಯಾಂಟೀನ್‌' ಪುನಶ್ಚೇತನ!

ಬೆಂಗಳೂರು:  ಕಾಯಕಯೋಗಿ ಬಸವಣ್ಣನವರ ದಾಸೋಹ ತತ್ವದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಸರ್ಕಾರ ಬಡಜನರ 'ಇಂದಿರಾ ಕ್ಯಾಂಟೀನ್‌'ಗಳನ್ನು ಪುನಶ್ಚೇತನಗೊಳಿಸಲಿದೆ ಎಂದು ಹೇಳಿದೆ.

#ಜನಪರಕಾಂಗ್ರೆಸ್ ಹ್ಯಾಶ್‍ಟ್ಯಾಗ್ ಬಳಸಿ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಸರ್ಕಾರ ಮಾಡಿದ ಅವಾಂತರಗಳನ್ನು ಸರಿಪಡಿಸಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್‌ಗಳಲ್ಲಿ ಅತ್ಯುತ್ತಮ ಆಹಾರ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದೆ.

ಇದನ್ನೂ ಓದಿ: Darshan Puttannaiah: ದರ್ಶನ್ ಪುಟ್ಟಣ್ಣಯ್ಯ ಕ್ಷೇತ್ರದ ಮೇಲುಕೋಟೆಯಲ್ಲಿ ಹೆಚ್ಚಾಯ್ತು ದ್ವೇಷದ ರಾಜಕೀಯ.!

2017ರಲ್ಲಿ ಇಂದಿರಾ ಕ್ಯಾಂಟೀನ್ ಆರಂಭ

ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಜನಪ್ರಿಯತೆ ಸಾಧಿಸಿದ್ದ ಹಿನ್ನೆಲೆ 2017ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯನವರ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಕಡಿಮೆ ದರದಲ್ಲಿ ಆಹಾರ ನೀಡುವ ಇಂದಿರಾ ಕ್ಯಾಂಟೀನ್ ಸಖತ್ ಜನಪ್ರಿಯತೆ ಗಳಿಸಿತ್ತು. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ 175 ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿತ್ತು. ರಾಜ್ಯದ ಹಲವಾರು ಜಿಲ್ಲಾ ಕೇಂದ್ರಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು.  

ಇಂದಿರಾ ಕ್ಯಾಂಟೀನ್‌ ಜನಪ್ರಿಯವಾಗಿದ್ದರೂ ಹಲವು ವಿವಾದಗಳು ಕೇಳಿಬಂದಿದ್ದವು. ಹಲವೆಡೆ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿದ್ದರಿಂದ ಈ ವಿವಾದ ಮತ್ತಷ್ಟು ದೊಡ್ಡದಾಯಿತು. 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಂದಿರಾ ಕ್ಯಾಂಟೀನ್‌ಗಳ ಕಾರ್ಯ ನಿರ್ವಹಣೆಯಲ್ಲಿ ಹಲವು ತೊಡಕುಗಳು ಎದುರಾದವು. ಗುತ್ತಿಗೆದಾರರಿಗೆ ಬಿಲ್ ಪಾವತಿ ಸೂಕ್ತ ಸಮಯಕ್ಕೆ ಆಗುತ್ತಿಲ್ಲವೆಂದ ಆರೋಪ ಕೂಡ ಕೇಳಿ ಬಂತು. ಅನುದಾನ ನೀಡದ ಕಾರಣ ಕೆಲವು ಇಂದಿರಾ ಕ್ಯಾಂಟೀನ್‌ ಸ್ಥಗಿತಗೊಂಡಿದ್ದವು. ಸಮರ್ಪಕ ನಿರ್ವಹಣೆ ಕೊರತೆಯಿಂದ ಇಂದಿರಾ ಕ್ಯಾಂಟೀನ್‍ಗಳು ಸೊರಗಿದ್ದವು. ಇದೀಗ ಮತ್ತೆ ಇವುಗಳಿಗೆ ಪುನಶ್ಚೇತನ ನೀಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: Basavaraja Bommai: ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯುವತಿ ಸಾವು: ಬಸವರಾಜ ಬೊಮ್ಮಾಯಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News