Darshan Puttannaiah: ದರ್ಶನ್ ಪುಟ್ಟಣ್ಣಯ್ಯ ಕ್ಷೇತ್ರದ ಮೇಲುಕೋಟೆಯಲ್ಲಿ ಹೆಚ್ಚಾಯ್ತು ದ್ವೇಷದ ರಾಜಕೀಯ.!

Atrocities By JDS On Farmers Association Workers: ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆಯಿಂದ ಕೇತ್ರದಿಂದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ದಿಸಿ ಗೆಲುವು ಸಾಧಿಸಿದ್ದರು. ಅದರ ಬೆನ್ನಲೇ ಇದೀಗ ಈ ಕ್ಷೇತ್ರದಲ್ಲಿ ದ್ವೇಷದ ರಾಜಕೀಯ ಹೆಚ್ಚಾಗುತ್ತಿದೆ.   

Written by - Zee Kannada News Desk | Last Updated : May 22, 2023, 10:25 AM IST
  • ದರ್ಶನ್ ಪುಟ್ಟಣ್ಣಯ್ಯ ಗೆಲುವಿನ‌ ಬಳಿಕ ರೈತ ಸಂಘದ ಕಾರ್ಯಕರ್ತರ ಮೇಲೆ ಜೆಡಿಎಸ್ ನವರ ದೌರ್ಜನ್ಯ
  • ರೈತ ಸಂಘದ ಗುತ್ತಿಗೆದಾರನಿಗೆ ಸೇರಿದ ಸಿಮೆಂಟ್ ಮೂಟೆ ಗಳಿಗೆ ಬೆಂಕಿ
  • ರೈತ ಸಂಘದ ಕಾರ್ಯಕರ್ತನ ಅಡಿಕೆ ತೋಟ ನಾಶ
Darshan Puttannaiah: ದರ್ಶನ್ ಪುಟ್ಟಣ್ಣಯ್ಯ ಕ್ಷೇತ್ರದ ಮೇಲುಕೋಟೆಯಲ್ಲಿ ಹೆಚ್ಚಾಯ್ತು ದ್ವೇಷದ ರಾಜಕೀಯ.! title=

ಮಂಡ್ಯ: ದರ್ಶನ್ ಪುಟ್ಟಣ್ಣಯ್ಯ ಇತ್ತಿಚೀನ ಚುನಾವಣೆಯಲ್ಲಿ ರೈತರನ್ನು ಪ್ರತಿನಿಧಿಸುವ ಕರ್ನಾಟಕ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ ಮೇಲುಕೋಟೆಯಿಂದ ಕೇತ್ರದಿಂದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ದಿಸಿ ಗೆಲುವು ಸಾಧಿಸಿದ್ದರು.

ಈ ಹಿಂದೆ ರಾಜಕೀಯ ಕ್ಷೇತ್ರಕ್ಕೂ ಬರುವ ಮೊದಲೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಆದರೆ ಇದೀಗ ಅವರು ಚುನಾವಣೆ ಬಹುಮತ ಪಡೆದು ಶಾಸಕ ಪಟ್ಟ ಬೆನ್ನಲೇ  ಮೇಲುಕೋಟೆ ಕ್ಷೇತ್ರದಲ್ಲಿ ದ್ವೇಷದ ರಾಜಕೀಯ ಹೆಚ್ಚಾಗುತ್ತಿದೆ. 

ಇದನ್ನೂ ಓದಿ: ಇನ್ಮುಂದೆ ಹಾರ ತುರಾಯಿ ಬೇಡ, ಬದಲಾಗಿ ಪುಸ್ತಕ ನೀಡಿ ಎಂದ ಸಿಎಂ ಸಿದ್ದರಾಮಯ್ಯ

ದರ್ಶನ್ ಪುಟ್ಟಣ್ಣಯ್ಯ ಗೆಲುವಿನ‌ ಬಳಿಕ  ರೈತ ಸಂಘದ ಕಾರ್ಯಕರ್ತರ  ಮೇಲೆ ಜೆಡಿಎಸ್ ನವರ  ದೌರ್ಜನ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.  ದರ್ಶನ್ ಪುಟ್ಟಣ್ಣಯ್ಯ  ಕ್ಷೇತ್ರದ ಮಾಣಿಕನಹಳ್ಳಿ ಕೆಲವು ದಿನಗಳ ಹಿಂದೆ ಕಿಡಿಗೇಡಿಗಳು ರೈತ ಸಂಘದ ಗುತ್ತಿಗೆದಾರನಿಗೆ ಸೇರಿದ ಸಿಮೆಂಟ್‌ ಮೂಟೆಗಳಿಗೆ ಬೆಂಕಿ ಹಚ್ಚಿದ್ದರು.

ಇಂದು ಮತ್ತೆ  ಕ್ಷೇತ್ರದ ಜವನಹಳ್ಳಿಯಲ್ಲಿ ಜೆಡಿಎಸ್ ಪಕ್ಷದ ಕಿಡಿಗೇಡಿಗಳು,  ರೈತ ಸಂಘದ ಕಾರ್ಯಕರ್ತನ ಸಾಲು ಸಾಲು ಅಡಿಕೆ ತೋಟ ಕಡಿದು ಹಾಕಲಾಗಿದೆ ಎಂದು ರೈತ ಸಂಘದ ಕಾರ್ಯರ್ತರು ಆರೋಪಿಸಿದ್ದಾರೆ. 

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮಳೆ ನೀರಿಗೆ ಮುಳುಗಿದ ಕಾರು: ಕಾರಿನಲ್ಲಿದ್ದ ಪುಟ್ಟ ಕಂದಮ್ಮನಿಗಾಗಿ ಶೋಧ

ರೈತ ಸಂಘದ ಕಾರ್ಯಕರ್ತನಾಗಿರುವ ರೈತ ರೈತ ರಾಮಣ್ಣ ಎಂಬುವರ ಅಡಿಕೆ ತೋಟ ಎಂಬುದು ತಿಳಿದು ಬಂದಿದೆ. ಘಟನೆ ಸಂಬಂಧ ಸ್ಥಳಕ್ಕೆ ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ಪರಿಶೀಲನೆ ನಡೆಸಿ, ಯಾರು ಕೂಡ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡದಂತೆ ಮನವಿ ಮಾಡಿದ್ದಾರೆ. ಸದ್ಯ ರೈತ ರಾಮಣ್ಣಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಧೈರ್ಯ ತುಂಬಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News