ಹಂಪಿ ಉತ್ಸವಕ್ಕೆ ಹಣ ನೀಡದ ಕಾಂಗ್ರೆಸ್ ಸರ್ಕಾರ!: ಬಿಜೆಪಿ ಆಕ್ರೋಶ

Hampi Utsav: ಬರಗಾಲದ ನೆಪವೊಡ್ಡುವ ಕಾಂಗ್ರೆಸ್‌ ಸರ್ಕಾರ ಈ ಮೇಲಿನ ಹಳವಂಡಗಳಿಗೆ ಬ್ರೇಕ್‌ ಹಾಕಿದರೆ ಸಾಕು, ಹಂಪಿ ಉತ್ಸವಕ್ಕೆ ಬೇಕಾದ ಎಲ್ಲಾ ಸಂಪನ್ಮೂಲಗಳನ್ನೂ ಕ್ರೋಢೀಕರಿಸಲು ಸಾಧ್ಯವಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Puttaraj K Alur | Last Updated : Sep 14, 2023, 04:46 PM IST
  • ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆ ಈ ವರ್ಷ ವಿಶ್ವವಿಖ್ಯಾತ ಹಂಪಿ ಉತ್ಸವ ನಡೆಸದಿರಲು ನಿರ್ಧಾರ
  • ಕರ್ನಾಟಕದ ಏಳಿಗೆಯಲ್ಲಿ ಯಾವುದೇ ಪಾತ್ರ ವಹಿಸದ ರಾಜೀವ್‌ ಗಾಂಧಿ ಪ್ರತಿಮೆ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರದ ಬಳಿ ಹಣವಿದೆ
  • ಪರಂಪರೆಯಲ್ಲೇ ಇಲ್ಲದ ಮಹಿಷ ದಸರಾ ಎಂಬ ಅಸಂಬದ್ಧ ಆಚರಣೆಗೆ ರಾಜ್ಯ ಸರ್ಕಾರದ ಬಳಿ ಸಂಪನ್ಮೂಲವಿದೆ
ಹಂಪಿ ಉತ್ಸವಕ್ಕೆ ಹಣ ನೀಡದ ಕಾಂಗ್ರೆಸ್ ಸರ್ಕಾರ!: ಬಿಜೆಪಿ ಆಕ್ರೋಶ title=
ಹಂಪಿ ಉತ್ಸವ ನಡೆಸದಿರಲು ನಿರ್ಧಾರ!

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆ ಈ ವರ್ಷ ವಿಶ್ವವಿಖ್ಯಾತ ಹಂಪಿ ಉತ್ಸವ ನಡೆಸದಿರಲು ನಿರ್ಧರಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2024ರ ಜನವರಿ ಅಥವಾ ಫೆಬ್ರವರಿಯಲ್ಲಿ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ.

ಬರದ ನೆಪವೊಡ್ಡಿ ಈ ವರ್ಷ ಹಂಪಿ ಉತ್ಸವಕ್ಕೆ ಹಣ ನೀಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಕರ್ನಾಟಕದ ವೈಭವ, ಸಂಸ್ಕೃತಿ, ಪರಂಪರೆಯ ಹಿರಿಮೆಯಾದ ಹಂಪಿ ಉತ್ಸವ ನಡೆಸಲು ಸಿದ್ದರಾಮಯ್ಯರ ಸರ್ಕಾರ ಹಣವಿಲ್ಲವೆಂಬ ಸಬೂಬು ಹೇಳುತ್ತಿದೆ, ಆದರೆ, ಕರ್ನಾಟಕದ ಏಳಿಗೆಯಲ್ಲಿ ಯಾವುದೇ ಪಾತ್ರ ವಹಿಸದ ರಾಜೀವ್‌ ಗಾಂಧಿ ಪ್ರತಿಮೆ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರದ ಬಳಿ ಹಣವಿದೆ. ಪರಂಪರೆಯಲ್ಲೇ ಇಲ್ಲದ ಮಹಿಷ ದಸರಾ ಎಂಬ ಅಸಂಬದ್ಧ ಆಚರಣೆಗೆ ರಾಜ್ಯ ಸರ್ಕಾರದ ಬಳಿ ಸಂಪನ್ಮೂಲವಿದೆ’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಉದ್ಯಮಿಗೆ ವಂಚನೆ: ಸಿಸಿಬಿ ವಶದಲ್ಲಿ ಚೈತ್ರಾ ಕುಂದಾಪುರ

‘ಮಂತ್ರಿಗಳಿಗೆ ಹೊಸ ಐಷಾರಾಮಿ ಕಾರು ಖರೀದಿಗೆ ಸರ್ಕಾರದ ಬಳಿ ದುಡ್ಡಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ತುಷ್ಟೀಕರಣದ ಯೋಜನೆಗಳಿಗೆ ಬೊಕ್ಕಸದಲ್ಲಿ ಹಣವಿದೆ. ತೆರಿಗೆದಾರರ ಹಣದಲ್ಲಿ ರಾಜ್ಯದ ತುಂಬಾ ಬಸ್ಸುಗಳಲ್ಲಿ ಫೋಟೋ ಹಾಕಿಸಿಕೊಳ್ಳಲು ಬರಗಾಲದ ಬಾಧೆಯಿಲ್ಲ. ಬರಗಾಲದ ನೆಪವೊಡ್ಡುವ ಕಾಂಗ್ರೆಸ್‌ ಸರ್ಕಾರ ಈ ಮೇಲಿನ ಹಳವಂಡಗಳಿಗೆ ಬ್ರೇಕ್‌ ಹಾಕಿದರೆ ಸಾಕು, ಹಂಪಿ ಉತ್ಸವಕ್ಕೆ ಬೇಕಾದ ಎಲ್ಲಾ ಸಂಪನ್ಮೂಲಗಳನ್ನೂ ಕ್ರೋಢೀಕರಿಸಲು ಸಾಧ್ಯವಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಗೃಹಿಣಿಯರನ್ನು ಬೀದಿಗೆ ತಂದು ನಿಲ್ಲಿಸುವ ಯೋಜನೆ!

‘ಗ್ಯಾರಂಟಿಗಳ ಆಸೆ ತೋರಿಸಿ ಅವುಗಳನ್ನು ವಾಸ್ತವಿಕವಾಗಿ ಅನುಷ್ಠಾನ ಮಾಡುವಲ್ಲೂ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ಈಗ ದುಡಿಯುವ ಸ್ವಾಭಿಮಾನಿ ಸ್ತ್ರೀಯರನ್ನು ಬೀದಿಯಲ್ಲಿ ನಿಲ್ಲುವಂತೆ ಮಾಡಿದೆ‌. ದುಡಿಮೆ ಬಿಟ್ಟು ಮುಂಜಾನೆಯಿಂದ ಸಂಜೆವರೆಗೂ ಕ್ಯೂನಲ್ಲಿ ಮಹಿಳೆಯರು ನಿಂತರೂ 5 ಕೆಜಿ ಅಕ್ಕಿಯ ಹಣವಾಗಲಿ, ಗೃಹಲಕ್ಷ್ಮಿಯ ಹಣವಾಗಲಿ ಸಿಗುತ್ತಿಲ್ಲ. ಗ್ಯಾರಂಟಿಗಳೆಂದರೆ ಮನೆ ಬಾಗಿಲಿಗೆ ಬರುವ ಯೋಜನೆಗಳಲ್ಲ. ಮನೆಯಲ್ಲಿರುವ ಗೃಹಿಣಿಯರನ್ನು ಬೀದಿಗೆ ತಂದು ನಿಲ್ಲಿಸುವ ಯೋಜನೆಗಳಾಗಿವೆ..!’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ರಾಜ್ಯದ ರೈತರನ್ನು ಸಂಕಷ್ಟಕ್ಕೆ ದೂಡಿ ತಮಿಳುನಾಡಿಗೆ ನೀರು ಹಾರಿಸಲು ಸಾಧ್ಯವಿಲ್ಲ: ಕೇಂದ್ರ ಸಚಿವರಿಗೆ ಸಿಎಂ ಪತ್ರ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News