ಸುದೀರ್ಘ ವರ್ಷಗಳ‌ ಬೇಡಿಕೆ : ಬಸವ ಜನ್ಮಭೂಮಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ

Basava Janmabhoomi  : ಸರ್ಕಾರ ಬಸವಣ್ಣನವರ ಜನ್ಮಭೂಮಿ ಅಭಿವೃದ್ಧಿಗಾಗಿ ಬಸವನ ಬಾಗೇವಾಡಿ ಪ್ರಾಧಿಕಾರ ಘೋಷಣೆ ಮಾಡಿದೆ. ಇದು ಬಸವನಾಡಿನ ಬಸವಾಭಿಮಾನಿಗಳು, ಶರಣರಲ್ಲಿ ಸಂತಸ ಮೂಡಿಸಿದೆ.   

Written by - Zee Kannada News Desk | Last Updated : Feb 17, 2024, 02:16 AM IST
  • 25 ವರ್ಷಗಳ ಸುದೀರ್ಘ ಬೇಡಿಕೆಯಾಗಿತ್ತು. ಬಸವಣ್ಣನವರ ಜನ್ಮಭೂಮಿ ಅಭಿವೃದ್ಧಿಗೆ ಬಸವನಾಡಿನ ಜನತೆ ಸರ್ಕಾರಗಳನ್ನ ಒತ್ತಾಯಿಸುತ್ತಲೆ ಬಂದಿದ್ದರು.
  • ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಬಸವ ಜನ್ಮ ಭೂಮಿ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಘೋಷಣೆಯಾಗಿದೆ
  • 25 ವರ್ಷಗಳ ಬಳಿಕ ಬಸವಾಭಿಮಾನಿಗಳ ಬೇಡಿಕೆ ಇಡೇರಿದೆ.
ಸುದೀರ್ಘ ವರ್ಷಗಳ‌ ಬೇಡಿಕೆ : ಬಸವ ಜನ್ಮಭೂಮಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ title=

Separate authority for development of Basava Janmabhoomi : 25 ವರ್ಷಗಳ ಸುದೀರ್ಘ ಬೇಡಿಕೆಯಾಗಿತ್ತು. ಬಸವಣ್ಣನವರ ಜನ್ಮಭೂಮಿ ಅಭಿವೃದ್ಧಿಗೆ ಬಸವನಾಡಿನ ಜನತೆ ಸರ್ಕಾರಗಳನ್ನ ಒತ್ತಾಯಿಸುತ್ತಲೆ ಬಂದಿದ್ದರು. ಆದ್ರಿಗ 25 ವರ್ಷಗಳ ಹಳೆಯ ಬೇಡಿಕೆ ಈಗ ಇಡೇರಿದೆ. ಕೊನೆಗು ಸರ್ಕಾರ ಬಸವಣ್ಣನವರ ಜನ್ಮಭೂಮಿ ಅಭಿವೃದ್ಧಿಗಾಗಿ ಬಸವನ ಬಾಗೇವಾಡಿ ಪ್ರಾಧಿಕಾರ ಘೋಷಣೆ ಮಾಡಿದೆ. ಇದು ಬಸವನಾಡಿನ ಬಸವಾಭಿಮಾನಿಗಳು, ಶರಣರಲ್ಲಿ ಸಂತಸ ಮೂಡಿಸಿದೆ. 

ಬಸವ ಜನ್ಮ ಭೂಮಿಯ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆಯಾಗಬೇಕು ಎನ್ನುವ ಬೇಡಿಕೆಯನ್ನ ಬಸವಾಭಿಮಾನಿಗಳು ಇಡುತ್ತಲೆ ಬಂದಿದ್ದರು. ಬಸವಣ್ಣನವರು ಹುಟ್ಟಿನ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕು ಅಭಿವೃದ್ಧಿ ವಿಚಾರ ಕಳೆದ 25 ವರ್ಷಗಳಿಂದ‌ ಇಂದಿನ ವರೆಗು ಬೇಡಿಕೆಯಾಗಿಯೇ ಉಳಿದಿತ್ತು‌ ಆದ್ರೆ ಸರ್ಕಾರಗಳು ಇದನ್ನ ಪರಿಗಣನೆಗೆ ತೆಗೆದುಕೊಳ್ಳದೆ ನಿರಾಸೆ ಮಾಡುತ್ತಲೆ ಬಂದಿದ್ದವು. ಈಗ ಕೊನೆಗು ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿದೆ.‌ 25 ವರ್ಷಗಳ ಬಳಿಕ ಬಸವಾಭಿಮಾನಿಗಳ ಬೇಡಿಕೆ ಇಡೇರಿದೆ..

2000ರಲ್ಲೆ ಸಿಎಂ ಕೃಷ್ಣಾಗೆ ಪತ್ರ ಬರೆದಿದ್ದ ಮಾಂತೇಶ್ ಸಂಗಮ: ಇನ್ನೂ ವಿಶೇಷ ಅಂದ್ರೆ ಕಳೆದ 24 ವರ್ಷಗಳ ಹಿಂದೆಯೇ ಬಸವನ ಬಾಗೇವಾಡಿಯ ಬಸವ ಜನ್ಮ ಸ್ಮಾರಕ ನಿರ್ಮಾಣ ಹೋರಾಟಗಾರರಾದ ಮಹಾಂತೇಶ ಸಂಗಮ ಬಸವ ಜನ್ಮಭೂಮಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ಬೇಕು ಎಂದು ಆಗ್ರಹಿಸಿದ್ದರು. 

ಇದನ್ನು ಓದಿ : Vijay Surya: ಪ್ರೇಮಿಗಳ ದಿನದಂದು ದ್ವಿತಿಯ ಪುತ್ರನ ಪೋಟೋ ಶೇರ್‌ ಮಾಡಿದ ಅಗ್ನಿಸಾಕ್ಷಿ ನಟ!

27 ಅಕ್ಟೋಬರ್ 2000 ರಂದು ಆಗ ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ್ಣಾರಿಗೆ ಪತ್ರ ಬರೆದಿದ್ದ ಮಹಾಂತೇಶ ಸಂಗಮ ಪ್ರತ್ಯೇಕ ಪ್ರಾಧಿಕಾರಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಬಸವಣ್ಣನವರ ಐಕ್ಯ ಸ್ಥಳ ಕೂಡಲ ಸಂಗಮ ಅಭಿವೃದ್ಧಿ ಪ್ರತ್ಯೇಕ ಪ್ರಾಧಿಕಾರ ರಚಿಸಿದಾಗ, ಅದೆ ಮಾದರಿಯಲ್ಲಿ ಬಸವ ಜನ್ಮಭೂಮಿ ಅಭಿವೃದ್ಧಿಗು ಪ್ರತ್ಯೇಕ ಪ್ರಾಧಿಕಾರ ರಚಿಸಿ ಎಂದು ಬೇಡಿಕೆ ಇಟ್ಟಿದ್ದರು. ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್ ಆರ್ ಕಾಶಪ್ಪನವರ್, ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ ಶೆಟ್ಟರ್ ಗೆ ಪತ್ರ ವನ್ನ ರವಾನಿಸಿದ್ದರು. ಈ ಮನವಿ ಸಲ್ಲಿಸಿದ 24 ವರ್ಷಗಳ ಬಳಿಕ ಬಸವ ಜನ್ಮಭೂಮಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ಘೋಷಣೆಯಾಗಿದೆ. 

ಇದನ್ನು ಓದಿ : ಒಂದು ಸರಳ ಪ್ರೇಮ ಕಥೆ ಚಿತ್ರಕ್ಕೆ ವಿದೇಶದಲ್ಲಿ ಭಾರಿ ಬೇಡಿಕೆ

 ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಬಸವ ಜನ್ಮ ಭೂಮಿ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಘೋಷಣೆಯಾಗಿದೆ.‌ ಘೋಷಣೆಯಾಗ್ತಿದ್ದಂತೆ ಬಸವಾಭಿಮಾನಿಗಳಲ್ಲಿ ಸಂತಸ ಮೂಡಿದೆ.‌ ಬಸವನ ಬಾಗೇವಾಡಿಯಲ್ಲಿ ಸೇರಿದ ಬಸವ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸಿಹಿ ಹಂಚಿ ಸಂತಸ ಹಂಚಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News