Vijay Surya: ಪ್ರೇಮಿಗಳ ದಿನದಂದು ದ್ವಿತಿಯ ಪುತ್ರನ ಪೋಟೋ ಶೇರ್‌ ಮಾಡಿದ ಅಗ್ನಿಸಾಕ್ಷಿ ನಟ!

Vijay Surya Second Son: ಕಿರುತೆರೆಯ ನಟ ವಿಜಯ್‌ ಸೂರ್ಯ ತಮ್ಮ ಎರಡನೆ ಮಗುವಿನ ಫೋಟೋವನ್ನು ಪ್ರೇಮಿಗಳ ದಿನದಂದು ಹಂಚಿಕೊಂಡಿದ್ದಾರೆ. ಈ ನಟ ಸೋಷಿಯಲ್‌ ಮಡಿಯಾದಲ್ಲಿ ಮುದ್ದಿನ ಮಡದಿ ಹಾಗೂ ಹೆಂಡತಿಯ ಜೊತೆಗಿನ ಫೋಟೋ ಶೇರ್‌ ಮಾಡಿದ್ದಾರೆ.

Written by - Zee Kannada News Desk | Last Updated : Feb 15, 2024, 12:27 PM IST
  • ನಟ ವಿಜಯ್‌ ಸೂರ್ಯ ಇಬ್ಬರು ಮಕ್ಕಳು ಹಾಗೂ ಮುದ್ದಿನ ಹೆಂಡತಿಯ ಜೊತೆಗಿನ ಫ್ಯಾಮಿಲಿ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
  • ವಿಜಯ್‌ ಸೂರ್ಯ ಹಾಗೂ ಚೈತ್ರಾ ಶ್ರೀನಿವಾಸ್‌ 2020ರ ಫೆಬ್ರವರಿ 14ರಂದು ಗಂಡು ಮಗು ಜನಿಸಿದ್ದು, ಮೊದಲ ಮಗನಿಗೆ ಸೋಹನ್ ಸೂರ್ಯ ಎಂದು ಹೆಸರಿಟ್ಟಿದ್ದರು.
  • ನಟ ವಿಜಯ್‌ ಸೂರ್ಯ ತಮ್ಮ ಎರಡನೇ ಮಗು ಹುಟ್ಟಿದಾ ಸಂದರ್ಭದಲ್ಲಿ, ಈ ನಟ ಹೈದರಾಬಾದ್‌ನಲ್ಲಿ‘ಕೃಷ್ಣಮ್ಮ ಕಲ್ಪಿಂಡಿ’ ತೆಲುಗಿನ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು.
Vijay Surya: ಪ್ರೇಮಿಗಳ ದಿನದಂದು ದ್ವಿತಿಯ ಪುತ್ರನ ಪೋಟೋ ಶೇರ್‌ ಮಾಡಿದ ಅಗ್ನಿಸಾಕ್ಷಿ ನಟ! title=

Vijay Surya Family Photo: ಕನ್ನಡ ಕಿರುತೆರೆಯ ನಟ ವಿಜಯ್‌ ಸೂರ್ಯ ‘ಪ್ರೇಮಿಗಳ ದಿನ’ ಫೆಬ್ರವರಿ 14 ರಂದು ತಮ್ಮ ದ್ವಿತಿಯ ಪುತ್ರನ ಫೋಟೋ ರಿವೀಲ್‌ ಮಾಡಿದ್ದಾರೆ. ನಟ ವಿಜಯ್‌ ಸೂರ್ಯ ಇಬ್ಬರು ಮಕ್ಕಳು ಹಾಗೂ ಮುದ್ದಿನ ಹೆಂಡತಿಯ ಜೊತೆಗಿನ ಫ್ಯಾಮಿಲಿ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಜಯ್‌ ದ್ವಿತಿಯ ಪುತ್ರ ಕಳೆದ ವರ್ಷ ಜೂನ್ ತಿಂಗಳಲ್ಲಿ ಜನಿಸಿದ್ದು, ಇದೂವರೆಗೂ ಯಾವ ಫೋಟೋ ರಿವೀಲ್‌ ಮಾಡಿರಲಿಲ್ಲ.

ವಿಜಯ್‌ ಸೂರ್ಯ ಹಾಗೂ ಚೈತ್ರಾ ಶ್ರೀನಿವಾಸ್‌ 2020ರ ಫೆಬ್ರವರಿ 14ರಂದು ಗಂಡು ಮಗು ಜನಿಸಿದ್ದು, ಮೊದಲ ಮಗನಿಗೆ ಸೋಹನ್ ಸೂರ್ಯ ಎಂದು ಹೆಸರಿಟ್ಟಿದ್ದರು. ಇದೀಗ ತಮ್ಮ ಎರಡನೇ ಮಗುವಿಗೆ ಕಾರ್ತಿಕೇಯ ಸೂರ್ಯ ಎಂಬ ಹೆಸರನಿಟ್ಟು ನಾಮಕರಣ ಮಾಡಿದ್ದರು. ನಟ ವಿಜಯ್‌ ದ್ವಿತಿಯ ಪುತ್ರ ಕಾರ್ತಿಕೇಯ ಜನಿಸಿದ ವೇಳೆ ತೆಲುಗಿನ ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದು, ಬೆಂಗಳೂರು, ಹೈದರಾಬಾದ್‌ ಎಂದು ಸೀರಿಯಲ್ ಶೂಟಿಂಗ್ ಮಾಡುತ್ತಿದ್ದರು.

ಇದನ್ನೂ ಓದಿ: Yash: ಟಾಕ್ಸಿಕ್ ನಲ್ಲಿ ಶಾರುಖ್ ಖಾನ್ ಪಾತ್ರದ ಬಗ್ಗೆ ಯಶ್ ಕೊಟ್ರು ಬಿಗ್‌ ಅಪ್ಡೇಟ್.!

ನಟ ವಿಜಯ್‌ ಸೂರ್ಯ ತಮ್ಮ ಎರಡನೇ ಮಗು ಹುಟ್ಟಿದಾ ಸಂದರ್ಭದಲ್ಲಿ, ಈ ನಟ ಹೈದರಾಬಾದ್‌ನಲ್ಲಿ‘ಕೃಷ್ಣಮ್ಮ ಕಲ್ಪಿಂಡಿ’ ತೆಲುಗಿನ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ವಿಜಯ್‌ ಸೂರ್ಯ ತಮ್ಮ ತಾಯಿ ಹುಡುಕಿದ ಹುಡುಗಿ ಚೈತ್ರಾ ಶ್ರೀನಿವಾಸ್ ಅವರನ್ನು 2019ರ ಫೆಬ್ರವರಿ 14 ರಂದು ಮದುವೆಯಾಗಿದ್ದರು. ಚೈತ್ರಾ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು, ಹೆಚ್ಚಾಗಿ ಕ್ಯಾಮರಾ, ಸಾರ್ವಜನಿಕ ಜೀವನದಿಂದ ಚೈತ್ರಾ ತುಂಬ ದೂರ ಇದ್ದಾರೆ. ಈ ಹಿಂದೆ ವಿಜಯ್‌ ಪತ್ನಿ ಮಜಾ ಟಾಕೀಸ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಮತ್ತೆ ಅಷ್ಟಾಗಿ ಎಲ್ಲಿಯೂ ಕಂಡಿಲ್ಲ.

ಸದ್ಯ ವಿಜಯ್‌ ಸೂರ್ಯ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದು, ಶೂಟಿಂಗ್ ಮುಗಿದ ಬಳಿಕ ಕೂಡಲೇ ಮನೆಗೆ ಹೋಗಿ, ಹೆಂಡತಿ-ಮಕ್ಕಳ ಜೊತೆಗೆ ಸಮಯವನ್ನು ಕಳೆಯುತ್ತಾರೆ. ಈ ನಟ ಅಭಿನಯಸಿದ ಅಗ್ನಿಸಾಕ್ಷಿ ಧಾರವಾಹಿ ದೊಡ್ಡ ಹಿಟ್ ತಂದುಕೊಟ್ಟಿದ್ದು, ಬಳಿಕ ‘ಪ್ರೇಮಲೋಕ’, ‘ಜೊತೆ ಜೊತೆಯಲಿ’ ಸೀರಿಯಲ್‌ಗಳಲ್ಲಿ ನಟಿಸಿ, ಇದೀಗ ‘ನಮ್ಮ ಲಚ್ಚಿ’ ಧಾರಾವಾಹಿಯಲ್ಲಿ ಸಂಗಮ್ ಆಗಿ ಜನರ ಮನಸ್ಸು ಗೆಲ್ಲುತ್ತಿದ್ದಾರೆ. ಮತ್ತೆ ವಿಜಯ್‌ ಇಷ್ಟಕಾಮ್ಯ, ಗಾಳಿಪಟ 2 ಹೀಗೆ ಮುಂತಾದ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News