ಸ್ವರ ಸಾಮ್ರಾಟ ಡಾ: ಮಲ್ಲಿಕಾರ್ಜುನ ಮನಸೂರ ಅವರು ಹುಟ್ಟಿದ ಮನೆ ಅಭಿವೃದ್ದಿ ಕ್ರಮಕ್ಕೆ ಡಿಸಿ ಭರವಸೆ

ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಮತಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಮನಸೂರ ಗ್ರಾಮಪಂಚಾಯತ್‍ದಲ್ಲಿ ಸ್ಥಾಪಿಸಿದ್ದ ಮತದಾನ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಗ್ರಾಮಸ್ಥರ ಮನವಿ ಮೇರೆಗೆ ಸ್ವರ ಸಾಮ್ರಾಟ ಡಾ:ಮಲ್ಲಿಕಾರ್ಜುನ ಮನಸೂರ ಅವರು ಹುಟ್ಟಿದ ಮನೆಗೆ ಭೇಟಿ ನೀಡಿದರು. 

Written by - Zee Kannada News Desk | Last Updated : Dec 11, 2021, 04:07 PM IST
  • ಡಾ. ಮಲ್ಲಿಕಾರ್ಜುನ ಮನಸೂರ ಅವರು ಹುಟ್ಟಿದ ಮನೆ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗುವುದು.
  • ಆದರೆ ಆ ಮನೆಯಲ್ಲಿ ವಾಸವಾಗಿರುವವರು ಮನೆಯನ್ನು ಟ್ರಸ್ಟ್‍ಗೆ ಹಸ್ತಾಂತರ ಮಾಡಿದಲ್ಲಿ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲಾಗುವುದು
ಸ್ವರ ಸಾಮ್ರಾಟ ಡಾ: ಮಲ್ಲಿಕಾರ್ಜುನ ಮನಸೂರ ಅವರು ಹುಟ್ಟಿದ ಮನೆ ಅಭಿವೃದ್ದಿ ಕ್ರಮಕ್ಕೆ ಡಿಸಿ ಭರವಸೆ  title=
Photo Courtesy: Facebook

ಧಾರವಾಡ: ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಮತಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಮನಸೂರ ಗ್ರಾಮಪಂಚಾಯತ್‍ದಲ್ಲಿ ಸ್ಥಾಪಿಸಿದ್ದ ಮತದಾನ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಗ್ರಾಮಸ್ಥರ ಮನವಿ ಮೇರೆಗೆ ಸ್ವರ ಸಾಮ್ರಾಟ ಡಾ:ಮಲ್ಲಿಕಾರ್ಜುನ ಮನಸೂರ ಅವರು ಹುಟ್ಟಿದ ಮನೆಗೆ ಭೇಟಿ ನೀಡಿದರು. 

ಇದನ್ನೂ ಓದಿ-ರಾಜಾಮೌಳಿ ಮತ್ತು ಅನುಷ್ಕಾ- ಪ್ರಭಾಸ್ ಮಧ್ಯೆ ಹೊಗೆಯಾಡುತ್ತಿದೆಯೇ ಮನಸ್ಥಾಪ? RRR ಟ್ರೈಲರ್ ರಿಲೀಸ್ ನಂತರ ಆಗಿದ್ದೇನು?
 
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಡಾ. ಮಲ್ಲಿಕಾರ್ಜುನ ಮನಸೂರ ಅವರು ಹುಟ್ಟಿದ ಮನೆ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗುವುದು. ಆದರೆ ಆ ಮನೆಯಲ್ಲಿ ವಾಸವಾಗಿರುವವರು ಮನೆಯನ್ನು ಟ್ರಸ್ಟ್‍ಗೆ ಹಸ್ತಾಂತರ ಮಾಡಿದಲ್ಲಿ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲಾಗುವುದು ಮತ್ತು ಮನಸೂರ ಗ್ರಾಮದಲ್ಲಿ ವಾಸಿಸುತ್ತಿರುವ ಡಾ. ಮನಸೂರ ಅವರ ಕುಟುಂಬ ಸದಸ್ಯರ ಪೈಕಿ ಓರ್ವ ಹಾಗೂ ಗ್ರಾಮದ ಪರವಾಗಿ ಓರ್ವ ವ್ಯಕ್ತಿಯನ್ನು ಟ್ರಸ್ಟ್ ಸದಸ್ಯರನ್ನಾಗಿ ನೇಮಿಸಲು ಚರ್ಚಿಸಿ ಕ್ರಮ ವಹಿಸಲಾಗುವುದು.ಈ ಕುರಿತು ಗ್ರಾಮ ಪಂಚಾಯತ್ ಸಭೆಯಲ್ಲಿ ಚರ್ಚಿಸಿ ವ್ಯಕ್ತಿಗಳ ಹೆಸರು ಶಿಫಾರಸ್ಸು ಮಾಡುವಂತೆ ಅವರು ಹೇಳಿದರು.

ಇದನ್ನೂ ಓದಿ-ಗ್ರಾಮೀಣ ಮಹಿಳೆಯರ ಚಿಪ್ಕೋ ಆಂದೋಲನ ಸ್ಮರಿಸಿದ ಎಮ್ಮಾ ವಾಟ್ಸನ್

ಧಾರವಾಡದಲ್ಲಿ ಡಾ. ಮಲ್ಲಿಕಾರ್ಜುನ ಮನಸೂರ ಸ್ಮಾರಕ ಟ್ರಸ್ಟ್‍ನ ಕಾರ್ಯಚಟುವಟಿಕೆಗಳಿಗಾಗಿ ಅಕ್ಕನ ಬಳಗದ ಹತ್ತಿರ ಸುಮಾರು 10 ಗುಂಟೆ ಭೂಮಿಯನ್ನು ನೀಡಲು ತೀರ್ಮಾನಿಸಲಾಗಿದೆ. ಡಾ. ಮಲ್ಲಿಕಾರ್ಜುನ ಮನಸೂರ ಅವರು ವಾಸಿಸುತ್ತಿದ್ದ ಧಾರವಾಡದ ಮನೆ ಪುನರುಜ್ಜೀವನಗೊಳಿಸಲಾಗಿದೆ. ಡಾ.ಮಲ್ಲಿಕಾರ್ಜುನ ಮನಸೂರ ಅವರ ಜನ್ಮದಿನ ಹಾಗೂ ಪುಣ್ಯಸ್ಮರಣೆಯಂದು ಧಾರವಾಡದಲ್ಲಿ ಆಯೋಜಿಸುವ ಕಾರ್ಯಕ್ರಮಗಳೊಂದಿಗೆ ಮನಸೂರ ಗ್ರಾಮದಲ್ಲಿಯೂ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದೆಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮನಸೂರ ಗ್ರಾಮ ಪಂಚಾಯತ್ ಸದಸ್ಯರು, ಡಾ.ಮಲ್ಲಿಕಾರ್ಜುನ ಮನಸೂರ ಅವರ ಕುಟುಂಬ ಸದಸ್ಯರು, ಸಹೋದರ ಸಂಬಂಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ-Alia Bhatt: ರಣಬೀರ್ ಹೆಸರು ಕೇಳಿ ಇದ್ದಕ್ಕಿದ್ದಂತೆ ನಾಚಿಕೆಪಟ್ಟ ಆಲಿಯಾ ಭಟ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News