ರಾಜಾಮೌಳಿ ಮತ್ತು ಅನುಷ್ಕಾ- ಪ್ರಭಾಸ್ ಮಧ್ಯೆ ಹೊಗೆಯಾಡುತ್ತಿದೆಯೇ ಮನಸ್ಥಾಪ? RRR ಟ್ರೈಲರ್ ರಿಲೀಸ್ ನಂತರ ಆಗಿದ್ದೇನು?

ಸೂಪರ್ ಸ್ಟಾರ್ ಪ್ರಭಾಸ್ ಮತ್ತು ರಾಜಮೌಳಿ ನಡುವೆ ಉತ್ತಮ ಬಾಂಧವ್ಯ ಕೂಡ ಇದೆ. ಆದರೆ, ಇದೀಗ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ,ಮಾತುಗಳು ಕೇಳಿಬರಲಾರಂಭಿಸಿವೆ.

Written by - Ranjitha R K | Last Updated : Dec 10, 2021, 04:52 PM IST
  • ರಿಲೀಸ್ ಆಯಿತು RRR ನ ಟ್ರೇಲರ್
  • ಟ್ರೇಲರ್ ನೋಡಿ ಎಲ್ಲರಿಂದಲೂ ಮೆಚ್ಚುಗೆಯ ನುಡಿ
  • ಇಲ್ಲಿಯವೆರಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಅನುಷ್ಕಾ- ಪ್ರಭಾಸ್
ರಾಜಾಮೌಳಿ ಮತ್ತು ಅನುಷ್ಕಾ- ಪ್ರಭಾಸ್ ಮಧ್ಯೆ ಹೊಗೆಯಾಡುತ್ತಿದೆಯೇ ಮನಸ್ಥಾಪ? RRR ಟ್ರೈಲರ್ ರಿಲೀಸ್ ನಂತರ ಆಗಿದ್ದೇನು? title=
ಟ್ರೇಲರ್ ನೋಡಿ ಎಲ್ಲರಿಂದಲೂ ಮೆಚ್ಚುಗೆಯ ನುಡಿ (file photo)

ನವದೆಹಲಿ : ದಕ್ಷಿಣದ ಸೂಪರ್‌ಸ್ಟಾರ್ ಪ್ರಭಾಸ್ (Prabhas) ಮತ್ತು ಅನುಷ್ಕಾ ಶೆಟ್ಟಿ (Anushka Shetty) ಚಲನಚಿತ್ರ ನಿರ್ಮಾಪಕ ಎಸ್‌ಎಸ್ ರಾಜಮೌಳಿಯ ( SS Rajamouli) ನೆಚ್ಚಿನ ತಾರೆಗಳು. ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜೊತೆ ಬಾಹುಬಲಿಯಂತಹ (Bahubali) ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಸೂಪರ್ ಸ್ಟಾರ್ ಪ್ರಭಾಸ್ ಮತ್ತು ರಾಜಮೌಳಿ ನಡುವೆ ಉತ್ತಮ ಬಾಂಧವ್ಯ ಕೂಡ ಇದೆ. ಆದರೆ, ಇದೀಗ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ,ಮಾತುಗಳು ಕೇಳಿಬರಲಾರಂಭಿಸಿವೆ. ಚಲನಚಿತ್ರ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಬಹುನಿರೀಕ್ಷಿತ ಚಿತ್ರ RRR ನ ಟ್ರೇಲರ್ ನಿನ್ನೆಯಷ್ಟೇ  ಬಿಡುಗಡೆಯಾಯಿತು.
 
RRR ಟ್ರೇಲರ್ ನೋಡಿ ದಕ್ಷಿಣದಿಂದ ಬಾಲಿವುಡ್ ವರೆಗೆ (Bollywood) ಎಲ್ಲರೂ ರಾಜಾಮೌಳಿ (Rajamouli) ಬಗ್ಗೆ ಹೊಗಳಿಕೆಯ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಸೂಪರ್ ಸ್ಟಾರ್ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ (Anushka Shetty) ಇಲ್ಲಿಯವತರೆಗೂ ಟ್ರೇಲರ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ಬಾರಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ RRR ಚಿತ್ರದ ಜನನಿ ಹಾಡಿನ ಬಗ್ಗೆ ಅನುಷ್ಕಾ ಶೆಟ್ಟಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಆ ವೇಳೆ ನಿರ್ದೇಶಕರನ್ನು ಹೊಗಳಿ ಟ್ವೀಟ್ ಕೂಡ ಮಾಡಿದ್ದರು. ಆದರೆ ಇದೀಗ ಅನುಷ್ಕಾ, ಮತ್ತು ಪ್ರಭಾಸ್ ಯಾವುದೇ ಪ್ರತಿಕ್ರಿಯೆ ನೀಡದಿರುವ ಬಗ್ಗೆ, ಮಾತುಗಳು ಕೇಳಿ ಬರುತ್ತಿವೆ.  

ಇದನ್ನೂ ಓದಿ : Alia Bhatt: ರಣಬೀರ್ ಹೆಸರು ಕೇಳಿ ಇದ್ದಕ್ಕಿದ್ದಂತೆ ನಾಚಿಕೆಪಟ್ಟ ಆಲಿಯಾ ಭಟ್..!

ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಈ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ
ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ (Prabhas) ಅವರ ಕೆಲಸದ ಬಗ್ಗೆ ಹೇಳುವುದಾದರೆ, ಬಾಹುಬಲಿ ಸ್ಟಾರ್ ಹಲವಾರು ಪ್ಯಾನ್ ಇಂಡಿಯಾ ಬಿಡುಗಡೆ ಚಿತ್ರಗಳಲ್ಲಿ ನಿರತರಾಗಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಕೆಲವು ದಿನಗಳ ಹಿಂದೆ ತಮ್ಮ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಈ ಚಿತ್ರವನ್ನು ತೆಲುಗು ಚಿತ್ರ ನಿರ್ದೇಶಕ ಮಹೇಶ್ ಬಾಬು ಪಿ (Mahesh Babu P) ನಿರ್ಮಿಸಲಿದ್ದಾರೆ. ಸೂಪರ್ ಸ್ಟಾರ್ ಪ್ರಭಾಸ್ ಬಾಲಿವುಡ್ ಚಿತ್ರ ಆದಿಪುರುಷ್, ಪ್ರಾಜೆಕ್ಟ್ ಕೆ, ರಾಧೆ ಶ್ಯಾಮ್, ಸಲಾರ್ ಮತ್ತು ಸ್ಪಿರಿಟ್‌ನಂತಹ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅದೇ ಸಮಯದಲ್ಲಿ, ನಿರ್ದೇಶಕ ಎಸ್‌ಎಸ್ ರಾಜಮೌಳಿ ಆರ್‌ಆರ್‌ಆರ್ ನಂತರ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ತಮ್ಮ ಪ್ರತ್ಯೇಕ ಚಿತ್ರವನ್ನು ಯೋಜಿಸುತ್ತಿದ್ದಾರೆ.

ಇದನ್ನೂ ಓದಿ : 'ಅಪ್ಪು ಎಂದೆದಿಗೂ ಶಾಶ್ವತ'- ಬಾಲ್ಯದ ಫೋಟೋ ಹಂಚಿಕೊಂಡ ಅರ್ಜುನ್ ಸರ್ಜಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News