Mantralaya : ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ‌ಮಹೋತ್ಸವದ ಸಂಭ್ರಮ

Raghavendra Swamy Aradhana : ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ‌ಮಹೋತ್ಸವ ಆರಂಭವಾಗಿದೆ. ಇಂದು ರಾಯರ ಪೂರ್ವಾರಾಧನೆ ನಡೆಯುತ್ತಿದೆ. ಈ ಹಿನ್ನೆಲೆ ಇಂದು ರಾಯರ ಉತ್ಸವ ಮೂರ್ತಿಯ ರಜತ ಸಿಂಹ ವಾಹನೋತ್ಸವ ನೆರವೇರಲಿದೆ. 

Written by - Chetana Devarmani | Last Updated : Aug 12, 2022, 09:05 AM IST
  • ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ‌ಮಹೋತ್ಸವ ಆರಂಭವಾಗಿದೆ
  • ಇಂದು ರಾಯರ ಪೂರ್ವಾರಾಧನೆ ನಡೆಯುತ್ತಿದೆ
  • ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿದೆ
Mantralaya : ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ‌ಮಹೋತ್ಸವದ ಸಂಭ್ರಮ title=
ಮಂತ್ರಾಲಯ

ರಾಯಚೂರು : ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ‌ಮಹೋತ್ಸವ ಆರಂಭವಾಗಿದೆ. ಇಂದು ರಾಯರ ಪೂರ್ವಾರಾಧನೆ ನಡೆಯುತ್ತಿದೆ. ಈ ಹಿನ್ನೆಲೆ ಇಂದು ರಾಯರ ಉತ್ಸವ ಮೂರ್ತಿಯ ರಜತ ಸಿಂಹ ವಾಹನೋತ್ಸವ ನೆರವೇರಲಿದೆ. ಈ ಮಧ್ಯೆ ರಾಜ್ಯಾದ್ಯಂತ ಭಾರೀ ಮಳೆ ಹಿನ್ನೆಲೆ ತುಂಗಭದ್ರಾ ನದಿಯ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ನದಿ ತೀರದಲ್ಲಿದ್ದ ಗಂಗಮ್ಮ ದೇವಸ್ಥಾನ ಜಲಾವೃತವಾಗಿದೆ. ಮಠದ ಸುತ್ತ ನದಿ ತೀರದಲ್ಲಿ ತೀವ್ರ ನಿಗಾವಹಿಸಲಾಗಿದೆ. 

ಇದನ್ನೂ ಓದಿ : ಕನ್ನಡದ ಸುಗಮ ಸಂಗೀತದ ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ

ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಈ ಬಾರಿ ಭಕ್ತಿರಿಗೆ ತುಂಗಭದ್ರಾ ನದಿಯ ಪುಣ್ಯಸ್ನಾನಕ್ಕೆ ನಿಷೇಧಿಸಲಾಗಿದೆ. ಭಕ್ತರು ತುಂಗಭದ್ರಾ ನದಿ ತೀರಕ್ಕೆ ಹೋಗದಂತೆ ಕಟ್ಟೆಚ್ಚರವಹಿಸಲಾಗಿದೆ. ಒಂದು ವೇಳೆ ಅವಘಡ ಸಂಭವಿಸಿದ್ರೆ, ತಕ್ಷಣ ರಕ್ಷಣಾ ಕಾರ್ಯಾಚರಣೆಗೆಂದು ತೆಪ್ಪಗಳ ಜೊತೆ ಅಂಬಿಗರ ನಿಯೋಜನೆ ಮಾಡಲಾಗಿದೆ. 

ಮಂತ್ರಾಲಯ ಪೊಲೀಸರು, ಸ್ವಯಂ ಸೇವಕರು ಜೊತೆಗೆ ಮಂತ್ರಾಲಯ ಆಡಳಿತ ಮಂಡಳಿ ಸಹ ಸೆಕ್ಯುರಿಟಿ ಗಾರ್ಡ್‌ಗಳನ್ನು ನಿಯೋಜನೆ ಮಾಡಿದೆ. ಭಕ್ತರ ಸ್ನಾನಕ್ಕೆ ತಾತ್ಕಾಲಿಕ ಸ್ನಾನ ಘಟ್ಟಗಳ ನಿರ್ಮಾಣವನ್ನು ಮಾಡಿದ್ದಾರೆ. 

ಒಟ್ಟಾರೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅದ್ಧೂರಿಯಾಗಿ ಆರಾಧನಾ ಮಹೋತ್ಸವವನ್ನು ನಡೆಸಲಾಗುತ್ತಿದೆ. ಪ್ರತಿ ಬಾರಿಯಂತೆ ಈ ಸಲವೂ ಭಕ್ತರ ದಂಡು ರಾಯರ ಸನ್ನಿದ್ಧಿಗೆ ಆಗಮಿಸುತ್ತಿದ್ದು, ಗುರುಗಳ ಕೃಪೆಗೆ ಪಾತ್ರರಾಗುತ್ತಿದ್ದಾರೆ. 

ಇದನ್ನೂ ಓದಿ : "ಮೊದಲು ವಿಧಾನಸೌಧದ 3ನೇ ಮಹಡಿ ಸ್ವಚ್ಚ ಮಾಡಿ ": ಹೆಚ್.ಡಿ.ಕುಮಾರಸ್ವಾಮಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News