ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆಗೆ ಟಿಕೆಟ್ ಕೇಳಿಯೂ ಇಲ್ಲ, ನಾನು ಅಡ್ಡಿಪಡಿಸಿಯೂ ಇಲ್ಲ: ಖರ್ಗೆ

ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬುದು ಕೇವಲ ವದಂತಿಯಷ್ಟೇ ಎಂದು ಕೇಂದ್ರ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Last Updated : Apr 18, 2018, 04:20 PM IST
ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆಗೆ ಟಿಕೆಟ್ ಕೇಳಿಯೂ ಇಲ್ಲ, ನಾನು ಅಡ್ಡಿಪಡಿಸಿಯೂ ಇಲ್ಲ: ಖರ್ಗೆ title=

ಕಲಬುರ್ಗಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಾದಾಮಿ ಕ್ಷೇತ್ರದಿಂದಲೂ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬುದು ಕೇವಲ ವದಂತಿಯಷ್ಟೇ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಚಾಮುಂಡೇಶ್ವರಿಯಿಂದ ಮಾತ್ರ ಸ್ಪರ್ಧಿಸುವೆ- ಸಿದ್ದರಾಮಯ್ಯ

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ ಎನ್ನುವುದು ಕೇವಲ ಉಹಾಪೋಹ. ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆಗೆ ಟಿಕೆಟ್ ಕೇಳಿಯೂ ಇಲ್ಲ, ಸಿದ್ದರಾಮಯ್ಯ ಸ್ಪರ್ಧೆಗೆ ನಾನು ಅಡ್ಡಿಪಡಿಸಿಯೂ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬಾದಾಮಿಗೂ ಕಂಬಳಿ ಹಾಕಿರುವ ಸಿದ್ದರಾಮಯ್ಯ!

ಬಾದಾಮಿ ಕ್ಷೇತ್ರದಲ್ಲಿ ಬಿ.ಬಿ.ಚಿಮ್ಮನಕಟ್ಟಿ ಅವರ ಆರೋಗ್ಯ ಸರಿಯಿಲ್ಲದ ಕಾರಣ ಅವರಿಗೆ ಟಿಕೆಟ್ ನೀಡಿಲ್ಲ. ಆದರೆ ಜನ ಚಿಮ್ಮನಕಟ್ಟಿ ಅವರಿಗೇ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಯುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಉದ್ದೇಶದಿಂದ ಪಕ್ಷದ ಹೈಕಮ್ಯಾಂಡ್ ದೇವರಾಜ್ ಪಾಟಿಲ್'ಗೆ ಟಿಕೆಟ್ ನೀಡಿದೆ. ಆದರೆ, ಪಟ್ಟಿ ಬಿಡುಗಡೆಯಾದ ನಂತರ ಚಿಮ್ಮನಕಟ್ಟಿ ಅವರು ಮೈಸೂರಿನಲ್ಲಿ ಸಿದ್ದರಾಮಯ್ಯ ಅವರನ್ನೂ, ಹಾಗೇ ಇಲ್ಲಿ ನನ್ನನ್ನೂ ಭೇಟಿ ಆಗಿದ್ದರು. ಹಾಗಾಗಿ ಹೈಕಮ್ಯಾಂಡ್ ಆ ಕ್ಷೇತ್ರಕ್ಕೆ ಬಿ ಫಾರಂ ನೀಡುವುದನ್ನು ತಡೆಹಿಡಿದಿದೆ. ಅವೆಲ್ಲವೂ ಇನ್ನೆರಡು ದಿನಗಳಲ್ಲಿ ಬಗೆಹರಿಯಲಿದೆ ಎಂದು ಖರ್ಗೆ ಹೇಳಿದರು. 

Trending News