'ನೈಟ್ ಕರ್ಫ್ಯೂ' ವೇಳೆ ದೇಗುಲ ದೋಚಿದ ಖದೀಮರು

ಒಂದ್ಕಡೆ 'ಕೊರೊನಾ' ರೂಪಾಂತರಿ ಒಮಿಕ್ರಾನ್ ಕಟ್ಟಿಹಾಕಲು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದ್ದರೆ, ಮತ್ತೊಂದ್ಕಡೆ ಇದೇ ಸಂದರ್ಭವನ್ನು ಬಳಸಿಕೊಂಡು ಖದೀಮರು 3 ದೇಗುಲಗಳಲ್ಲಿ ಕಳ್ಳತನ ಮಾಡಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

Last Updated : Dec 29, 2021, 03:53 PM IST
  • ಸಂತೇಕಲ್ಲಹಳ್ಳಿಯ ಆಂಜಿನೇಯಸ್ವಾಮಿ, ಓಂ ಶಕ್ತಿ ಹಾಗೂ ಅಯ್ಯಪ್ಪಸ್ವಾಮಿ ದೇಗುಲಗಳಲ್ಲಿ ಕಳ್ಳತನವಾಗಿದೆ.
  • ದೇವಾಲಯಗಳ ಹುಂಡಿ ಮತ್ತು ಕಳಶವನ್ನ ಖದೀಮರು ಕದ್ದೊಯ್ದಿದ್ದಾರೆ.
  • ಹುಡಿಯೊಂದಿಗೆ ಮೋಟಾರ್ ಹಾಗೂ ಗ್ರಾಮದ ನಾಟಿ ಕೋಳಿಗಳನ್ನೂ ಎಗರಿಸಿದ್ದಾರೆ ಕಿರಾತಕರು.
 'ನೈಟ್ ಕರ್ಫ್ಯೂ' ವೇಳೆ ದೇಗುಲ ದೋಚಿದ ಖದೀಮರು title=

ಚಿಕ್ಕಬಳ್ಳಾಪುರ: ಒಂದ್ಕಡೆ 'ಕೊರೊನಾ' ರೂಪಾಂತರಿ ಒಮಿಕ್ರಾನ್ ಕಟ್ಟಿಹಾಕಲು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದ್ದರೆ, ಮತ್ತೊಂದ್ಕಡೆ ಇದೇ ಸಂದರ್ಭವನ್ನು ಬಳಸಿಕೊಂಡು ಖದೀಮರು 3 ದೇಗುಲಗಳಲ್ಲಿ ಕಳ್ಳತನ ಮಾಡಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

 ಇದನ್ನೂ ಓದಿ : WATCH:ದೈತ್ಯ ಹಾವಿನೊಂದಿಗೆ ಆಟ, ಭಯಾನಕ ವಿಡಿಯೋ ವೈರಲ್

ನಾಟಿ ಕೋಳಿಗಳು ಎಸ್ಕೇಪ್..!
ಸಂತೇಕಲ್ಲಹಳ್ಳಿಯ ಆಂಜಿನೇಯಸ್ವಾಮಿ, ಓಂ ಶಕ್ತಿ ಹಾಗೂ ಅಯ್ಯಪ್ಪಸ್ವಾಮಿ ದೇಗುಲಗಳಲ್ಲಿ ಕಳ್ಳತನವಾಗಿದೆ. ದೇವಾಲಯಗಳ ಹುಂಡಿ ಮತ್ತು ಕಳಶವನ್ನ ಖದೀಮರು ಕದ್ದೊಯ್ದಿದ್ದಾರೆ. ಹುಡಿಯೊಂದಿಗೆ ಮೋಟಾರ್ ಹಾಗೂ ಗ್ರಾಮದ ನಾಟಿ ಕೋಳಿಗಳನ್ನೂ ಎಗರಿಸಿದ್ದಾರೆ ಕಿರಾತಕರು.

ಹುಂಡಿಯಲ್ಲಿತ್ತು ಲಕ್ಷ ಲಕ್ಷ ಹಣ:
ದೇವಸ್ಥಾನದ ಅಭಿವೃದ್ಧಿಗಾಗಿ ಗ್ರಾಮಸ್ಥರು ಹುಂಡಿ ತೆರೆದಿರಲಿಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ಹಣ ಹುಂಡಿಯಲ್ಲೇ ಇತ್ತು. ಇದನ್ನು ತಿಳಿದೇ ಖದೀಮರು ಹುಂಡಿ ದೋಚಿರುವ ಗುಮಾನಿ ವ್ಯಕ್ತವಾಗಿದೆ. ಸರಣಿ ಕಳ್ಳತನ ಕಂಡು ಗ್ರಾಮಸ್ಥರು ಭಯಗೊಂಡಿದ್ದಾರೆ.

ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಖದೀಮರಿಗಾಗಿ ಬಲೆ ಬೀಸಿದ್ದಾರೆ. ಒಟ್ಟಾರೆ ಕೊರೊನಾ ಕಂಟ್ರೋಲ್ ಮಾಡಲು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಗೆ ತಂದಿದ್ದರೆ, ಕಳ್ಳರು ಇದೇ ಸಮಯ ಬಳಸಿಕೊಂಡು ಸರಣಿ ಕಳ್ಳತನ ಮಾಡಿದ್ದು ವಿಪರ್ಯಾಸ.

 ಇದನ್ನೂ ಓದಿ : Video : ಮದುವೆಯ ಅಲಂಕಾರ ಮುಗಿಸಿಕೊಂಡು ಬಂದ ವಧುವಿನಿಂದ ವಿವಾಹಕ್ಕೆ ನಿರಾಕರಣೆ ಕಾರಣ ಇಷ್ಟೇ .!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News