ನವದೆಹಲಿ : ಮದುವೆಗೆ ಸಂಬಂಧಿಸಿದ ಹೆಚ್ಚಿನ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಕೆಲವೊಮ್ಮೆ ವಧುವಿನ ಮುದ್ದಾದ ಶೈಲಿಯ ವೀಡಿಯೊಗಳು, ಕೆಲವೊಮ್ಮೆ ವರನ ನೃತ್ಯ ಮತ್ತು ಕೆಲವೊಮ್ಮೆ ಮದುವೆ ದಿಬ್ಬಣದಲ್ಲಿ ನಡೆಯುವ ಹಾಸ್ಯಮಯ ಘಟನೆಗಳ ವೀಡಿಯೊಗಳು (Viral video) ಆಗಾಗ ವೈರಲ್ ಆಗುತ್ತಿವೆ. ಆದರೆ ಈಗ ವೈರಲ್ ಆಗುತ್ತಿರುವ ವಿಡಿಯೋ ಮದುವೆಗೆ (Wedding video) ಸಂಬಂಧಿಸಿದ್ದೇ ಆಗಿದೆ. ಆದರೆ, ಇದು ಬಹಳ ಭಿನ್ನವಾಗಿದೆ. ಈ ವೀಡಿಯೊದಲ್ಲಿ, ವಧು ಇದ್ದಕ್ಕಿದ್ದಂತೆ ಮದುವೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವುದನ್ನು ಕೇಳಬಹುದು.
ಮದುವೆಯಾಗಲು ನಿರಾಕರಿಸಿದ ವಧು :
ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು ಅಲಂಕಾರ ಮುಗಿಸಿಕೊಂಡು ಬಂದಿದ್ದಾಳೆ. ಇನ್ನೇನು ಮದುವೆ ಶಾಸ್ತ್ರ ನಡೆಯಬೇಕಷ್ಟೇ. ಆದರೆ ಅಷ್ಟರಲ್ಲಿಯೇ ವಧು ಮದುವೆಯಾಗುವುದು (bride video) ನನ್ನಿಂದ ಸಾಧ್ಯವಿಲ್ಲ ಎನ್ನುವುದನ್ನು ನೋಡಬಹುದು. ವಾಸ್ತವವಾಗಿ, ವಧು ತನ್ನ ಭಾರವಾದ ಲೆಹೆಂಗಾದಿಂದ ಅಸಮಾಧಾನಗೊಂಡಿರುವಂತೆ ಕಾಣುತ್ತದೆ. ಈ ಲೆಹೆಂಗಾ ತುಂಬಾ ಭಾರವಾಗಿದೆ. ನನ್ನಿಂದ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಈ ಮಾತುಕತೆ ತಮಾಷೆಯಾಗಿಯೇ ನಡೆಯುತ್ತದೆ.
ಇದನ್ನೂ ಓದಿ : Black Idli: ನೀವು ಎಂದಾದರೂ 'ಕರಿ ಇಡ್ಲಿ' ತಿಂದಿದ್ದೀರಾ? ಎಲ್ಲಿ ಸಿಗುತ್ತೆ?
ವಧುವಿನ ಮುದ್ದಾದ ಶೈಲಿ :
ಈ ವೀಡಿಯೊವನ್ನು (Viral video) witty_wedding ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಪ್ರತಿಕ್ರಿಯೆಗಳೂ ಬರಲಾರಂಭಿಸಿವೆ. ಈ ವಿಡಿಯೋಗೆ (video) ಇದುವರೆಗೆ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‌ಗಳು ಬಂದಿವೆ.
ಇದನ್ನೂ ಓದಿ : ‘ನಮ್ಮನ್ನು ಬಿಟ್ಟು ಹೋಗ್ಬೇಡಿ ಸಾರ್ ಪ್ಲೀಸ್’: ಶಿಕ್ಷಕನ ವರ್ಗಾವಣೆಗೆ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.