Tomato Lorry: ಕೋಲಾರದಿಂದ ನಾಪತ್ತೆಯಾಗಿದ್ದ ಟೊಮೇಟೊ ಲಾರಿ ಗುಜರಾತ್​ನಲ್ಲಿ ಪತ್ತೆ!

Missing Tomato Lorry: ಅಹಮದಾಬಾದ್‍ನ ಪ್ರಕಾಶ್ ಎಂಬುವರಿಗೆ ಸುಮಾರು 750 ಕ್ರೇಟ್‌ (11 ಟನ್‌) ಟೊಮೆಟೊವನ್ನು ಮಾರಾಟ ಮಾಡಲಾಗಿದೆ. ಟೊಮೇಟೊವನ್ನು ಮಾರಾಟ ಮಾಡಿದ ಬಳಿಕ ರಾಜಸ್ಥಾನದಲ್ಲಿ ಲಾರಿ ಬಿಟ್ಟು ಪರಾರಿಯಾಗಿದ್ದಾರೆ.

Written by - Zee Kannada News Desk | Last Updated : Jul 31, 2023, 03:41 PM IST
  • ಕೋಲಾರದಿಂದ ಹೊರಟು ನಾಪತ್ತೆಯಾಗಿದ್ದ ಟೊಮೇಟೊ ಲಾರಿ ಗುಜರಾತ್‍ನಲ್ಲಿ ಪತ್ತೆ
  • ಸುಮಾರು 21 ಲಕ್ಷ ರೂ. ಮೌಲ್ಯದ ಟೊಮೇಟೊದೊಂದಿಗೆ ನಾಪತ್ತೆಯಾಗಿದ್ದ ಲಾರಿ
  • ಅಹಮದಾಬಾದ್‍ನಲ್ಲಿ ಅರ್ಧ ಬೆಲೆಗೆ ಮಾರಾಟ ಮಾಡಿ ಚಾಲಕ ಎಸ್ಕೇಪ್ ಆಗಿದ್ದಾನೆ
Tomato Lorry: ಕೋಲಾರದಿಂದ ನಾಪತ್ತೆಯಾಗಿದ್ದ ಟೊಮೇಟೊ ಲಾರಿ ಗುಜರಾತ್​ನಲ್ಲಿ ಪತ್ತೆ! title=
ಟೊಮೇಟೊ ಲಾರಿ ಗುಜರಾತ್‍ನಲ್ಲಿ ಪತ್ತೆ!

ಕೋಲಾರ: ಕೋಲಾರದ ಎಪಿಎಂಸಿಯಿಂದ ಸುಮಾರು 21 ಲಕ್ಷ ರೂ. ಮೌಲ್ಯದ ಟೊಮೇಟೊ ಹೊತ್ತು ನಾಪತ್ತೆಯಾಗಿದ್ದ ಲಾರಿ ಕೊನೆಗೂ ಗುಜರಾತ್‍ನಲ್ಲಿ ಪತ್ತೆಯಾಗಿದೆ.

ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ಹೊರಟಿದ್ದ ಟೊಮೇಟೊ ತುಂಬಿದ್ದ ಲಾರಿ ಗುಜರಾತ್​ನ ಅಹಮದಾಬಾದ್​ನಲ್ಲಿ ಸಿಕ್ಕಿದೆ. ಲಾರಿ ಚಾಲಕ ಅನ್ವರ್ ಎಂಬಾತ ಟೊಮೇಟೊವನ್ನು ಕದ್ದು ಗುಜರಾತ್‍ನ ಅಹಮದಾಬಾದ್‍ನಲ್ಲಿ ಅರ್ಧ ಬೆಲೆಗೆ ಮಾರಾಟ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ.   

ಚಾಲಕ ಅನ್ವರ್​ ಲಾರಿಯಲ್ಲಿ ಅಳವಡಿಸಿದ್ದ ಜಿಪಿಎಸ್ ಕಿತ್ತುಹಾಕಿ ಮಾಲು ಸಮೇತ ಅಹಮದಾಬಾದ್​ಗೆ ಹೋಗಿದ್ದಾನೆ. ಬಳಿಕ ಅಲ್ಲಿ ಟೊಮೇಟೊವನ್ನು ಅರ್ಧ ದರಕ್ಕೆ ಮಾರಾಟ ಮಾಡಿ ಎಸ್ನೇಪ್ ಆಗಿದ್ದಾನೆ. ಈತನ ಜೊತೆಗಿದ್ದ ಕ್ಲೀನರ್ ಸಹ ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ: Crypto Currency King ಫರ್ನಾಂಡೊ ಗಾಬಾ ಸಾವು ನೋಡಿ ಬೆಚ್ಚಿಬಿದ್ದ ಪೊಲೀಸರು, ಏನಿತ್ತು ಆ ಕೆಂಪು ಸೂಟ್ ಕೇಸ್ ನಲ್ಲಿ?

ಮೆಹತ್ ಟ್ರಾನ್ಸ್ ಪೋರ್ಟ್ ಮಾಲೀಕ ಸಾಧಿಕ್ ಎಂಬುವರು ಕಳೆದ ರಾತ್ರಿಯೇ ಅಹಮದಾಬಾದ್​ನತ್ತ ಹೊರಟ್ಟಿದ್ದು, ಲಾರಿ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಟೊಮೇಟೊ ಮಾರಾಟದಿಂದ ಬಂದ ಹಣದೊಂದಿಗೆ ನಾಪತ್ತೆಯಾಗಿರುವ ಚಾಲಕ ಅನ್ವರ್ ವಿರುದ್ಧ ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಾಧಿಕ್‌ ನಿರ್ಧರಿಸಿದ್ದಾರೆ.

21 ಲಕ್ಷ ರೂ. ಮೌಲ್ಯದ ಟೊಮೇಟೊವನ್ನು ಅರ್ಧ ಬೆಲೆಗೆ ಮಾರಾಟ ಮಾಡಿರುವ ಡ್ರೈವರ್ ಮತ್ತು ಕ್ಲೀನರ್ ರಸ್ತೆ ಬದಿ ಲಾರಿ ಬಿಟ್ಟು ಹಣದೊಂದಿಗೆ ಪರಾರಿಯಾಗಿದ್ದಾರೆ. ರಾಜಸ್ಥಾನದ ಜಾಲೂರು ಜಿಲ್ಲೆಯಲ್ಲಿ ಲಾರಿ ಕಂಡು ಬಂದಿದೆ.

ಅಹಮದಾಬಾದ್‍ನ ಪ್ರಕಾಶ್ ಎಂಬುವರಿಗೆ ಸುಮಾರು 750 ಕ್ರೇಟ್‌ (11 ಟನ್‌) ಟೊಮೆಟೊವನ್ನು ಮಾರಾಟ ಮಾಡಲಾಗಿದೆ. ಟೊಮೇಟೊವನ್ನು ಮಾರಾಟ ಮಾಡಿದ ಬಳಿಕ ರಾಜಸ್ಥಾನದಲ್ಲಿ ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ರಾಜಸ್ಥಾನದ ಮೂಲದ ಡ್ರೈವರ್ ಅನ್ವರ್ ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ: ಆದಾಯ ತೆರಿಗೆ ಪಾವತಿರಾದರಿದೊಂದು ಸಂತಸದ ಸುದ್ದಿ, 10 ಲಕ್ಷ ಆದಾಯ ಇದ್ದರೂ 1 ರೂಪಾಯಿ ತೆರಿಗೆ ಪಾವತಿಸಬೇಕಾಗಿಲ್ಲ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News