Crypto Currency King ಫರ್ನಾಂಡೊ ಗಾಬಾ ಸಾವು ನೋಡಿ ಬೆಚ್ಚಿಬಿದ್ದ ಪೊಲೀಸರು, ಏನಿತ್ತು ಆ ಕೆಂಪು ಸೂಟ್ ಕೇಸ್ ನಲ್ಲಿ?

Death Of King Of Crypto Currency: ಫರ್ನಾಂಡೊ ಪೆರೆಜ್ ಗಬಾ ಅವರನ್ನು ಕ್ರಿಪ್ಟೋ ಕರೆನ್ಸಿಯ ರಾಜ ಎಂದು ಕರೆಯಲಾಗುತ್ತಿತ್ತು. ಅಪಾರ ಸಂಪತ್ತಿನ ಒಡೆಯ ಗಾಬಾನನ್ನು ಮೊದಲು ಕೆಲವರು ಗುಂಡಿಕ್ಕಿ ಹತ್ಯೆಗೈದಿದ್ದಾರೆ (Crime News In Kannada). ನಂತರ, ಆತನ ಮೃತ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ನದಿಯ ದಡದಲ್ಲಿ ಎಸೆಯಲಾಗಿದೆ.   

Written by - Nitin Tabib | Last Updated : Jul 28, 2023, 05:46 PM IST
  • ಮಿಸ್ಟರ್ ಗಾಬಾ ಕುರಿತು ಹೇಳುವುದಾದರೆ, ಆತ ಐಷಾರಾಮಿ ವಾಹನಗಳನ್ನು ಬಾಡಿಗೆಗೆ ಕೊಡುವ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ.
  • ಈ ಮೂಲಕ ಅಪಾರ ಸಂಪತ್ತಿನ ಒಡೆಯನಾಗಿದ್ದ. ವಾಹನಗಳ ವ್ಯವಹಾರದ ನಂತರ, ಆತ ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಪ್ರವೇಶಿಸಿದ್ದಾನೆ,
  • ಅವರು ಸಾಮಾಜಿಕ ಮಾಧ್ಯಮದಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದನು.
Crypto Currency King ಫರ್ನಾಂಡೊ ಗಾಬಾ ಸಾವು ನೋಡಿ ಬೆಚ್ಚಿಬಿದ್ದ ಪೊಲೀಸರು, ಏನಿತ್ತು ಆ ಕೆಂಪು ಸೂಟ್ ಕೇಸ್ ನಲ್ಲಿ? title=

Crypto Currency King: ಅರ್ಜೆಂಟೀನಾದ ಕ್ರಿಪ್ಟೋಕರೆನ್ಸಿ ಇಂಫ್ಲೂಯೆಂಸರ್ ಫರ್ನಾಂಡೋ ಪರೆಜ್ ಗಾಬಾ (Business News In Kannada) ಅವರನ್ನು ಹತ್ಯೆಗೈಯ್ಯಲಾಗಿದೆ, ಅವರು ಒಂದು ವಾರದಿಂದ ನಾಪತ್ತೆಯಾಗಿದ್ದರು. ರಾಜಧಾನಿ ಬ್ಯೂನಸ್ ಐರಿಸ್ ಬಳಿ ನದಿಯ ಬಳಿ ಸೂಟ್‌ಕೇಸ್‌ನಿಂದ ಪೊಲೀಸರು ಆತನ ಶವವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರಿಗೆ ಆ ಸೂಟ್‌ಕೇಸ್ ಬಗ್ಗೆ ನದಿಯ ದಡದಲ್ಲಿ ಆಟವಾಡುತ್ತಿದ್ದ ಹುಡುಗರಿಂದ ಮಾಹಿತಿ ಸಿಕ್ಕಿದೆ. ಪೊಲೀಸರು ಸೂಟ್‌ಕೇಸ್ ತೆರೆದಾಗ ದೇಹವು ಹಲವಾರು ತುಂಡುಗಳಾಗಿದ್ದರಿಂದ ಅವರು ಬೆಚ್ಚಿಬಿದ್ದಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ನದಿ ದಡದಲ್ಲಿ ಆಟವಾಡುತ್ತಿದ್ದ ಬಾಲಕರ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೂಟ್‌ಕೇಸ್‌ನಲ್ಲಿ ಫರ್ನಾಂಡೋ ಅವರ ಕೈಕಾಲುಗಳು ಪತ್ತೆಯಾಗಿವೆ. ನದಿಯ ದಡದಲ್ಲಿ ಆತನ ದೇಹದ ಇತರ ಭಾಗಗಳು ಪತ್ತೆಯಾಗಿದ್ದು, ಇದರೊಂದಿಗೆ ಮುಂಡ ಕೂಡ ಪತ್ತೆಯಾಗಿದೆ.

ಇದನ್ನೂ ಓದಿ-ಕೊನೆಗೂ ಬಂತು Royal Enfield Electric Bullet! ಬೆಲೆ-ರೆಂಜ್ ಮಾಹಿತಿ ಇಲ್ಲಿದೆ

ಸೂಟ್ಕೇಸ್ನಿಂದ ಮೃತದೇಹ ವಶಕ್ಕೆ
ದೇಹದ ಭಾಗಗಳು ಈ ರೀತಿ ಪತ್ತೆಯಾಗಿರುವುದನ್ನು ನೋಡಿದರೆ, ವೃತ್ತಿಪರ ಕೊಲೆಗಾರ ಕೊಲೆ ಮಾಡಿದ್ದಾನೆ ಎಂಬುದು ಅದು ಸೂಚಿಸುತ್ತದೆ, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಪ್ರಾಥಮಿಕ ಮಾಹಿತಿಯ ಪ್ರಕಾರ, ಗಾಬಾವನ್ನು ಕತ್ತರಿಸುವ ಮೊದಲು ಮೂರು ಬಾರಿ ಆತನ ಮೇಲೆ ಗುಂಡು ಹಾರಿಸಲಾಗಿದೆ. ಮಾರ್ಕಾ ವರದಿಯ ಪ್ರಕಾರ, ಕ್ರಿಪ್ಟೋ ಕರೆನ್ಸಿ ಇಂಫ್ಲೂಯೆಂಸರ್ ಬಾರ್ಸಿಲೋನಾದಲ್ಲಿ ವಾಸಿಸುತ್ತಿದ್ದ ಮತ್ತು ಇತ್ತೀಚೆಗೆ ಮಿಯಾಮಿಗೆ ಸ್ಥಳಾಂತರಗೊಂಡಿದ್ದ ಎನ್ನಲಾಗುತ್ತದೆ. ಹತ್ಯೆಗೂ ಮುನ್ನ ಅರ್ಜೆಂಟೀನಾಕ್ಕೆ ಭೇಟಿ ನೀಡಿದ್ದ. ಪೊಲೀಸರ ಪ್ರಕಾರ ಹತ್ಯೆಗೈಯುವವರ ಶೋಧಕಾರ್ಯ ಮುಂದುವರೆದಿದೆ.

ಇದನ್ನೂ ಓದಿ-ತಿಂಗಳಿಗೆ 5 ರಿಂದ 10 ಲಕ್ಷ ರೂ.ಆದಾಯ ನೀಡುತ್ತೇ ಈ ಬಿಸ್ನೆಸ್! ಇಂದೇ ತಿಳಿದುಕೊಳ್ಳಿ

ಕ್ರಿಪ್ಟೋ ಕರೆನ್ಸಿ ಬಿಲಿಯನೇರ್ ದಿ ಗಾಬಾ
ಮಿಸ್ಟರ್ ಗಾಬಾ ಕುರಿತು ಹೇಳುವುದಾದರೆ, ಆತ ಐಷಾರಾಮಿ ವಾಹನಗಳನ್ನು ಬಾಡಿಗೆಗೆ ಕೊಡುವ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ. ಈ ಮೂಲಕ ಅಪಾರ ಸಂಪತ್ತಿನ ಒಡೆಯನಾಗಿದ್ದ. ವಾಹನಗಳ ವ್ಯವಹಾರದ ನಂತರ, ಆತ ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಪ್ರವೇಶಿಸಿದ್ದಾನೆ, ಅವರು ಸಾಮಾಜಿಕ ಮಾಧ್ಯಮದಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದನು. ಜು.19ರಂದು ಅಪಾರ್ಟ್ ಮೆಂಟ್ ಬಾಡಿಗೆಗೆ ಪಡೆದಿದ್ದು, ಮರಳಿ ಕೀ ಕೊಡಲು ಬರುವವರಿದ್ದರು ಆದರೆ ಬಂದಿರಲಿಲ್ಲ. ಆತನನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಬಾರದೆ ನಂತರ ಕಾಣೆಯಾದ ದೂರು ದಾಖಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News