ಅಕ್ಟೋಬರ್ 16 ರವರೆಗೆ ಈ ರಾಶಿಯವರ ಮೇಲಿರುವುದು ಕುಬೇರನ ಆಶೀರ್ವಾದ, ಪ್ರತಿ ಕೆಲಸದಲ್ಲಿಯೂ ಮಂಗಳ ನೀಡಲಿದ್ದಾನೆ ಯಶಸ್ಸು

ಆಗಸ್ಟ್ 10 ರಂದು ವೃಷಭ ರಾಶಿಯನ್ನು ಪ್ರವೇಶಿಸಿದ್ದ ಮಂಗಳ,  ಅಕ್ಟೋಬರ್ 16 ರವರೆಗೆ ಅಲ್ಲೇ ಇರಲಿದ್ದಾನೆ.  ವ್ಯಕ್ತಿಯ ಜಾತಕದಲ್ಲಿ ಮಂಗಳನ ಸ್ಥಾನವು ದುರ್ಬಲವಾಗಿದ್ದರೆ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Written by - Ranjitha R K | Last Updated : Sep 22, 2022, 02:26 PM IST
  • ಮಂಗಳ ಬೆಳಗಲಿದ್ದಾನೆ ಈ ರಾಶಿಯವರ ಅದೃಷ್ಟ
  • ಇರುವುದು ಕುಬೇರನ ಆಶೀರ್ವಾದ
  • ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಿಗುವುದು ಯಶಸ್ಸು
ಅಕ್ಟೋಬರ್ 16 ರವರೆಗೆ ಈ ರಾಶಿಯವರ ಮೇಲಿರುವುದು ಕುಬೇರನ ಆಶೀರ್ವಾದ,  ಪ್ರತಿ ಕೆಲಸದಲ್ಲಿಯೂ ಮಂಗಳ ನೀಡಲಿದ್ದಾನೆ ಯಶಸ್ಸು  title=
Mars transit effect (file photo)

ಬೆಂಗಳೂರು : ಯಾವುದೇ ವ್ಯಕ್ತಿಯ ಜೀವನದಲ್ಲಿ ಮಂಗಳನು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾನೆ. ಮಂಗಳನನ್ನು ಗ್ರಹಗಳ ಸೇನಾಧಿಪತಿ  ಎಂದು ಕರೆಯಲಾಗುತ್ತದೆ. ಈ ಗ್ರಹದ ಸ್ವಭಾವವು ಬಹಳ ಉಗ್ರವಾಗಿರುತ್ತದೆ. ವ್ಯಕ್ತಿಯ ಜಾತಕದಲ್ಲಿ ಮಂಗಳನ ಸ್ಥಾನವು ದುರ್ಬಲವಾಗಿದ್ದರೆ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಗಸ್ಟ್ 10 ರಂದು ವೃಷಭ ರಾಶಿಯನ್ನು ಪ್ರವೇಶಿಸಿದ್ದ ಮಂಗಳ,  ಅಕ್ಟೋಬರ್ 16 ರವರೆಗೆ ಅಲ್ಲೇ ಇರಲಿದ್ದಾನೆ. 

ಮೇಷ - ಈ ರಾಶಿಚಕ್ರದ ಎರಡನೇ ಮನೆಯಲ್ಲಿ ಮಂಗಳನಿದ್ದಾನೆ. ಆದ್ದರಿಂದ, ಈ  ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರಲಿದೆ.  

ವೃಷಭ - ಮಂಗಳವು ಈ ರಾಶಿಯಲ್ಲಿ ಸಂಕ್ರಮಿಸಿದೆ. ಲಗ್ನದ ಮನೆಯಲ್ಲಿ ಮಂಗಳನ ಉಪಸ್ಥಿತಿಯಿಂದಾಗಿ, ಪೋಷಕರ ಬೆಂಬಲ ಸಿಗಲಿದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತವಿರಿ. ಹಣದ ವಿಷಯದಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ. 

ಇದನ್ನೂ ಓದಿ : ಈ ರಾಶಿಯ ನಿರುದ್ಯೋಗಿಗಳಿಗೆ ಈ ತಿಂಗಳಲ್ಲಿ ಸಿಗುವುದು ಶುಭ ಸುದ್ದಿ, ಸುಧಾರಿಸುವುದು ಆರ್ಥಿಕ ಸ್ಥಿತಿ

ಮಿಥುನ- ಈ ರಾಶಿಯ 12ನೇ ಮನೆಯಲ್ಲಿ ಮಂಗಳ ಸಂಚಾರ ಮಾಡಿರುವುದರಿಂದ ಖರ್ಚು-ವೆಚ್ಚಗಳು ಹೆಚ್ಚಾಗುವ ಸಂಭವವಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ, ತೊಂದರೆಗೆ ಸಿಲುಕಬಹುದು. 

ಕರ್ಕ - ಮಂಗಳ ಗ್ರಹವು ತನ್ನ 11 ನೇ ಮನೆಯಲ್ಲಿ ಸಾಗುತ್ತಿದೆ. ಉದ್ಯೋಗಾಕಾಂಕ್ಷಿಗಳು ಕೆಲಸದ ಸ್ಥಳದಲ್ಲಿ ಪ್ರಶಂಸೆ ಪಡೆಯಬಹುದು. 

ಸಿಂಹ - ಈ ಜನರು ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮಂಗಳವು ತನ್ನ 10 ನೇ ಮನೆಯಲ್ಲಿ ಸಾಗಿದೆ. ವ್ಯಾಪಾರದಲ್ಲಿ ಲಾಭವಾಗಬಹುದು. ಶಿಕ್ಷಣಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವು ಅನುಕೂಲಕರವಾಗಿದೆ.  

ಕನ್ಯಾ - ಈ ರಾಶಿಯ 9 ನೇ ಮನೆಯಲ್ಲಿ ಮಂಗಳ ಸಂಚಾರವಿದ್ದು, ಕನ್ಯಾ ರಾಶಿಯವರಿಗೆ ಶುಭ ಲಾಭಗಳನ್ನು ನೀಡುತ್ತದೆ. ಈ ಅವಧಿಯಲ್ಲಿ ಹಠಾತ್ ವಿತ್ತೀಯ ಲಾಭಗಳ ಎಲ್ಲಾ ಸಾಧ್ಯತೆಗಳಿವೆ. ಜೀವನದಲ್ಲಿ ಸಾಕಷ್ಟು ಪ್ರಗತಿಯಾಗಲಿದೆ.  

ಇದನ್ನೂ ಓದಿ : ಕೇವಲ 2 ರೂಪಾಯಿ ಕರ್ಪೂರ ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು

ತುಲಾ- ಅವರ 8 ನೇ ಮನೆಯಲ್ಲಿ ಮಂಗಳ  ಸಂಕ್ರಮನವಿದ್ದು, ಅದನ್ನು ಅ ಶುಭವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗಬಹುದು.  ಮಾತು ನಿಯಂತ್ರಿಸುವುದು ಮುಖ್ಯ. 

ವೃಶ್ಚಿಕ - ಅದರ 7 ನೇ ಮನೆಯಲ್ಲಿ ಮಂಗಳನ ಚಲನೆ ವ್ಯವಹಾರದ ದೃಷ್ಟಿಕೋನದಿಂದ ಬಹಳ ಲಾಭದಾಯಕ. ಈ ಸಮಯದಲ್ಲಿ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. 

ಧನು - ಅವರ 6 ನೇ ಮನೆಯಲ್ಲಿ ಮಂಗಳನ ಸಂಕ್ರಮಣದಿಂದಾಗಿ ಶತ್ರುಗಳ ಮೇಲೆ ವಿಜಯ ಸಿಗಲಿದೆ. ಪರೀಕ್ಷೆಯಲ್ಲಿ ಯಶಸ್ವಿಯಾಗುವಿರಿ. ಈ ಅವಧಿಯಲ್ಲಿ ಖರ್ಚು ಹೆಚ್ಚಾಗಬಹುದು. 

ಮಕರ  - 5 ನೇ ಮನೆಯಲ್ಲಿ ಮಂಗಳನ ಸಾಗಣೆ ಲಾಭದಾಯಕವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದ್ದು, ವ್ಯಾಪಾರದಲ್ಲಿ ಲಾಭವಾಗಲಿದೆ. 

ಇದನ್ನೂ ಓದಿ Astrology: ಈ ರಾಶಿಯವರು ಪತಿ ಮತ್ತು ಅತ್ತೆಯ ಮೇಲೆ ಹಿಡಿತ ಸಾಧಿಸುತ್ತಾರೆ

ಕುಂಭ - ನಾಲ್ಕನೇ ಮನೆಯಲ್ಲಿ ಮಂಗಳ ಸಂಚಾರದಿಂದ ಜೀವನ ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. 

ಮೀನ- ಈ ರಾಶಿಚಕ್ರದ ಮೂರನೇ ಮನೆಯಲ್ಲಿ ಮಂಗಳನ ಸಂಚಾರವು ಧೈರ್ಯ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅನುಕೂಲಕರ ಫಲಿತಾಂಶಗಳು ಬರುತ್ತವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News