ಈ ರಾಶಿಯ ನಿರುದ್ಯೋಗಿಗಳಿಗೆ ಈ ತಿಂಗಳಲ್ಲಿ ಸಿಗುವುದು ಶುಭ ಸುದ್ದಿ, ಸುಧಾರಿಸುವುದು ಆರ್ಥಿಕ ಸ್ಥಿತಿ

October Monthly Horoscope :ವಿವಾಹವಾಗಲು ಬಯಸುವವರಿಗೆ ಇದು ಒಳ್ಳೆಯ ಸಮಯ. ಅದರಲ್ಲೂ ಪ್ರೇಮ ವಿವಾಹವಾಗಲು ಬಯಸುವವರು ತಮ್ಮ ಕುಟುಂಬ ಸದಸ್ಯರ ಮುಂದೆ ತಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಂಡು ಮದುವೆಗೆ ಮನೆ ಮಂದಿಯನ್ನು ಒಪ್ಪಿಸಲು ಪ್ರಯತ್ನಿಸಬಹುದು. 

Written by - Ranjitha R K | Last Updated : Sep 22, 2022, 11:34 AM IST
  • ಹೇಗಿರಲಿದೆ ಅಕ್ಟೋಬರ್ ತಿಂಗಳ ಅಭವಿಷ್ಯ
  • ತುಲಾ ರಾಶಿಯವರ ವೃತ್ತಿ ಜೀವನದಲ್ಲಿ ಆಗಲಿದೆ ಬದಲಾವಣೆ
  • ಉದ್ಯೋಗಾಕಾಂಕ್ಷಿಗಳ ಹುಡುಕಾಟವು ಪೂರ್ಣಗೊಳ್ಳುತ್ತದೆ.
ಈ ರಾಶಿಯ ನಿರುದ್ಯೋಗಿಗಳಿಗೆ ಈ ತಿಂಗಳಲ್ಲಿ ಸಿಗುವುದು ಶುಭ ಸುದ್ದಿ, ಸುಧಾರಿಸುವುದು ಆರ್ಥಿಕ ಸ್ಥಿತಿ  title=
Libra Horoscope october (file photo)

October Monthly Horoscope : ಅಕ್ಟೋಬರ್ ತಿಂಗಳು ತುಲಾ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಧನಾತ್ಮಕವಾಗಿರಲಿದೆ. ಅಕ್ಟೋಬರ್ 10 ರ ನಂತರ, ಉದ್ಯೋಗಿಗಳಿಗೆ ಕೆಲವು ಉತ್ತಮ ಮಾಹಿತಿ ಸಿಗುತ್ತದೆ. ಬಡ್ತಿಯ ಸಾಧ್ಯತೆಗಳೂ ಇವೆ. ಉದ್ಯೋಗಾಕಾಂಕ್ಷಿಗಳ ಹುಡುಕಾಟವು ಪೂರ್ಣಗೊಳ್ಳುತ್ತದೆ.  ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುವವರಿಗೂ ಲಾಭವಾಗಲಿದೆ. ವೃತ್ತಿಜೀವನಕ್ಕೆ ಸಂಬಂಧಪಟ್ಟಂತೆ, ಪ್ರಮುಖ ನಿರ್ಧಾರ ತೆಗೆದುಕೊಳ್ಳುವ  ಸಂದರ್ಭ ಇದು. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಬಹುದು. ಆಮದು-ರಫ್ತು ಉದ್ಯೋಗದಲ್ಲಿ ತೊಡಗಿರುವವರಿಗೆ  ಈ ತಿಂಗಳು ಲಾಭದಾಯಕವಾಗಿರಲಿದೆ. 

ವಿದ್ಯಾರ್ಥಿಗಳು ಮತ್ತು ಯುವಕರು ಬೇಡದ ವಿಚಾರಗಳ ಬಗ್ಗೆ ಗಮನ ಹರಿಸುವ ಬದಲು, ತಮ್ಮ ಗುರಿ ಸಾಧಿಸುವತ್ತ ಗಮನ ಕೇಂದ್ರೀಕರಿಸಬೇಕು. ವಿವಾಹವಾಗಲು ಬಯಸುವವರಿಗೆ ಇದು ಒಳ್ಳೆಯ ಸಮಯ. ಅದರಲ್ಲೂ ಪ್ರೇಮ ವಿವಾಹವಾಗಲು ಬಯಸುವವರು ತಮ್ಮ ಕುಟುಂಬ ಸದಸ್ಯರ ಮುಂದೆ ತಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಂಡು ಮದುವೆಗೆ ಮನೆ ಮಂದಿಯನ್ನು ಒಪ್ಪಿಸಲು ಪ್ರಯತ್ನಿಸಬಹುದು. ಕುಟುಂಬದಲ್ಲಿ ಕೆಲವು ಮಂಗಳಕರ ಕಾರ್ಯಗಳು ನಡೆಯುತ್ತವೆ. ಆದರೆ, ಈ ತಿಂಗಳು ವೈವಾಹಿಕ ಜೀವನದಲ್ಲಿ ಅಪಶ್ರುತಿ ಉಂಟಾಗುವ ಸಾಧ್ಯತೆಯಿದೆ. ಸಣ್ಣ ವಿಷಯಗಳಿಗೆ ಸಂಗಾತಿಯೊಂದಿಗೆ ವಿವಾದ ಉಂಟಾಗಬಹುದು.  ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ನೀವು ತೊಂದರೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಸಂಗಾತಿಯ ಜೊತೆ ಶಾಂತವಾಗಿ ಮಾತನಾಡಿ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಿ.  

ಇದನ್ನೂ ಓದಿ : Astrology: ಈ ರಾಶಿಯವರು ಪತಿ ಮತ್ತು ಅತ್ತೆಯ ಮೇಲೆ ಹಿಡಿತ ಸಾಧಿಸುತ್ತಾರೆ

ಆರೋಗ್ಯ ಉತ್ತಮವಾಗಿರುತ್ತದೆ. ಹಳೆಯ ರೋಗಗಳಿಂದ ಮುಕ್ತಿ ದೊರೆಯುತ್ತದೆ. ತಿಂಗಳ ಆರಂಭದಲ್ಲಿ ಆರೋಗ್ಯವು ಉತ್ತಮವಾಗಿರುತ್ತದೆ. ಆದರೆ, ಅರ್ಧ ತಿಂಗಳ ನಂತರ ಸಣ್ಣ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಯಾವುದೇ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಪರಿಹಾರ ಸಿಗುವುದು. ಬದಲಾಗುತ್ತಿರುವ ಹವಾಮಾನದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ವಯಸ್ಸಾದ ಕುಟುಂಬದ ಸದಸ್ಯರ ಆರೋಗ್ಯವೂ ಸುಧಾರಿಸಬಹುದು. ಈ ಸಮಯದಲ್ಲಿ, ನಿಮ್ಮಲ್ಲಿ ಅಹಂಕಾರವು ಹೆಚ್ಚಾಗಬಹುದು, ಇದರಿಂದಾಗಿ ನಿಮ್ಮ ಮಾತಿನಲ್ಲಿ ದುರಹಂಕಾರವು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಇತರ ಜನರೊಂದಿಗಿನ ನಿಮ್ಮ ಸಂಬಂಧವು ಹಾಳಾಗಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಸಭ್ಯ ಭಾಷೆಯನ್ನು ಬಳಸಿ. 

ಇದನ್ನೂ ಓದಿ : ಮನೆಯ ಮುಂದೆ ತಪ್ಪಿಯೂ ಈ ಸಸ್ಯಗಳನ್ನು ನೆಡಬೇಡಿ.! ಕುಟುಂಬವನ್ನು ಕಾಡುವುದು ದಾರಿದ್ರ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News