ಮಾರ್ಚ್ 13 ರಂದು ಗ್ರಹಗಳ ಸೇನಾಪತಿಯ ಮಿಥುನ ಗೋಚರ, 3 ರಾಶಿಗಳ ಜನರಿಗೆ ಧನಲಾಭ-ಭಾಗ್ಯೋದಯದ ಯೋಗ!

Mangal Gochar In Mithun: ಬರುವ ಮಾರ್ಚ್ 13 ರಂದು ಗ್ರಹಗಳ ಸೇನಾಪತಿ ಎಂದೇ ಭಾವಿಸಲಾಗುವ ಮಂಗಳ ಗ್ರಹ ಮಿಥುನ ರಾಶಿಯಲ್ಲಿ ಗೋಚರಿಸಲಿದೆ. ಇದರಿಂದ 3 ರಾಶಿಗಳ ಜಾತಕದವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗಲಿದೆ. ಆ ಮೂರೂ ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,   

Written by - Nitin Tabib | Last Updated : Feb 20, 2023, 04:10 PM IST
  • ಮಂಗಳನ ಈ ಮಿಥುನ ಗೋಚರ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ.
  • ಆದರೆ, ಮೂರು ರಾಶಿಗಳ ಜನರ ಮೇಲೆ ಇದರ ಭಾರಿ ಸಕಾರಾತ್ಮಕ ಪ್ರಭಾವ ಕಂಡುಬರಲಿದ್ದು,
  • ಮಂಗಳನ ಈ ಗೋಚರದಿಂದ ಅವರ ಜೀವನದಲ್ಲಿ ಭಾರಿ ಧನಾಗಮನದ ಜೊತೆಗೆ ಭಾಗ್ಯೋದಯ ಸಂಭವಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಮಾರ್ಚ್ 13 ರಂದು ಗ್ರಹಗಳ ಸೇನಾಪತಿಯ ಮಿಥುನ ಗೋಚರ, 3 ರಾಶಿಗಳ ಜನರಿಗೆ ಧನಲಾಭ-ಭಾಗ್ಯೋದಯದ ಯೋಗ!  title=
ಮಿಥುನ ರಾಶಿಯಲ್ಲಿ ಗ್ರಹಗಳ ಸೇನಾಪತಿ

Mars Transit In Gemini: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಒಂದು ನಿರ್ದಿಷ್ಟ ಕಾಲಾಂತರದಲ್ಲಿ ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ. ಗ್ರಹಗಳ ಈ ರಾಶಿ ಪರಿವರ್ತನೆ ಮಾನವ ಜೀವನ ಮತ್ತು ಅವರ ಭೂಮಿಯ ಮೇಲಿರುವ ಇತರ ಪ್ರಾಣಿಗಳ ಸಂಕುಲದ ಮೇಲೆ ಪರಿಣಾಮ ಬೀರುತ್ತದೆ. ಶೌರ್ಯ ಮತ್ತು ಧೈರ್ಯದ ಕಾರಕ ಗ್ರಹವಾದ ಮಂಗಳ ಮಾರ್ಚ್ 13 ರಂದು ಮಿಥುನ ರಾಶಿಯನ್ನು ಪ್ರವೇಶಿಸಲಿದೆ, ಹೀಗಾಗಿ ಮಂಗಳನ ಈ ಮಿಥುನ ಗೋಚರ  ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಆದರೆ, ಮೂರು ರಾಶಿಗಳ ಜನರ ಮೇಲೆ ಇದರ ಭಾರಿ ಸಕಾರಾತ್ಮಕ ಪ್ರಭಾವ ಕಂಡುಬರಲಿದ್ದು, ಮಂಗಳನ ಈ ಗೋಚರದಿಂದ ಅವರ ಜೀವನದಲ್ಲಿ ಭಾರಿ ಧನಾಗಮನದ ಜೊತೆಗೆ ಭಾಗ್ಯೋದಯ ಸಂಭವಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ವೃಷಭ ರಾಶಿ
ಮಂಗಳ ಈ ಗೋಚರ ವೃಷಭ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಮಂಗಳನು ​​ನಿಮ್ಮ ರಾಶಿಯ ದ್ವಿತೀಯ ಭಾವದಲ್ಲಿ ಸಾಗಲಿದ್ದಾನೆ. ಹೀಗಾಗಿ  ಈ ಅವಧಿಯಲ್ಲಿ ನೀವು ಹಣಕಾಸಿನ ವಿಷಯಗಳಲ್ಲಿ ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಪ್ರಗತಿ ಕಾಣಲಿದೆ. ನೀವು ಹಿಂದೆ ಹೂಡಿಕೆ ಮಾಡಿದರೆ ಅದರಿಂದಲೂ ಕೂಡ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಇದಲ್ಲದೆ ಈ ಅವಧಿಯಲ್ಲಿ ನಿಮ್ಮ ಮಾತುಗಳು ಸಾಕಷ್ಟು ಪ್ರಭಾವಶಾಲಿಯಾಗಿರಲಿವೆ.  ನಿಮ್ಮ ಮಾತಿನಿಂದ ಜನರು ಪ್ರಭಾವಿತರಾಗಬಹುದು. ಅಲ್ಲದೆ, ಉದ್ಯಮಿಗಳು ಈ ಅವಧಿಯಲ್ಲಿ ಮೊದಲು ನೀಡಿದ ಸಾಲ ಅವರತ್ತ ಮರಳಲಿದೆ . ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ.

ಇದನ್ನೂ ಓದಿ-Ugadi 2023: ಮಾರ್ಚ್ 22 ರಿಂದ ಹಿಂದೂ ಹೊಸವರ್ಷ ಆರಂಭ, 3 ರಾಶಿಗಳ ಜನರ ಜೀವನದಲ್ಲಿ ಭಾಗ್ಯೋದಯ!

ಕನ್ಯಾ ರಾಶಿ 
ಕನ್ಯಾ ರಾಶಿಯ ಸ್ಥಳೀಯರಿಗೆ ಮಂಗಳ ಗೋಚರ ಸಾಕಷ್ಟು ಅನಕೂಲಕರ ಸಾಬೀತಾಗಲಿದೆ. ಏಕೆಂದರೆ ಮಂಗಳ ಗ್ರಹವು ನಿಮ್ಮ ರಾಶಿಯ ಕರ್ಮ ಭಾವದಲ್ಲಿ ಸಾಗಲಿದ್ದಾನೆ. ಹೀಗಾಗಿ ನಿರುದ್ಯೋಗಿಗಳು ಈ ಅವಧಿಯಲ್ಲಿ  ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಬಹುದು. ಇದರೊಂದಿಗೆ, ನೀವು ತಂದೆ ಅಥವಾ ತಂದೆ ಸ್ವರೂಪಿ  ವ್ಯಕ್ತಿಗಳಿಂದ ಸಹಕಾರ ಮತ್ತು ಪ್ರಯೋಜನಗಳನ್ನು ಪಡೆಯುತ್ತೀರಿ. ಧಾರ್ಮಿಕ ಕಾರ್ಯದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಮತ್ತೊಂದೆಡೆ, ಉದ್ಯಮಿಗಳು ಈ ಅವಧಿಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಇದರೊಂದಿಗೆ, ಈ ಅವಧಿಯಲ್ಲಿ ಬಡ್ತಿ ಅಥವಾ ಇನ್ಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ-Auspicious Rajyog: 617 ವರ್ಷಗಳ ಬಳಿಕ 3 ರಾಜಯೋಗಗಳು, 4 ರಾಶಿಗಳ ಜನರಿಗೆ ಭಾರಿ ಧನಲಾಭದ ಪ್ರಬಲ ಯೋಗ!

ತುಲಾ ರಾಶಿ
ಮಂಗಳನ ಈ ರಾಶಿ ಪರಿವರ್ತನೆ ನಿಮ್ಮ ಪಾಲಿಗೆ ಮಂಗಳಕರ ಸಾಬೀತಾಗಲಿದೆ. ಏಕೆಂದರೆ ಮಂಗಳನು ​​ನಿಮ್ಮ ರಾಶಿಯಿಂದ ಅದೃಷ್ಟದ ಸ್ಥಾನಕ್ಕೆ ಸಾಗಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ಅದೃಷ್ಟವು ನಿಮ್ಮೊಂದಿಗೆ ಇರಲಿದೆ. ಅಲ್ಲದೆ, ಈ ಸಮಯದಲ್ಲಿ, ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳ ಇಷ್ಟಾರ್ಥಗಳು ನೆರವೇರಲಿವೆ.ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಕೆಲಸ-ಕಾರ್ಯಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ.  ಕೆಲಸದ ಸ್ಥಳದ ಬಗ್ಗೆ ಹೇಳುವುದಾದರೆ, ಅಧಿಕಾರಿಗಳೊಂದಿಗೆ ಸಮನ್ವಯತೆ ಉತ್ತಮವಾಗಿರುತ್ತದೆ. ಇದರೊಂದಿಗೆ, ನೀವು ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸನ್ನು ಪಡೆಯಬಹುದು.

ಇದನ್ನೂ ಓದಿ-Shash Rajyog: ಶೀಘ್ರದಲ್ಲೇ ಶನಿ ಉದಯದಿಂದ 'ಶಶ ಮಹಾಪುರುಷ ರಾಜಯೋಗ' ನಿರ್ಮಾಣ, ಚಿನ್ನದಂತೆ ಹೊಳೆಯಲಿದೆ ಈ ಜನರ ಭಾಗ್ಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News