Budh Gochar In Aquarius 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ನಕ್ಷತ್ರಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಗ್ರಹ-ನಕ್ಷತ್ರಗಳ ಈ ಗೋಚರ ಮಾನವ ಜೀವನ ಮತ್ತು ಭೂಮಿಯ ಮೇಲೆ ಪ್ರಭಾವ ಬೀರುತ್ತದೆ. ಇನ್ನೊಂದೆಡೆ ಗ್ರಹದ ಸಂಚಾರ ಅಥವಾ ನಡೆ ಪರಿವರ್ತನೆ ಕೆಲವರಿಗೆ ಧನಾತ್ಮಕ ಮತ್ತು ಕೆಲವರಿಗೆ ಋಣಾತ್ಮಕವಾಗಿರುತ್ತದೆ. ಫೆಬ್ರವರಿ 27 ರಂದು ಬುಧ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಬುಧನ ಈ ಕುಂಭ ಗೋಚರ ಎಲ್ಲಾ ದ್ವಾದಶ ರಾಶಿಗಳ ಜನರ ಮಳೆ ಪ್ರಭಾವ ಬೀರಲಿದೆ.ಅದರಲ್ಲಿಯೂ ವಿಶೇಷವಾಗಿ ಬುಧನ ಈ ಸಂಚಾರವು 3 ರಾಶಿಗಳ ಜನರಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಮಕರ ರಾಶಿ
ಬುಧದ ಸಂಚಾರವು ನಿಮಗೆ ಪ್ರಯೋಜನಕಾರಿ ಸಾಬೀತಗಲಿದೆ. ಏಕೆಂದರೆ ಈ ಸಂಚಾರವು ನಿಮ್ಮ ರಾಶಿಯಿಂದ ದ್ವಿತೀಯ ಭಾವದಲ್ಲಿ ಸಂಭವಿಸಲಿದೆ. ಇದನ್ನು ಹಣ ಮತ್ತು ಮಾತಿನ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನೀವು ಹಠಾತ್ ಹಣವನ್ನು ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ಹಣದ ಬಗ್ಗೆ ಕೆಲ ನಿರ್ಧಾರಗಳು ನಿಮ್ಮ ನಿಮ್ಮ ಪರವಾಗಿರಲಿವೆ. ಇದರೊಂದಿಗೆ, ಈ ಅವಧಿಯು ವ್ಯಾಪಾರ ವರ್ಗದ ಜನರಿಗೆ ಸಾಕಷ್ಟು ಪ್ರಯೋಜನಕಾರಿ ಸಾಬೀತಾಗಲಿದೆ. ಈ ಸಮಯದಲ್ಲಿ ನೀವು ಹಳೆಯ ಹೂಡಿಕೆಗಳಿಂದಲೂ ಪ್ರಯೋಜನ ಪಡೆಯುವಿರಿ. ಆದರೆ ಈ ಅವಧಿಯಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.
ಇದನ್ನೂ ಓದಿ-12 ಗಂಟೆಗಳ ಬಳಿಕ ಕುಂಭ ರಾಶಿಯಲ್ಲಿ ಸೂರ್ಯ, 3 ರಾಶಿಗಳ ಜನರಿಗೆ ಭಾರಿ ಧನಲಾಭ, ಬಡ್ತಿ-ಇನ್ಕ್ರಿಮೆಂಟ್ ಭಾಗ್ಯ!
ಸಿಂಹ ರಾಶಿ
ಬುಧನ ಕುಂಭ ಗೋಚರ ನಿಮಗೆ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಈ ಸಂಚಾರವು ನಿಮ್ಮ ರಾಶಿಯಿಂದ ಸಪ್ತಮ ಭಾವದಲ್ಲಿ ಸಂಭವಿಸಲಿದೆ. ಇದನ್ನು ವೈವಾಹಿಕ ಜೀವನ ಮತ್ತು ಪಾಲುದಾರಿಕೆಯ ಸ್ಥಳವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ನೀವು ಈ ಅವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆಯನ್ನು ಹೊಂದಿರುತ್ತೀರಿ. ಇದರೊಂದಿಗೆ, ಈ ಅವಧಿಯು ಕೆಲಸದ ವಿಷಯದಲ್ಲಿ ತುಂಬಾ ಉತ್ತಮವಾಗಿರುತ್ತದೆ. ತಮ್ಮ ಸಂಗಾತಿಯ ಹೆಸರಿನಲ್ಲಿ ವ್ಯಾಪಾರ ಮಾಡುವವರಿಗೆ, ಈ ಅವಧಿಯು ತುಂಬಾ ಯಶಸ್ಸಿನಿಂದ ಕೂಡಿರುತ್ತದೆ. ಇದೇ ವೇಳೆ ಈ ಅವಧಿಯಲ್ಲಿ, ನೀವು ಪಾರ್ಟ್ನರ್ಶಿಪ್ ಕೆಲಸವನ್ನು ಸಹ ಪ್ರಾರಂಭಿಸಬಹುದು, ಅದು ಲಾಭದ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ-48 ಗಂಟೆಗಳ ಬಳಿಕ ಶುಕ್ರ ಗೋಚರ, ಹಂಸ-ಮಾಲವ್ಯ ರಾಜಯೋಗಗಳ ಸೃಷ್ಟಿ, ಈ ಜನರಿಗೆ ಅಪಾರ ಧನ ಪ್ರಾಪ್ತಿ !
ವೃಷಭ ರಾಶಿ
ವೃಷಭ ರಾಶಿಯವರಿಗೆ ವೃತ್ತಿ ಮತ್ತು ಉದ್ಯೋಗದ ವಿಷಯದಲ್ಲಿ ಬುಧ ಸಂಕ್ರಮಣವು ಮಂಗಳಕರವೆಂದು ಸಾಬೀತಾಗಲಿದೆ. ಏಕೆಂದರೆ ಬುಧ ನಿಮ್ಮ ಸಂಕ್ರಮಣದ ಜಾತಕದ ದಶಮೇಶನಾಗಿರಲಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನೀವು ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬಹುದು. ಇದರೊಂದಿಗೆ, ಈ ಅವಧಿಯು ವ್ಯಾಪಾರ ವರ್ಗದ ಜನರಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ವ್ಯಾಪಾರವು ಸಾಕಷ್ಟು ಪ್ರಗತಿ ಹೊಂದುವ ಸಾಧ್ಯತೆ ಇದೆ.
ಇದನ್ನೂ ಓದಿ-Bad Cholesterol ನಿಯಂತ್ರಣ, ತೂಕ ಇಳಿಕೆಯ ಜೊತೆಗೆ ಹಲವು ಆರೋಗ್ಯ ಲಾಭಗಳನ್ನು ಹೊಂದಿದೆ ಈ ಚಹಾ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.