Diwali 2022: ದೀಪಾವಳಿಯ ರಾತ್ರಿ ಈ ಪ್ರಾಣಿ-ಪಕ್ಷಿ ಕಂಡರೆ ಅದು ಮನೆಗೆ ಲಕ್ಷ್ಮಿಯ ಆಗಮನದ ಸಂಕೇತ

Diwali 2022: ದೀಪಾವಳಿಯ ದಿನ ಒಂದು ವೇಳೆ ನಿಮಗೆ ಗೂಬೆ, ಕಿನ್ನರರು ಅಥವಾ ಬೆಕ್ಕು ಕಂಡರೆ, ನಿಮ್ಮ ಅದೃಷ್ಟ ಬದಲಾಗಲಿದೆ ಮತ್ತು ತಾಯಿ ಲಕ್ಷ್ಮಿ ನಿಮ್ಮ ಮನೆಗೆ ಆಗಮಿಸಲಿದ್ದಾಳೆ ಎಂದು ತಿಳಿದುಕೊಳ್ಳಿ.

Written by - Nitin Tabib | Last Updated : Oct 17, 2022, 02:21 PM IST
  • ಈ ಬಾರಿ ಕ್ಟೋಬರ್ 24 ರಂದು ದೀಪಾವಳಿಯ ಮಹಾಪರ್ವ ಆರಂಭಗೊಳ್ಳುತ್ತಿದೆ.
  • ಈ ದಿನದಂದು, ದೇಶದಾದ್ಯಂತ ಎಲ್ಲರೂ ತಮ್ಮ ಮನೆ, ಅಂಗಡಿ ಮತ್ತು ವ್ಯಾಪಾರ ಜಾಗದಲ್ಲಿ ಗಣೇಶ-ಲಕ್ಷ್ಮಿಯನ್ನು ಪೂಜಿಸುತ್ತಾರೆ.
  • ಈ ಸಂದರ್ಭದಲ್ಲಿ ತಾಯಿ ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಮೃದ್ಧಿ, ಸಂಪತ್ತು ಮತ್ತು ಸಂತೋಷ ದ್ವಿಗುಣಗೊಳ್ಳುತ್ತದೆ.
Diwali 2022: ದೀಪಾವಳಿಯ ರಾತ್ರಿ ಈ ಪ್ರಾಣಿ-ಪಕ್ಷಿ ಕಂಡರೆ ಅದು ಮನೆಗೆ ಲಕ್ಷ್ಮಿಯ ಆಗಮನದ ಸಂಕೇತ title=
Diwali Auspicious Signs

Diwali 2022: Animal on Diwali Night Lucky-Animal on Diwali Night Lucky- ಈ ಬಾರಿ  ಕ್ಟೋಬರ್ 24 ರಂದು ದೀಪಾವಳಿಯ ಮಹಾಪರ್ವ ಆರಂಭಗೊಳ್ಳುತ್ತಿದೆ.ಈ ದಿನದಂದು, ದೇಶದಾದ್ಯಂತ ಎಲ್ಲರೂ ತಮ್ಮ ಮನೆ, ಅಂಗಡಿ ಮತ್ತು ವ್ಯಾಪಾರ ಜಾಗದಲ್ಲಿ ಗಣೇಶ-ಲಕ್ಷ್ಮಿಯನ್ನು ಪೂಜಿಸುತ್ತಾರೆ. ಈ ಸಂದರ್ಭದಲ್ಲಿ ತಾಯಿ ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಮೃದ್ಧಿ, ಸಂಪತ್ತು ಮತ್ತು ಸಂತೋಷ ದ್ವಿಗುಣಗೊಳ್ಳುತ್ತದೆ. ದೀಪಾವಳಿ  ದಿನದಂದು ನೀವು ಮನೆಯಲ್ಲಿ ಈ ಕೆಲವು ಪ್ರಾಣಿಗಳನ್ನು ನೋಡಿದರೆ, ಅದು ನಿಮ್ಮ ಪಾಲಿಗೆ ಅದೃಷ್ಥದ ಸಂಕೇತವಾಗಿದೆ ಮತ್ತು ಧನಲಾಭವಾಗುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ.

ದೀಪಾವಳಿಯ ದಿನದಂದು ಗೂಬೆ ಮತ್ತು ಬೆಕ್ಕು ಎರಡನ್ನೂ ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಗೂಬೆ ಲಕ್ಷ್ಮಿ ದೇವಿಯ ವಾಹನ ಎಂದು ಎಲ್ಲರಿಗೂ ತಿಳಿದಿದೆ, ಆದ್ದರಿಂದ ದೀಪಾವಳಿಯ ದಿನದಂದು ಗೂಬೆ ಕಾಣಿಸಿಕೊಂಡರೆ, ನಿಮ್ಮ ಅದೃಷ್ಟವು ಬದಲಾಗಲಿದೆ ಎಂದು ಅರ್ಥೈಸಲಾಗುತ್ತದೆ. ಗೂಬೆಯ ದರ್ಶನವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯಂದು ರಾತ್ರಿ ವೇಳೆ ಮನೆಯೊಳಗೆ ಗೂಬೆ ಕಾಣಿಸಿಕೊಂಡರೆ ಲಕ್ಷ್ಮಿಯು ಪ್ರವೇಶಿಸಿದ್ದಾಳೆ ಮತ್ತು ಅವಳ ಕೃಪೆ ನಿಮ್ಮ ಮೇಲೆ ಇದೆ ಎಂದು ಅರ್ಥಮಾಡಿಕೊಳ್ಳಿ.

ಕಿನ್ನರರ ಆಗಮನ
ಕಿನ್ನರ ಆಶೀರ್ವಾದ ಮತ್ತು ಶಾಪ ಎರಡೂ ಬಹಳ ಮುಖ್ಯ ಎಂದು ಭಾವಿಸಲಾಗುತ್ತದೆ, ನೀವು ದೀಪಾವಳಿಯ ದಿನದಂದು ಕಿನ್ನರರನ್ನು ಕಂಡರೆ, ಅದು ತುಂಬಾ ಮಂಗಳಕರ ಸಂಕೇತವಾಗಿದೆ. ಅಂದಹಾಗೆ, ಮಗುವಿನ ಜನನದ ಬಳಿಕ ಕೆಲವರು ಕಿನ್ನರರನ್ನು ತಮ್ಮ ಮನೆಗೆ ಬರಮಾಡಿಕೊಳ್ಳುತ್ತಾರೆ. ಆದರೆ ಅವರು ದೀಪಾವಳಿ ಹಬ್ಬದಂದು ಮನೆಗೆ ಬಂದರೆ ಮಾತು ನೀವು ಅವರಿಗೆ ಶಕುನವನ್ನು ನೀಡಿದರೆ ಅದು ನಿಮಗೆ ಒಳ್ಳೆಯದು. ನಿಮ್ಮ ತಿಜೋರಿಯಿಂದ ಒಂದು ರೂಪಾಯಿಯನ್ನು ಅವರಿಗೆ ನೀಡಿ ಮತ್ತು ನಂತರ ಅದನ್ನು ಹಿಂತೆಗೆದುಕೊಳ್ಳಿ, ಅದು ತುಂಬಾ ಮಂಗಳಕರವಾಗಿರುತ್ತದೆ.

ಹಲ್ಲಿ ಕಾಣಿಸುವುದು
ದೀಪಾವಳಿಯ ರಾತ್ರಿ ಮನೆಯಲ್ಲಿ ಹಲ್ಲಿಯನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ದೀಪಾವಳಿಯ ರಾತ್ರಿ ಮನೆಯಲ್ಲಿ ಹಲ್ಲಿಯನ್ನು ನೋಡಿದರೆ, ನಿಮ್ಮ ಮುಚ್ಚಿದ ಭಾಗ್ಯದ ಬಾಗಿಲು ತೆರೆದುಕೊಳ್ಳಲಿದೆ ಎಂದು ಅರ್ಥಮಾಡಿಕೊಳ್ಳಿ.

ಇದನ್ನೂ ಓದಿ-Diwali 2022: ದೀಪಾವಳಿಯ ರಾತ್ರಿ ಮಾಟ-ಮಂತ್ರಗಳ ಸಿದ್ಧಿ ನಡೆಯುತ್ತದೆ, ನಕಾರಾತ್ಮಕ ಶಕ್ತಿಗಳಿಂದ ಈ ರೀತಿ ಪಾರಾಗಿ

ಬೆಕ್ಕು ಮತ್ತು ಮೂಗಿಲಿ
ಬೆಕ್ಕು ಮತ್ತು ಮೂಗಿಲಿಯನ್ನು ನೋಡುವುದು ಕೂಡ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ದೀಪಾವಳಿಯ ರಾತ್ರಿ ನೀವು ಇವೆರಡನ್ನೂ ನೀವು ನೋಡಿದರೆ, ನಿಮ್ಮ ಅದೃಷ್ಟವು ಬೆಳಗಲಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು, ಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೆ ಎಂದರ್ಥ.

ಇದನ್ನೂ ಓದಿ-ದೀಪಾವಳಿ ಸಮಯದಲ್ಲಿ ಮನೆ ಶುಚಿಗೊಳಿಸುವಾಗ ಈ ಮೂರು ವಸ್ತುಗಳು ಸಿಕ್ಕರೆ ಸಿಗುವುದು ಶುಭ ಫಲ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News