Diwali 2022: ದೀಪಾವಳಿಯ ರಾತ್ರಿ ಮಾಟ-ಮಂತ್ರಗಳ ಸಿದ್ಧಿ ನಡೆಯುತ್ತದೆ, ನಕಾರಾತ್ಮಕ ಶಕ್ತಿಗಳಿಂದ ಈ ರೀತಿ ಪಾರಾಗಿ

Diwali 2022: ಹಾಗೆ ನೋಡಿದರೆ, ದೀಪಾವಳಿ ಹಬ್ಬವನ್ನು ಸುಖ-ಸಮೃದ್ಧಿಯ ಪರ್ವ ಎಂದು ಭಾವಿಸಲಾಗುತ್ತದೆ. ಆದರೆ, ಈ ದಿನ ತಂತ್ರ-ಮಂತ್ರಗಳ ಸಿದ್ಧಿ ಕೂಡ ನಡೆಯುತ್ತದೆ. ದೀಪಾವಳಿಯ ರಾತ್ರಿ ತಾಂತ್ರಿಕರು ತಮ್ಮ ಶಕ್ತಿಗಳ ಸಾಧನೆ ನಡೆಸುತ್ತಾರೆ ಎನ್ನಲಾಗುತ್ತದೆ.

Written by - Nitin Tabib | Last Updated : Oct 17, 2022, 01:51 PM IST
  • ಮಾಟ-ಮಂತ್ರ ಮತ್ತು ವಾಮಾಚಾರವು ನವರಾತ್ರಿ ಪ್ರಾರಂಭವಾದ ತಕ್ಷಣ
  • ಹಲವೆಡೆ ಪ್ರಾರಂಭವಾಗುತ್ತದೆ ಮತ್ತು ದೀಪಾವಳಿಯವರೆಗೆ ಮುಂದುವರಿಯುತ್ತದೆ.
  • ಇವುಗಳಿಂದ ಜನರು ಜಾಗ್ರತರಾಗಿರಬೇಕು.
Diwali 2022: ದೀಪಾವಳಿಯ ರಾತ್ರಿ ಮಾಟ-ಮಂತ್ರಗಳ ಸಿದ್ಧಿ ನಡೆಯುತ್ತದೆ, ನಕಾರಾತ್ಮಕ ಶಕ್ತಿಗಳಿಂದ ಈ ರೀತಿ ಪಾರಾಗಿ title=
Diwali 2022 Amavasya Remedies

Diwali: ದೀಪಾವಳಿಯ ರಾತ್ರಿ ಅಮವಾಸ್ಯೆಯ ರಾತ್ರಿಯಾಗಿದೆ ಮತ್ತು ಈ ರಾತ್ರಿ ತಂತ್ರ-ಮಂತ್ರಗಳ ಸಿದ್ಧಿಗಾಗಿ ತಾಂತ್ರಿಕರಿಗೆ ಬಹಳ ವಿಶೇಷವಾಗಿರುತ್ತದೆ. ಅಮವಾಸ್ಯೆಯ ಈ ರಾತ್ರಿಯನ್ನು ಕಾಳರಾತ್ರಿ, ಮಹಾನಿಶಾ, ದಿವ್ಯರಾಜನಿ ಮತ್ತು ಮಹಾಕೃಷ್ಣ ಎಂದೂ ಕೂಡ ಕರೆಯಲಾಗುತ್ತದೆ (ದೀಪಾವಳಿ 2022). ತಾಂತ್ರಿಕರು ಮತ್ತು ಅಘೋರಿಗಳು ಅಮವಾಸ್ಯೆಯ ರಾತ್ರಿ ತಮ್ಮ ಶಕ್ತಿಯನ್ನು ಸಾಧಿಸುತ್ತಾರೆ ಎನ್ನಲಾಗುತ್ತದೆ. ಕೆಲ ವಿಶೇಷ ದಿನಗಳಂದು ಅವರು ಮಾಡುವ ತಾಂತ್ರಿಕ ಸಾಧನೆ ವಿಶೇಷ ಫಲಿತಾಂಶಗಳನ್ನು ನೀಡುತ್ತದೆ ಎಂದು ತಂತ್ರ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ, ಇವುಗಳಲ್ಲಿ ದಸರಾ, ನವರಾತ್ರಿ ಮತ್ತು ದೀಪಾವಳಿ ಶಾಮೀಲಾಗಿವೆ. ದೀಪಾವಳಿಯ ರಾತ್ರಿಯನ್ನು ಇವುಗಳಲ್ಲಿ ಅತ್ಯಂತ ಶಕ್ತಿಶಾಲಿ ರಾತ್ರಿ ಎಂದು ಪರಿಗಣಿಸಲಾಗಿದೆ, ಇದನ್ನು ತಂತ್ರಶಾಸ್ತ್ರದ ಮಹಾರಾತ್ರಿ ಎಂದು ಕರೆಯಲಾಗುತ್ತದೆ.

ದೀಪಾವಳಿಯ ದಿನ ಮಾಡುವ ತಂತ್ರಗಳು ಹೆಚ್ಚು ಫಲಿಸುತ್ತವೆ
ಎಲ್ಲಾ ನಂಬಿಕೆಗಳು ಮತ್ತು ಧಾರ್ಮಿಕ ಗ್ರಂಥಗಳ ಪ್ರಕಾರ, ವಾಮಾಚಾರ ಮತ್ತು ತಂತ್ರ ತಿಯಾದಿಗಳ ಸಂಬಂಧವು ಋಗ್ವೇದ ಕಾಲದ್ದು ಎಂದು ನಂಬಲಾಗಿದೆ. ಅಥರ್ವವೇದದಲ್ಲೂ ಇದರ ಉಲ್ಲೇಖವಿದೆ. ದೀಪಾವಳಿಯ ಐದು ದಿನಗಳಲ್ಲಿ, ವಿಶೇಷವಾಗಿ ದೀಪಾವಳಿಯ ರಾತ್ರಿ, ಅನೇಕ ತಂತ್ರಿಗಳು ವಿವಿಧ ರೀತಿಯ ತಂತ್ರ ಅಭ್ಯಾಸಗಳನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಈ ದಿನ, ಅನೇಕ ರೀತಿಯ ತಂತ್ರ-ಮಂತ್ರಗಳನ್ನು ಅಳವಡಿಸಿಕೊಂಡು, ಶತ್ರುಗಳನ್ನು ಗೆಲ್ಲಲು, ಮನೆಯಲ್ಲಿ ಶಾಂತಿಯನ್ನು ಹೆಚ್ಚಿಸಲು, ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಮತ್ತು ಜೀವನದಲ್ಲಿ ಅನೇಕ ಅಡೆತಡೆಗಳನ್ನು ತೊಡೆದುಹಾಕಲು ವಿಚಿತ್ರವಾದ ವಾಮಾಚಾರವನ್ನು ಅವರು ಅಳವಡಿಸಿಕೊಳ್ಳುತ್ತಾರೆ. ಇವುಗಳಲ್ಲಿ ವಿಭಿನ್ನ ಪ್ರಕಾರಗಳಿವೆ. ಮಾಟಮಂತ್ರ, ವಾಮಾಚಾರ, ಭಾನಾಮತಿ ಸಿದ್ಧಿ ಇತ್ಯಾದಿಗಳು ಪ್ರಮುಖವಾಗಿವೆ. ಹೆಚ್ಚಾಗಿ ಮಂತ್ರಗಳನ್ನು ಶತ್ರುಗಳ ದುಷ್ಟತನದ ವಿರುದ್ಧ ಬಳಸಲಾಗುತ್ತದೆ ಮತ್ತು ಮಾಟವನ್ನು ಸ್ವಾರ್ಥಕ್ಕಾಗಿ ಬಳಸಲಾಗುತ್ತದೆ.

ತಂತ್ರ ಶಾಸ್ತ್ರದ ಪ್ರಕಾರ ದೀಪಾವಳಿಯಂದು ಮಾಡುವ ತಂತ್ರಗಳು ತುಂಬಾ ಪ್ರಭಾವಶಾಲಿಯಾಗಿರುತ್ತವೆ. ಈ ದಿನ ಮಂತ್ರಗಳನ್ನು ಪಠಿಸಲಾಗುತ್ತದೆ ಮತ್ತು ವಿಶೇಷ ಸಿದ್ಧಿಗಳ ಮೇಲೆ ವಿಜಯವನ್ನು ಸಾಧಿಸಲಾಗುತ್ತದೆ.

ದೀಪಾವಳಿಯ ದಿನ ನಡೆಯುವ ವಾಮಾಚಾರದಿಂದ ಎಚ್ಚರದಿಂದಿರಿ
ಮಾಟ-ಮಂತ್ರ ಮತ್ತು ವಾಮಾಚಾರವು ನವರಾತ್ರಿ ಪ್ರಾರಂಭವಾದ ತಕ್ಷಣ ಹಲವೆಡೆ ಪ್ರಾರಂಭವಾಗುತ್ತದೆ ಮತ್ತು ದೀಪಾವಳಿಯವರೆಗೆ ಮುಂದುವರಿಯುತ್ತದೆ. ಇವುಗಳಿಂದ ಜನರು ಜಾಗ್ರತರಾಗಿರಬೇಕು. ಇವುಗಳನ್ನು ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಮಾತ್ರವಲ್ಲದೆ ಸಣ್ಣ ಮತ್ತು ದೊಡ್ಡ ನಗರಗಳಲ್ಲಿಯೂ ನಡೆಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬೇರೆಯವರ ಮನೆಯಿಂದ ಸಿಹಿತಿಂಡಿಗಳು ಬಂದರೆ,  ಜನರು ಅದರಿಂದ ಒಂದಿಷ್ಟು ಸಿಹಿಯನ್ನು ತೆಗೆದು ಬಿಸಾಡುತ್ತಾರೆ. ಅದರ ನಂತರವೇ ಕುಟುಂಬ ಸದಸ್ಯರಿಗೆ ಅವುಗಳನ್ನು ತಿನ್ನಲು ಕೊಡುತ್ತಾರೆ.  ಈ ರೀತಿ ಮಾಡುವುದರಿಂದ ಆಹಾರದಲ್ಲಿ ವಾಮಾಚಾರ ನಡೆದಿದ್ದರೆ, ಕುಟುಂಬದವರ ಮೇಲೆ ಅದರ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ.

ಇದನ್ನೂ ಓದಿ-Diwali 2022 : ದೀಪಾವಳಿ ಸಮಯದಲ್ಲಿ ಅಪ್ಪಿತಪ್ಪಿಯೂ ಖರೀದಿಸಬೇಡಿ ಈ ವಸ್ತುಗಳನ್ನು!

ಇಂತಹ ಪರಿಸ್ಥಿತಿಯಲ್ಲಿ, ಕೆಲವರು ದೃಷ್ಟಿ ಮತ್ತು ವಾಮಾಚಾರವನ್ನು ತೆಗೆದುಹಾಕಲು ತಮ್ಮ ಕೈಯಲ್ಲಿ ಸ್ವಲ್ಪ ಉಪ್ಪನ್ನು ತೆಗೆದುಕೊಳ್ಳುತ್ತಾರೆ, ನಂತರ ಅದನ್ನು ನೀರಿನಲ್ಲಿ ಎಸೆಯುತ್ತಾರೆ. ಹೀಗೆ ಮಾಡುವುದರಿಂದ ದುಷ್ಟ ಶಕ್ತಿಗಳು ಅಡ್ಡಿಯಾಗುವುದಿಲ್ಲ ಎಂದು ನಂಬಲಾಗಿದೆ. ಈ ಸಮಯದಲ್ಲಿ, ಹುಡುಗಿಯರು ತಮ್ಮ ಕೂದಲನ್ನು ಬಿಚ್ಚಿ ತಿರುಗಾಡುವುದನ್ನು ನಿಷೇಧಿಸಲಾಗಿದೆ, ಹಾಗೆಯೇ ಟೆರೇಸ್ ಅಥವಾ ಮನೆಯ ನಿರ್ಜನ ಸ್ಥಳಗಳಲ್ಲಿ ಆಡುವುದನ್ನು ನಿಷೇಧಿಸಲಾಗಿದೆ. ಇದಲ್ಲದೆ, ದೀಪಾವಳಿಯಂದು ವಿವಿಧ ರೀತಿಯ ಶಾಸ್ತ್ರೀಯ ರಕ್ಷಾಕವಚ ಮತ್ತು ಯಂತ್ರಗಳನ್ನು ಧರಿಸುವುದರಿಂದ ಅಂತಹ ನಕಾರಾತ್ಮಕ ಶಕ್ತಿಗಳನ್ನು ತಪ್ಪಿಸಬಹುದು.

ಇದನ್ನೂ ಓದಿ-ಅಖಂಡ ಸಾಮ್ರಾಜ್ಯದ ಯೋಗ ರೂಪಿಸುತ್ತಿರುವ ಗುರು, ಕೋಟಿಗಳ ಒಡೆಯರಾಗುತ್ತಾರೆ ಈ ಮೂರು ರಾಶಿಯವರು .!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News