Tips To Get Rid Of Financial Problem: ಲಕ್ಷ್ಮಿಯ ಕೃಪಾವೃಷ್ಟಿಗಾಗಿ ಭಾನುವಾರ ಖಂಡಿತ ಈ ಉಪಾಯಗಳನ್ನು ಅನುಸರಿಸಿ

Sunday Tips: ಕಠಿಣ ಪರಿಶ್ರಮದ ಬಳಿಕವೂ ಕೂಡ ತಕ್ಕ ಫಲ ಪ್ರಾಪ್ತಿಯಾಗುತ್ತಿಲ್ಲ ಎಂದಾದರೆ ಚಿಂತಿಸುವ ಅಗತ್ಯವಿಲ್ಲ. ಶಾಸ್ತ್ರಗಳಲ್ಲಿ ಕೆಲ ಉಪಾಯಗಳನ್ನು ಸೂಚಿಸಲಾಗಿದ್ದು, ಇವುಗಳನ್ನು ನೀವು ಭಾನುವಾರ ಅನುಸರಿಸಿದರೆ, ನಿಮ್ಮ ಜೀವನದಲ್ಲಿನ ಸಂಕಷ್ಟಗಳು ದೂರವಾಗಲಿವೆ ಹಾಗೂ ಅದೃಷ್ಟದ ಬಾಗಿಲುಗಳು ತೆರೆದುಕೊಳ್ಳಲಿವೆ.

Written by - Nitin Tabib | Last Updated : Jul 17, 2021, 10:06 PM IST
  • ಭಾನುವಾರ ತಪ್ಪದೆ ಈ ಕೆಲಸಗಳನ್ನು ಮಾಡಿ.
  • ಈ ಉಪಾಯಗಳಿಂದ ದೇವಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.
  • ಮನೆಯಲ್ಲಿ ಧನವೃಷ್ಟಿಯಾಗುತ್ತದೆ.
Tips To Get Rid Of Financial Problem: ಲಕ್ಷ್ಮಿಯ ಕೃಪಾವೃಷ್ಟಿಗಾಗಿ ಭಾನುವಾರ ಖಂಡಿತ ಈ ಉಪಾಯಗಳನ್ನು ಅನುಸರಿಸಿ title=
Tips To Get Rid Of Financial Problem (File Photo)

ನವದೆಹಲಿ:  Sunday Tips - ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಾವುದೇ ಸಮಸ್ಯೆ ಇರಬಾರದು ಎಂದು ಬಯಸುತ್ತಾನೆ. ತಮ್ಮ ಜೀವನ ಐಶಾರಾಮಿಯಾಗಿ ಕಳೆಯಬೇಕು ಎಂದು ಎಲ್ಲರಿಗೂ ಅನಿಸುತ್ತದೆ. ಈ ಆಸೆಯನ್ನು ಪೂರೈಸಿಕೊಳ್ಳಲು ಆಟ ಹಗಲು ರಾತ್ರಿ ಶ್ರಮಿಸುತ್ತಾನೆ. ಆದರೆ ಅನೇಕ ಬಾರಿ ಕಠಿಣ ಪರಿಶ್ರಮ ಮಾಡಿದರೂ ಕೂಡ ಜೀವನದಲ್ಲಿನ ಸಮಸ್ಯೆಗಳಿಗೆ ಅಂತ್ಯವೇ ಇರಲ್ಲ.

ಭಾನುವಾರ ಈ ಉಪಾಯಗಳನ್ನು ಮಾಡಿ
ಕಠಿಣ ಪರಿಶ್ರಮದ ಬಳಿಕವೂ ಕೂಡ ಜೀವನ ದಲ್ಲಿ ತಕ್ಕ ಫಲ ಪ್ರಾಪ್ತಿಯಾಗುತ್ತಿಲ್ಲ ಎಂದಾದರೆ, ಇದೀಗ ಚಿಂತಿಸುವ ಅವಶ್ಯಕತೆ ಇಲ್ಲ. ಶಾಸ್ತ್ರಗಳಲ್ಲಿ ಸೂಚಿಸಲಾಗಿರುವ ಕೆಲ ಉಪಾಯಗಳನ್ನು ಭಾನುವಾರ (Sunday) ಮಾಡುವುದರಿಂದ ನಿಮ್ಮ ಜೀವನದಲ್ಲಿನ ಸಮಸ್ಯೆಗಳು ಅಂತ್ಯವಾಗಲಿವೆ (Financial Problems) ಹಾಗೂ ಅದೃಷ್ಟದ ಬಾಗಿಲುಗಳು ತೆರೆದುಕೊಳ್ಳಲಿವೆ.

ಇದನ್ನೂ ಓದಿ-Shani Dev: ಮುಂದಿನ 3 ವರ್ಷ ಈ 4 ರಾಶಿಗಳ ಜಾತಕದವರಿಗೆ ಶನಿ ಶಿಕ್ಷೆಯಿಂದ ಮುಕ್ತಿ

ಈ ಉಪಾಯಗಳು ನಿಮ್ಮ ಅದೃಷ್ಟದ ಬಾಗಿಲುಗಳನ್ನು ತೆರೆಯಲಿವೆ
1. ಶಾಸ್ತ್ರಗಳ ಅನುಸಾರ ಭಾನುವಾರ ಮನೆಯ ಎಲ್ಲ ಸದಸ್ಯರ ಹಣೆಗೆ ಚಂದನದ ಬೊಟ್ಟು ಇಡಿ. ಇದರಿಂದ ದೇವಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಹಾಗೂ ಮನೆಯಲ್ಲಿ ಧನವೃಷ್ಟಿಯಾಗುತ್ತದೆ.
2. ಭಾನುವಾರ ಸೂರ್ಯಾಸ್ತದ ಬಳಿಕ ಅಶ್ವತ್ಥ ಮರದ ಬಳಿ ನಾಲ್ಕು ಮುಖಗಳ ದೀಪ ಉರಿಸಿ. ಇದರಿಂದ ಧನವೃಷ್ಟಿಯಾಗುತ್ತದೆ ಹಾಗೂ ಕಷ್ಟಗಳು ಪರಿಹರಿಸುತ್ತವೆ.
3. ಭಾನುವಾರದ ದಿನ ಮೀನುಗಳಿಗೆ ಹಿಟ್ಟಿನ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ತಿನ್ನಲು ನೀಡಿ. ಇದರಿಂದ ಹಣಕಾಸಿನ ಮುಗ್ಗಟ್ಟಿಗೆ (Financial Crisis) ಪರಿಹಾರ ಲಭಿಸುತ್ತದೆ.
4. ಭಾನುವಾರ ಮನೆಯ ಮುಖ್ಯದ್ವಾರದ ಎರಡೂ ಬದಿಗೆ ತುಪ್ಪದ ದೀಪ ಉರಿಸಿ. ಇದರಿಂದ ದೇವಿ ಲಕ್ಷ್ಮಿಯ ಕೃಪಾದೃಷ್ಟಿ ಸದಾ ನಿಮ್ಮ ಮೇಲೆ ಇರುತ್ತದೆ.
5. ಭಾನುವಾರದ ದಿನ ಪೊರಕೆ ಖರೀದಿ ಎಂದಿಗೂ ಶುಭಕರ. ಆದರೆ, ಒಂದಲ್ಲ ಒಟ್ಟು ಮೂರು ಪೊರಕೆಗಳನ್ನು ಖರೀದಿಸಿ ಮನೆಗೆ ತನ್ನಿ. ಮಾರನೆ ದಿನ ಈ ಮೂರು ಪೊರಕೆಗಳನ್ನು ಯಾವುದಾದರೊಂದು ದೇವಸ್ಥಾನದ ಹೊರಗಿಡಿ. ಇದರಿಂದ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ.

ಇದನ್ನೂ ಓದಿ-Garuda Purana: ಗರುಡ ಪುರಾಣದ ಪ್ರಕಾರ ಇವುಗಳನ್ನು ಕಂಡರೆ ಸಾಕು ತಾಯಿ ಲಕ್ಷ್ಮೀ ಕೃಪೆಗೆ ಪಾತ್ರರಾಗಬಹುದು

6. ಒಂದು ವೇಳೆ ನಿಮ್ಮ ಮನಸ್ಸಿನಲ್ಲಿರುವ ಯಾವುದೇ ಒಂದು ಇಚ್ಛೆ ಪೂರ್ಣವಾಗುತ್ತಿಲ್ಲ ಎಂದಾದರೆ. ಭಾನುವಾರ ನಿಮ್ಮ ಇಚ್ಛೆಯನ್ನು ಅಶ್ವತ್ಥಮರದ ಎಲೆ ಮೇಲೆ ಬರೆದು ಅದನ್ನು ನೀರಿನಲ್ಲಿ ಹರಿಬಿಡಿ. ಇದರಿಂದ ನಿಮ್ಮ ಮನೋಕಾಮನೆ ಪೂರ್ತಿಯಾಗುತ್ತದೆ.
7. ಭಾನುವಾರ ವಿವಿಧ ಜಾತಕದವರ ಮೇಲೆ ಸೂರ್ಯನ ವಿಶೇಷ ಕೃಪೆ ಇರುತ್ತದೆ. ಈ ದಿನ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ. ಇದರಿಂದ ಸೂರ್ಯದೇವನ ಕೃಪೆ ಸದಾ ನಿಮ್ಮೇಲೆ ಇರುತ್ತದೆ ಹಾಗೂ ನಿಮಗೆ ಎಲ್ಲ ಕೆಲಸಗಳಲ್ಲಿ ಕಾರ್ಯಸಿದ್ಧಿ ಲಭಿಸುತ್ತದೆ.
8. ಭಾನುವಾರ ಇರುವೆಗಳಿಗೆ ಸಕ್ಕರೆ ತಿನ್ನಿಸಲು ಮರೆಯದಿರಿ. ನಂಬಿಕೆಗಳ ಅನುಸಾರ, ಭಾನುವಾರ ಇರುವೆಗಳಿಗೆ ಸಕ್ಕರೆ ತಿನ್ನಿಸುವುದರಿಂದ ದೇವಿ ಲಕ್ಷ್ಮಿಯ (Goddess Lakshmi) ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ-Loan: ಈ ದಿನ ಅಪ್ಪಿತಪ್ಪಿಯೂ ಯಾರಿಂದಲೂ ಸಾಲ ತೆಗೆದುಕೊಳ್ಳಲೇಬಾರದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News