Garuda Purana: ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಇಂದಿನಿಂದಲೇ ಈ ಅಭ್ಯಾಸಗಳನ್ನು ಬಿಟ್ಟುಬಿಡಿ

Garuda Purana: ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬೇಕು ಮತ್ತು ಮನೆಯಲ್ಲಿ ಶಾಂತಿ ನೆಲೆಸಬೇಕು ಎಂದು ಬಯಸುತ್ತಾರೆ. ನೀವೂ ಸಹ ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಬಯಸಿದರೆ ಇಂದಿನಿಂದಲೇ ಈ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ.

Written by - Yashaswini V | Last Updated : May 19, 2022, 01:12 PM IST
  • ಗರುಡ ಪುರಾಣದ ಪ್ರಕಾರ ನಮ್ಮ ನಿತ್ಯದ ಕೆಲವು ಅಭ್ಯಾಸಗಳಿಂದ (ಕೆಟ್ಟ ಅಭ್ಯಾಸಗಳು) ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು.
  • ಇದರಿಂದಾಗಿ ಅಂತಹ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಹುದು ಎಂದು ಹೇಳಲಾಗುತ್ತದೆ.
  • ಹಾಗಿದ್ದರೆ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಯಾವ ಅಭ್ಯಾಸಗಳನ್ನೂ ತ್ಯಜಿಸುವುದು ಒಳ್ಳೆಯದು...
Garuda Purana: ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಇಂದಿನಿಂದಲೇ ಈ ಅಭ್ಯಾಸಗಳನ್ನು ಬಿಟ್ಟುಬಿಡಿ  title=
How to get goddess lakshmi blessings

ಗರುಡ ಪುರಾಣ: ಗರುಡ ಪುರಾಣವು ಸನಾತನ ಧರ್ಮದ ಒಂದು ಗ್ರಂಥವಾಗಿದೆ. ಇದರಲ್ಲಿ ಯಶಸ್ವೀ ಜೀವನವನ್ನು ನಡೆಸಲು ಅನುಸರಿಸಬೇಕಾದ ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ಗರುಡ ಪುರಾಣದಲ್ಲಿ ತಿಳಿಸಿರುವ ವಿಷಯಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುವುದಲ್ಲದೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ. 

ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬೇಕು ಮತ್ತು ಮನೆಯಲ್ಲಿ ಶಾಂತಿ ನೆಲೆಸಬೇಕು. ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಬೇಕು ಎಂದು ಬಯಸುತ್ತಾರೆ. ನೀವೂ ಸಹ ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಬಯಸಿದರೆ ಇಂದಿನಿಂದಲೇ ಈ ಕೆಟ್ಟ ಅಭ್ಯಾಸಗಳನ್ನು ತ್ಯಜಿಸುವುದು ಒಳ್ಳೆಯದು.

ಗರುಡ ಪುರಾಣದ ಪ್ರಕಾರ ನಮ್ಮ ನಿತ್ಯದ ಕೆಲವು ಅಭ್ಯಾಸಗಳಿಂದ (ಕೆಟ್ಟ ಅಭ್ಯಾಸಗಳು) ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು. ಇದರಿಂದಾಗಿ ಅಂತಹ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಯಾವ ಅಭ್ಯಾಸಗಳನ್ನೂ ತ್ಯಜಿಸುವುದು ಒಳ್ಳೆಯದು ಎಂದು ತಿಳಿಯೋಣ....

ಲಕ್ಷ್ಮೀ ಕೃಪೆಗೆ ಪಾತ್ರರಾಗಲು ಇಂದೇ ಈ ಅಭ್ಯಾಸಗಳನ್ನು ತ್ಯಜಿಸಿ :-
ಸೂರ್ಯ ಉದಯಿಸಿದ ನಂತರ ಅಪ್ಪಿತಪ್ಪಿಯೂ ಮಲಗಬೇಡಿ:

ಗರುಡ ಪುರಾಣದಲ್ಲಿ ಸೂರ್ಯೋದಯಕ್ಕೂ ಮುನ್ನ ಹಾಸಿಗೆ ಬಿಡಬೇಕು ಎಂದು ಹೇಳಲಾಗಿದೆ. ಇದನ್ನು ಮಾಡುವುದರಿಂದ, ತಾಯಿ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ ಎನ್ನಲಾಗುತ್ತದೆ. ಬೆಳಗ್ಗೆ ಎದ್ದ ಕೂಡಲೇ ಮನೆ ಸ್ವಚ್ಛಗೊಳಿಸಿ, ಸ್ನಾನ ಮಾಡಿ ಶುಭ್ರವಾದ ಉಡುಪು ಧರಿಸಿ. ನಂತರ ಮೊದಲು ಭಗವಂತನ ನಾಮಸ್ಮರಣೆ ಮಾಡಿ ಭೂಮಿ ತಾಯಿಗೆ ನಮನ ಸಲ್ಲಿಸಿ. ಇದಾದ ನಂತರ ಹಿರಿಯರಿಗೆ ನಮಸ್ಕಾರ ಮಾಡಿ. ಇದರಿಂದ ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು. ಈ ಅಭ್ಯಾಸವು ಹಣದ ಹೊರತಾಗಿ ಉತ್ತಮ ಆರೋಗ್ಯವನ್ನೂ ಕರುಣಿಸುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Shukra Rashi Parivartan: ಮೇ 23 ರಿಂದ ಬೆಳಗಲಿದೆ ಈ ಐದು ರಾಶಿಯವರ ಅದೃಷ್ಟ

ಅತಿಯಾಗಿ ತಿನ್ನುವುದು:
ಉತ್ತಮ ಆರೋಗ್ಯಕ್ಕೆ ಸಮಯಕ್ಕೆ ಸರಿಯಾಗಿ ತಿನ್ನುವುದು ಬಹಳ ಮುಖ್ಯ. ಆದರೆ ನಿಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಆಹಾರ ಸೇವಿಸಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ರುಚಿಯಾಗಿದೆ ಎಂತಲೋ ಅಥವಾ ತಿನ್ನುವ ಚಟದಿಂದಲೂ ಅಗತ್ಯವಿಲ್ಲದಿದ್ದರೂ ಹೆಚ್ಚು ಆಹಾರ ಸೇವಿಸುವುದು ಒಳ್ಳೆಯದಲ್ಲ. ನಮ್ಮ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸೇವನೆ ನಾವು ಇತರರ ಆಹಾರವನ್ನು ಕಸಿದುಕೊಂಡಂತೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಹೆಚ್ಚು ಆಹಾರ ಸೇವಿಸುವುದರಿಂದ  ಆರೋಗ್ಯವೂ ಹದಗೆಡುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಹೀಗೆ ಮಾಡುವುದರಿಂದ ರೋಗಗಳ ಕಪಿಮುಷ್ಠಿಗೆ ಸಿಲುಕುತ್ತಾರೆ. ಹಾಗಾದರೆ ನಿಮಗೆ ಅಂತಹ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. 

ಕೊಳಕು ಹಲ್ಲುಗಳು:
ಸ್ವಚ್ಛವಾಗಿರುವುದು ಒಳ್ಳೆಯ ನಡತೆಯ ಸಂಕೇತ. ನಿಮ್ಮ ಬಾಯಿಯ ಜೊತೆಗೆ, ನೀವು ಪ್ರತಿದಿನ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು. ಕೊಳಕು ಹಲ್ಲುಗಳಲ್ಲಿ ಹುಳುಗಳು ಬರುವುದು ಮಾತ್ರವಲ್ಲದೆ ಇತರರ ಮುಂದೆ ನಿಮಗೆ ಕಿರಿಕಿರಿ ಉಂಟುಮಾಡುತ್ತದೆ. ಅಂತಹ ಕೊಳಕು ಜನರಿಗೆ ಲಕ್ಷ್ಮಿ ಎಂದಿಗೂ ತನ್ನ ಕೃಪೆಯನ್ನು ಹರಿಸುವುದಿಲ್ಲ. ಅದಕ್ಕಾಗಿಯೇ ನೀವು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸಿದರೆ, ಈ ಅಭ್ಯಾಸವನ್ನು ತಕ್ಷಣವೇ ಬಿಟ್ಟುಬಿಡಿ ಮತ್ತು ನಿತ್ಯ ಹಲ್ಲುಗಳನ್ನು ಶುಚಿಯಾಗಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಬೇರೆಯವರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳುವುದು:
ಕಾಗೆ ಹಾಗೂ ಕೋಗಿಲೆ ಎರಡರ ಬಣ್ಣವೂ ಒಂದೇ. ಆದರೂ ಜನರು ಕೋಗಿಲೆಯನ್ನು ಇಷ್ಟಪಡುತ್ತಾರೆ. ಕಾಗೆಗಳನ್ನು ಇಷ್ಟಪಡುವುದಿಲ್ಲ. ಇದಕ್ಕೆ ಕಾರಣ ಕಾಗೆ-ಕೋಗಿಲೆಗಳ ಧ್ವನಿ. ಕೋಗಿಲೆಯು ತನ್ನ ಮಧುರವಾದ ಧ್ವನಿಯಿಂದ ಜನರ ಮನ ಗೆದ್ದಿದೆ. ಆದರೆ, ಕಾಗೆಗಳ ಕರ್ಕಶ ಧ್ವನಿಯನ್ನು ಯಾರೂ ಇಷ್ಟಪಡುವುದಿಲ್ಲ. ಹಾಗೆ, ನಾವು ಇತರರೊಂದಿಗೆ ಮಾತನಾಡುವಾಗ ನಮ್ಮ ಮಾತು ಹಿತವಾಗಿರಬೇಕು. ಅದು ಬೇರೆಯವರ ಮನಸ್ಸನ್ನು ನೋಯಿಸುವಂತೆ ಇರಬಾರದು ಎಂಬ ಬಗ್ಗೆ ನಿಗಾವಹಿಸಿ.

ಇದನ್ನೂ ಓದಿ- ಹಿಮ್ಮುಖ ಚಲನೆ ಆರಂಭಿಸಲಿರುವ ಶನಿ ಮಹಾತ್ಮ .! ಮತ್ತೆ ಕಾಡಲಿದ್ದಾನೆ ಈ ಎರಡು ರಾಶಿಯವರನ್ನು

ಕೊಳಕು ಬಟ್ಟೆ ಧರಿಸುವುದು:
ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಪ್ರತಿದಿನ ಶುದ್ಧ ಮತ್ತು ತೊಳೆದ ಬಟ್ಟೆಗಳನ್ನು ಧರಿಸಬೇಕು. ಹೀಗೆ ಮಾಡುವುದರಿಂದ ವ್ಯಾಪಾರ ವೃದ್ಧಿಯಾಗುತ್ತದೆ ಮತ್ತು ಆರೋಗ್ಯವೂ ಚೆನ್ನಾಗಿರುತ್ತದೆ. ತಾಯಿ  ಲಕ್ಷ್ಮಿ ಯಾವಾಗಲೂ ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸುವ ಜನರಿಂದ ದೂರವಿರುತ್ತಾಳೆ. ಆದ್ದರಿಂದ, ನೀವು ಪ್ರತಿದಿನ ಸ್ವಚ್ಛವಾದ ಬಟ್ಟೆಗಳನ್ನು ಧರಿಸುವುದನ್ನು ರೂಢಿಸಿಕೊಳ್ಳಬೇಕು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News