Garuda Purana: ನಿಜವಾಗಲೂ ಭೂತ-ಪ್ರೇತಗಳು ಇರುತ್ತವೆಯೇ? ಗರುಡ ಪುರಾಣದಲ್ಲಿ ಅಡಗಿದೆ ಈ ಪ್ರಶ್ನೆಯ ರಹಸ್ಯ

Astrology - ಪ್ರಪಂಚದಲ್ಲಿ ನಿಜವಾಗಿಯೂ ಭೂತ-ಪ್ರೇತಗಳು (Ghost) ಇವೆಯಾ? ಈ ಪ್ರಶ್ನೆಗೆ ಸಂಬಂಧಿಸಿದಂತೆ  ಕುರಿತು ಜಗತ್ತಿನಲ್ಲಿ ಹಲವು ಸಂಶೋಧನೆಗಳು ನಡೆದಿವೆ, ಆದರೆ ಇದುವರೆಗೆ ಯಾರು ಇದಕ್ಕೆ ಸರಿಯಾದ ಉತ್ತರ ಕಂಡುಬಂದಿಲ್ಲ, ಆದರೆ ಈ ರಹಸ್ಯಕ್ಕೆ ಉತ್ತರವು ಗರುಡ ಪುರಾಣದಲ್ಲಿದೆ  (Garuda Purana).

Written by - Nitin Tabib | Last Updated : Oct 16, 2021, 06:41 PM IST
  • ಸಾವಿನ ಬಳಿಕವೂ ಜೀವನ ಇದೆಯಾ?
  • ಭೂತ -ಪ್ರೇತಗಳಿಗೂ ವಿವಿಧ ಶ್ರೇಣಿಗಳಿವೆ
  • ಅಕಾಲಿಕ ಮರಣ ಹೊಂದಿದವರು ಭೂತ-ಪ್ರೇತಗಳಾಗುತ್ತಾರೆಯೇ?
Garuda Purana: ನಿಜವಾಗಲೂ ಭೂತ-ಪ್ರೇತಗಳು ಇರುತ್ತವೆಯೇ? ಗರುಡ ಪುರಾಣದಲ್ಲಿ ಅಡಗಿದೆ ಈ ಪ್ರಶ್ನೆಯ ರಹಸ್ಯ title=
Garuda Purana (Representational Image)

ನವದೆಹಲಿ:  Garuda Purana - ಪ್ರತಿಯೊಬ್ಬರೂ ಬದುಕಿರುವಾಗ ಜೀವನ ಏನು ಎಂಬ ಅನುಭವವನ್ನು ಪಡೆಯುತ್ತಾರೆ. ಆದರೆ ಸಾವಿನ ನಂತರ ಜೀವನವಿದೆಯೇ? ಜಗತ್ತಿನಲ್ಲಿ ನಿಜವಾಗಿಯೂ ಭೂತ-ಪ್ರೇತಗಳಿವೆಯಾ?

ಸಾವಿನ ಬಳಿಕವೂ ಜೀವನ ಇರುತ್ತವೆಯಾ?
ಈ ಪ್ರಶ್ನೆಯ ಕುರಿತು ಜಗತ್ತಿನಲ್ಲಿ ಅನೇಕ ಸಂಶೋಧನೆಗಳು ನಡೆದಿವೆ ಆದರೆ ಇದುವರೆಗೆ ಇದಕ್ಕೆ ಯಾರೂ ಕೂಡ ಸರಿಯಾದ ಉತ್ತರ ಕಂಡು ಹಿಡಿದಿಲ್ಲ. ಒಬ್ಬ ವ್ಯಕ್ತಿಯು ದೇಹವನ್ನು ತೊರೆದಾಗ ಮಾತ್ರ ಸಾವಿನ ನಂತರದ (Life After Death) ಜೀವನವನ್ನು ಅರಿತುಕೊಳ್ಳಬಹುದು ಎಂದು ಜನರು ಹೇಳುತ್ತಾರೆ. ಆದರೆ, ಒಬ್ಬ ವ್ಯಕ್ತಿಯು ಮರಣಹೊಂದಿದಾಗ ಆತನು ಸಾವಿನ ನಂತರ ಜೀವನದ ಅನುಭವವನ್ನು ಹೇಗೆ ವಿವರಿಸಲು ಸಾಧ್ಯ? ಈ ಪ್ರಶ್ನೆಯೂ ಅಷ್ಟೇ ಸತ್ಯತೆಯಿಂದ ಕೂಡಿದೆ.

ಭೂತ-ಪ್ರೇತಗಳ (Spirit)  ಅಸ್ತಿತ್ವದ ಬಗ್ಗೆ ಒಂದು ವೇಳೆ ನೀವೂ ಕೂಡ ತಿಳಿದುಕೊಳ್ಳಲು ಬಯಸಿದರೆ, ನೀವು ಗರುಡ ಪುರಾಣವನ್ನು ಓದಬೇಕು. ಈ ಪುರಾಣದಲ್ಲಿ, ಆತ್ಮ, ಚೈತನ್ಯ ಮತ್ತು ಸೂಕ್ಷ್ಮ ಆತ್ಮದ (Ghost)ನಡುವಿನ ವ್ಯತ್ಯಾಸವನ್ನು ಸಹ ಹೇಳಲಾಗಿದೆ. ಅಲ್ಲದೆ, ಸಾವಿನ ಸಮಯದಲ್ಲಿ ಮತ್ತು ಅದರ ನಂತರದ ಪರಿಸ್ಥಿತಿಗಳ ಕುರಿತು ವಿವರಿಸಲಾಗಿದೆ. ಗರುಡ ಪುರಾಣದಲ್ಲಿ (Garuda Purana) ಭೂತ-ಪ್ರೇತಗಳ ಬಗ್ಗೆ ಏನು ಹೇಳಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. 

ಭೂತ-ಪ್ರೇತಗಳಿಗೂ ಕೂಡ ಶ್ರೇಣಿಗಳಿವೆಯಂತೆ
ಗರುಡ ಪುರಾಣದ (Sanatana Dharma) ಪ್ರಕಾರ, ಯಾವಾಗ ಆತ್ಮವು ಭೌತಿಕ ದೇಹದಲ್ಲಿ ವಾಸಿಸುತ್ತದೆಯೋ, ಆಗ ಅದನ್ನು ಜೀವಾತ್ಮ ಎಂದು ಕರೆಯಲಾಗುತ್ತದೆ. ಅದು ಸೂಕ್ಷ್ಮ ಶರೀರವನ್ನು ಪ್ರವೇಶಿಸಿದಾಗ, ಅದನ್ನು ಸೂಕ್ಷ್ಮ ಆತ್ಮ ಎಂದು ಕರೆಯಲಾಗುತ್ತದೆ. ಇದೇ ವೇಳೆ, ಕಾಮ ಮತ್ತು ಬಯಕೆಯ ದೇಹವನ್ನು ಪ್ರವೇಶಿಸಿದ ನಂತರ, ಅದನ್ನು ಆತ್ಮದ ಆತ್ಮ ಎಂದು ಕರೆಯಲಾಗುತ್ತದೆ. ಈ ಆತ್ಮಗಳು ತಮ್ಮದೇ ಆದ ವರ್ಗಗಳನ್ನು ಹೊಂದಿವೆ. ಅವುಗಳನ್ನು ಯಮ, ಶಾಕಿನಿ, ಡಾಕಿನಿ, ಮಾಟಗಾತಿ, ಭೂತ, ಪ್ರೇತ, ರಾಕ್ಷಸ ಮತ್ತು ರಕ್ತಪಿಶಾಚಿ ಎಂದು ಕರೆಯಲಾಗುತ್ತದೆ.

ಧಾರ್ಮಿಕ ಗ್ರಂಥಗಳಲ್ಲಿ 84 ಲಕ್ಷ ಯೋನಿಗಳ ಕುರಿತು ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಪ್ರಾಣಿಗಳು, ಪಕ್ಷಿಗಳು, ಮನುಷ್ಯರು, ಸಸ್ಯಗಳು, ಕೀಟಗಳು ಮತ್ತು ಪತಂಗಗಳು ಶಾಮೀಲಾಗಿವೆ. ಈ ಹೆಚ್ಚಿನ ಯೋನಿಗಳಲ್ಲಿ, ದೇಹವನ್ನು ಬಿಟ್ಟ ನಂತರ ಆತ್ಮಗಳು ಅದೃಶ್ಯ ಭೂತ ಪಿಶಾಚಿ ಯೋನಿಗಳಿಗೆ ಹೋಗುತ್ತವೆ . ಇವು ಗೋಚರಿಸುವುದಿಲ್ಲ ಹಾಗೂ ಅವು ಬಲಿಷ್ಠಕೂಡ ಆಗಿರುವುದಿಲ್ಲ. ಇನ್ನೊಂದೆಡೆ ಕೆಲವು ಸದ್ಗುಣಶೀಲ ಆತ್ಮಗಳು ತಮ್ಮ ಒಳ್ಳೆಯ ಕಾರ್ಯಗಳ ಆಧಾರದ ಮೇಲೆ ಗರ್ಭಧರಿಸುತ್ತವೆ ಎನ್ನಲಾಗಿದೆ.

ಅಕಾಲಿಕ ಸಾವಿಗೀಡಾಗುವವರು ಆತ್ಮಗಳಾಗುತ್ತಾರೆಯೇ?
ಗರುಡ ಪುರಾಣದ ಪ್ರಕಾರ, ಅಪಘಾತ, ಕೊಲೆ, ಆತ್ಮಹತ್ಯೆ ಅಕಾಲಿಕವಾಗಿ ಸಾಯುವವರ ಆತ್ಮಗಳು  ನಂತರ ಪ್ರೇತಗಳಾಗುತ್ತವೆ ಎನ್ನಲಾಗಿದೆ. ಇದಲ್ಲದೆ, ಪ್ರೀತಿ, ಕೋಪ, ದ್ವೇಷ, ದುರಾಸೆ, ಕಾಮ, ಹಸಿವು ಮತ್ತು ಬಾಯಾರಿಕೆಯಿಂದ ಸಾಯುವವರ ಆತ್ಮಗಳು ಸಹ ಜಗತ್ತನ್ನು ಅತೃಪ್ತಿಗೊಳಿಸುತ್ತವೆ. ಅದಕ್ಕಾಗಿಯೇ ಅವು ಕೂಡ ಭೂತ-ಪ್ರೇತಗಳಾಗುತ್ತವೆ ಎನ್ನಲಾಗಿದೆ. 

ಇದನ್ನೂ ಓದಿ-Garuda Purana: ಕೆಟ್ಟ ಕೆಲಸಗಳು ಮಾತ್ರವಲ್ಲ, ಒಳ್ಳೆಯ ಕಾರ್ಯಗಳು ಕೂಡ ಜೀವನದಲ್ಲಿ ಬಿಕ್ಕಟ್ಟನ್ನು ತರಬಹುದು, ಇಲ್ಲಿದೆ ಕಾರಣ

ಅತೃಪ್ತ ಆತ್ಮಗಳು ಸುತ್ತಾಡುತ್ತವೆ
ಇಂತಹ ಆತ್ಮಗಳ ತೃಪ್ತಿ ಮತ್ತು ಮೋಕ್ಷಕ್ಕಾಗಿ ಧರ್ಮಗ್ರಂಥಗಳಲ್ಲಿ ಪರಿಹಾರಗಳನ್ನು ಸೂಚಿಸಲಾಗಿದೆ. ಅವುಗಳಿಗೆ ತರ್ಪಣ ಮತ್ತು ಶ್ರಾದ್ಧ ಮಾಡಲಾಗುತ್ತದೆ. ಈ ಅಕಾಲಿಕ ಮರಣ ಅಥವಾ ಅತೃಪ್ತಿಯಿಂದಾಗಿ, ಸತ್ತವರ ಆತ್ಮಗಳು ತೃಪ್ತಿ ಹೊಂದುತ್ತವೆ ಮತ್ತು ಅವರು ಭೂತ-ಪ್ರೇತಗಳ ಬಂಧನವನ್ನು ತೊರೆದು ಮೋಕ್ಷಕ್ಕೆ ಹೋಗುತ್ತವೆ ಎನ್ನಲಾಗಿದೆ. ಇಂತಹ ಅತೃಪ್ತ ಆತ್ಮಗಳ ವಿಮೋಚನೆಗೆ ವ್ಯವಸ್ಥೆಗಳನ್ನು ಮಾಡದಿದ್ದರೆ, ಅವು ಅಲೆದಾಡುತ್ತಲೇ ಇರುತ್ತವೆ ಮತ್ತು ಅದು ಕುಟುಂಬದ ಸಂತೋಷ ಮತ್ತು ಶಾಂತಿಯ ಮೇಲೂ ಪರಿಣಾಮ ಬೀರುತ್ತವೆ. 

ಇದನ್ನೂ ಓದಿ-Garuda Purana : ಈ 5 ಜನರ ಮನೆಗಳಲ್ಲಿ ಅಪ್ಪಿ ತಪ್ಪಿಯೂ ಊಟ ಮಾಡಬೇಡಿ : ಅದು ಪಾಪದಂತೆ ಭಾಸವಾಗುತ್ತದೆ

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Garuda Purana: ಮಹಿಳೆಯರ ಜೊತೆಗೆ ಮಾಡಲಾಗುವ ಈ ಕೆಲಸದಿಂದ ಸ್ವರ್ಗ ಸಿಗುತ್ತಾ? ಅಥವಾ ನರಕ ಸಿಗುತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News