Dreams In Pitru Paksha : ಪಿತೃ ಪಕ್ಷದಲ್ಲಿ ಬೀಳುವ ಕನಸುಗಳಿಗೂ ಇದೇ ವಿಶೇಷ ಅರ್ಥ

Dreams In Pitru Paksha :  ಪಿತೃ ಪಕ್ಷದ ಸಮಯದಲ್ಲಿ ಬರುವ ಕನಸುಗಳು ಮತ್ತು ಇತರ ಚಿಹ್ನೆಗಳು ಬಹಳ ವಿಶೇಷವಾದ ಅರ್ಥಗಳನ್ನು ಹೊಂದಿವೆ. ಇವು ಪೂರ್ವಜರು ನೀಡುವ ವಿಶೇಷ ಸೂಚನೆ ಎಂದೂ ಕೂಡ ನಂಬಲಾಗುತ್ತದೆ, ಇವುಗಳ ವಿಶೇಷ ಅರ್ಥವನ್ನು ಗರುಡ ಪುರಾಣದಲ್ಲಿ ನೀಡಲಾಗಿದೆ.  

Written by - Yashaswini V | Last Updated : Sep 24, 2021, 09:20 AM IST
  • ಪಿತೃ ಪಕ್ಷದ ಸಮಯದಲ್ಲಿ ಬರುವ ಕನಸುಗಳು ವಿಶೇಷ ಅರ್ಥವನ್ನು ಹೊಂದಿವೆ
  • ಪಿತೃ ಪಕ್ಷದಲ್ಲಿ ಬೀಳುವ ಪೂರ್ವಜರ ಕನಸುಗಳ ಬಗ್ಗೆ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ
  • ಪೂರ್ವಜರು ಕನಸಿನ ಮೂಲಕ ವಿಶೇಷ ಚಿಹ್ನೆಗಳನ್ನು ನೀಡುತ್ತಾರೆ ಎಂದು ನಂಬಲಾಗಿದೆ
Dreams In Pitru Paksha : ಪಿತೃ ಪಕ್ಷದಲ್ಲಿ ಬೀಳುವ ಕನಸುಗಳಿಗೂ ಇದೇ ವಿಶೇಷ ಅರ್ಥ title=
Dreams in Pitru Paksha- ಪಿತೃ ಪಕ್ಷದಲ್ಲಿ ಬೀಳುವ ಕನಸುಗಳಿಗೂ ಇದೇ ವಿಶೇಷ ಅರ್ಥ

Dreams In Pitru Paksha : ಇತರ ಕನಸುಗಳಂತೆ ಪೂರ್ವಜರು ಕನಸಿನಲ್ಲಿ (Dreams In Pitru Paksha) ಕಾಣಿಸಿಕೊಳ್ಳುವುದಕ್ಕೂ ವಿಶೇಷ ಅರ್ಥವಿದೆ. ಅದರಲ್ಲೂ ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರು ಕನಸಿನಲ್ಲಿ ಕಂಡರೆ, ಅವರು ನಿಮಗೆ ಕೆಲವು ವಿಶೇಷ ಚಿಹ್ನೆಯನ್ನು ನೀಡುತ್ತಿದ್ದಾರೆ ಎಂದರ್ಥ. ಸೆಪ್ಟೆಂಬರ್ 20 ರಿಂದ ಆರಂಭವಾದ ಪಿತೃ ಪಕ್ಷ 2021 ಅಕ್ಟೋಬರ್ 6 ರವರೆಗೆ ನಡೆಯಲಿದೆ. ಈ ಸಮಯದಲ್ಲಿ ನೀವು ನಿಮ್ಮ ಪೂರ್ವಜರನ್ನು ನಿಮ್ಮ ಕನಸಿನಲ್ಲಿ ನೋಡಿದರೆ, ಇದು ದೊಡ್ಡ ಸೂಚನೆ ಎಂದು ತಿಳಿಯಿರಿ. ಇಂದು ನಾವು ಅಂತಹ ಕೆಲವು ವಿಶೇಷ ಕನಸುಗಳ ಅರ್ಥವನ್ನು ತಿಳಿಸಲಿದ್ದೇವೆ, ಇವುಗಳನ್ನು ಗರುಡ ಪುರಾಣದಲ್ಲಿ  (Garuda Purana) ಉಲ್ಲೇಖಿಸಲಾಗಿದೆ. 

ರಾಮಾಯಣ ಅಥವಾ ಗೀತೆಯನ್ನು ಪಠಿಸಿ :
ಪಿತೃ ಪಕ್ಷದ (Pitru Paksha) ಸಮಯದಲ್ಲಿ, ಪೂರ್ವಿಕರು ತಮ್ಮ ಸಂಬಂಧಿಕರನ್ನು ನೋಡಲು ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ, ಆದ್ದರಿಂದ ಅವರ ಆತ್ಮಗಳ ಶಾಂತಿಗಾಗಿ ಶ್ರದ್ಧಾ-ತರ್ಪಣವನ್ನು ಮಾಡಲಾಗುತ್ತದೆ. ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರು ಪದೇ ಪದೇ ಕನಸಿನಲ್ಲಿ (Dreams) ಕಂಡರೆ, ಅವರ ಆತ್ಮವು ಇನ್ನೂ ಅಲೆದಾಡುತ್ತಿದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅವರ ಆತ್ಮಕ್ಕೆ ಶಾಂತಿ ಸಿಗಲು, ಮನೆಯಲ್ಲಿ ರಾಮಾಯಣ ಅಥವಾ ಗೀತೆಯನ್ನು ಪಠಿಸಿ.

ಇದನ್ನೂ ಓದಿ- Shopping In Pitru Paksha: ಪಿತೃ ಪಕ್ಷದಲ್ಲೂ ಮಾಡಬಹುದು ಶಾಪಿಂಗ್, ಆದರೆ ಈ ಬಗ್ಗೆ ಇರಲಿ ಎಚ್ಚರ

ಇದರ ಹೊರತಾಗಿ, ಪೂರ್ವಜರು ತಮ್ಮ ಮನೆಯ ಬಳಿ ಯಾವಾಗಲೂ ಕನಸಿನಲ್ಲಿ (Dreams In Pitru Paksha) ಕಾಣುತ್ತಿದ್ದರೆ, ಪೂರ್ವಜರು ಇನ್ನೂ ತಮ್ಮ ಕುಟುಂಬವನ್ನು ಪ್ರೀತಿಸುತ್ತಿದ್ದಾರೆ ಎಂದರ್ಥ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿದಿನ 2 ರೊಟ್ಟಿಗಳನ್ನು ಹಸುವಿಗೆ ತಿನ್ನಿಸಿ ಮತ್ತು ಅಮಾವಾಸ್ಯೆಯ ದಿನ ಪೂರ್ವಜರಿಗೆ ಅರ್ಪಿಸಿ. ಇದು ನಿಮ್ಮ ಪೂರ್ವಜರ ಕೃಪೆ ಸದಾ ನಿಮ್ಮ ಮೇಲಿರುವಂತೆ ಮಾಡುತ್ತದೆ.

ಇದನ್ನೂ ಓದಿ- Pitru Paksha 2021: ನೀವು ಪೂರ್ವಜರ ಸಂಪೂರ್ಣ ಆಶೀರ್ವಾದವನ್ನು ಬಯಸಿದರೆ, ಈ ಪ್ರಮುಖ ವಿಷಯಗಳ ಬಗ್ಗೆ ಇರಲಿ ಎಚ್ಚರ

ಪಿತೃ ಪಕ್ಷದಲ್ಲಿ ಈ ರೀತಿಯ ಕನಸು ಬಿದ್ದರೆ ಒಳ್ಳೆಯದು:
ಪಿತೃ ಪಕ್ಷದ (Pitru Paksha) ಸಮಯದಲ್ಲಿ ಪೂರ್ವಜರು ನಿಮ್ಮನ್ನು ಆಶೀರ್ವದಿಸಿದರೆ ಅಥವಾ ನಿಮ್ಮ ಕನಸಿನಲ್ಲಿ ಅವರು ಸಂತೋಷವಾಗಿರುವುದನ್ನು ನೋಡಿದರೆ, ನೀವು ಮಾಡಿದ ಶ್ರಾದ್ಧ-ತರ್ಪಣ, ದಾನಗಳಿಂದ ಅವರು ಸಂತೋಷವಾಗಿದ್ದಾರೆ ಎಂದರ್ಥ. ಅಂತಹ ಕನಸು ಕಾಣುವುದು ತುಂಬಾ ಶುಭ. ಮತ್ತೊಂದೆಡೆ, ಪೂರ್ವಜರನ್ನು ಬರಿಗಾಲಿನಲ್ಲಿ ನೋಡುವುದು ಅಥವಾ ಏನನ್ನಾದರೂ ಕೇಳುವುದು ಎಂದರೆ ಅವರು ನಿಮಗೆ ದಾನ ಮಾಡಲು ಸೂಚಿಸುತ್ತಿದ್ದಾರೆ ಎಂದರ್ಥ. ಅಂತಹ ಕನಸು ಬಂದಾಗ, ನಿಮ್ಮ ಹೃದಯದಿಂದ ನಿಮ್ಮ ಕೈಲಾದದ್ದನ್ನು ಅಗತ್ಯವಿರುವವರಿಗೆ ದಾನ ಮಾಡಿ. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News