ಇನ್ನೆರಡು ದಿನಗಳಲ್ಲಿ ಈ ಐದು ರಾಶಿಯವರ ಜೀವನದ ದಿಕ್ಕನ್ನೇ ಬದಲಿಸಲಿದ್ದಾನೆ ಮಂಗಳ

 ಅಕ್ಟೋಬರ್ 16 ರಂದು ಮಂಗಳ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳನ ಈ ರಾಶಿ ಬದಲಾವಣೆಯಿಂದಾಗಿ, ಐದು ರಾಶಿಯವರ ಭವಿಷ್ಯವು ಬೆಳಗಲಿದೆ.   

Written by - Ranjitha R K | Last Updated : Oct 14, 2022, 11:02 AM IST
  • ಮಿಥುನ ರಾಶಿ ಪ್ರವೇಶಿಸಲಿರುವ ಮಂಗಳ
  • ಅದು ರಾಶಿಯವರ ಭವಿಷ್ಯ ಬೆಳಗಲಿದ್ದಾನೆ ಅಂಗಾರಕ
  • ಇನ್ನೆರಡು ದಿನಗಳಲ್ಲಿ ರಾಶಿ ಬದಲಿಸಲಿರುವ ಮಂಗಳ
ಇನ್ನೆರಡು ದಿನಗಳಲ್ಲಿ ಈ ಐದು ರಾಶಿಯವರ ಜೀವನದ ದಿಕ್ಕನ್ನೇ ಬದಲಿಸಲಿದ್ದಾನೆ ಮಂಗಳ  title=
Mars transit effect

ಬೆಂಗಳೂರು : ಗ್ರಹಗಳ ಕಮಾಂಡರ್ ಎಂದು ಕರೆಯಲ್ಪಡುವ ಮಂಗಳ ರಾಶಿಯನ್ನು ಬದಲಾಯಿಸಿದಾಗ,  ಅನೇಕ ರಾಶಿಗಳ ಜೀವನದ ದಿಕ್ಕನ್ನೇ ಬದಲಿಸಿ ಬಿಡುತ್ತಾನೆ. ಈ ಬಾರಿ ದೀಪಾವಳಿಗೂ ಮುನ್ನ ಅಂಗಾರಕ ತನ್ನ ರಾಶಿಯನ್ನು ಬದಲಿಸಲಿದ್ದಾನೆ. ಇನ್ನೆರಡು ದಿನಗಳಲ್ಲಿ ಅಂದರೆ ಅಕ್ಟೋಬರ್ 16 ರಂದು ಮಂಗಳ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳನ ಈ ರಾಶಿ ಬದಲಾವಣೆಯಿಂದಾಗಿ, ಐದು ರಾಶಿಯವರ ಭವಿಷ್ಯವು ಬೆಳಗಲಿದೆ. 

ವೃಷಭ ರಾಶಿ : ಮಂಗಳ ಗ್ರಹ ಸಂಕ್ರಮಣದಿಂದ ಈ ರಾಶಿಯವರ ಆದಾಯ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುತ್ತದೆ.  ವ್ಯವಹಾರದಲ್ಲಿ ಕುಟುಂಬ ಸದಸ್ಯರು ಬೆಂಬಲವನ್ನು ಪಡೆಯುತ್ತಾರೆ. ಮನೆಯ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಅವಕಾಶಗಳು ಕಂಡುಬರುತ್ತವೆ. 

ಇದನ್ನೂ ಓದಿ : Astrology for Money : ನಿಮ್ಮ ಮನೆ ಆರ್ಥಿಕ ಸ್ಥಿತಿ ಸುಧಾರಿಸಲು 16 ಜ್ಯೋತಿಷ್ಯ ಪರಿಹಾರಗಳು!

ಸಿಂಹ ರಾಶಿ :ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುವುದು. ಉದ್ಯೋಗಗಳನ್ನು ಬದಲಾಯಿಸಬಹುದು. ಯಾವುದೇ ಕೆಲಸ ಮಾಡಿದರೂ ಲಾಭವಾಗಲಿದೆ. ಸಹೋದರ ಸಹೋದರಿಯರ ಸಹಕಾರದಿಂದ ವ್ಯಾಪಾರ ವಹಿವಾಟು ವಿಸ್ತರಣೆಯಾಗಲಿದೆ. ಸಂಪತ್ತು ಹೆಚ್ಚಾಗಲಿದೆ. 

ತುಲಾ ರಾಶಿ : ನಿಮ್ಮ ಭೌತಿಕ ಸಂತೋಷಗಳು ವಿಸ್ತಾರಗೊಳ್ಳುತ್ತವೆ. ಹೊಸ ಎಲೆಕ್ಟ್ರಾನಿಕ್ ವಸ್ತುಗಳು ಮನೆಗೆ ಬರಬಹುದು. ಮನಸ್ಸಿನಲ್ಲಿ ನೆಮ್ಮದಿ ಇರುತ್ತದೆ. ಅಧ್ಯಯನಕ್ಕೆ ಸಂಬಂಧಿಸಿದ ಕೆಲಸದಲ್ಲಿ ಯಶಸ್ಸು ಸಿಗಲಿದೆ.  ಸ್ವಂತ ಮನೆಯ ಕನಸು ನನಸಾಗುವುದು. ಕೆಲಸದಲ್ಲಿ ಹೆಚ್ಚು ಶ್ರಮಿಸಬೇಕಾಗಬಹುದು. 

ಇದನ್ನೂ ಓದಿ ದೇಹದ ಈ ಭಾಗಗಳಲ್ಲಿ ಮಚ್ಚೆಗಳಿದ್ದರೆ ಬಹಳ ಬೇಗ ಸಿರಿವಂತರಾಗುತ್ತಾರೆ.!

ಧನು ರಾಶಿ: ಮಂಗಳ ಗ್ರಹದ ಸಂಚಾರದಿಂದಾಗಿ ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಕುಟುಂಬದಲ್ಲಿ  ಮಂಗಳ ಕಾರ್ಯಗಳು ನೆರವೇರಲಿವೆ.  ಕುಟುಂಬ ಸಮೇತ  ಪ್ರಯಾಣ ಬೆಳಸುವ ಯೋಗ ಕೂಡಿ ಬರಲಿದೆ.  

ಕುಂಭ ರಾಶಿ : ಈ ರಾಶಿಯವರಿಗೆ ದೀರ್ಘಕಾಲದ ಕಾಯಿಲೆಯಿಂದ ಮುಕ್ತಿ ಸಿಗುತ್ತದೆ. ಕೋರ್ಟ್ ಕೇಸುಗಳಲ್ಲಿ ನಿಮ್ಮ ಪರವಾಗಿ ತೀರ್ಪು ಬರಬಹುದು.  ಹೊಸ ಆಸ್ತಿಯನ್ನು ಖರೀದಿಸಬಹುದು. ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸಬಹುದು. ಪಾಲುದಾರಿಕೆಯಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಸಾಧ್ಯತೆಯೂ ಇದೆ.

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News