ದೇಹದ ಈ ಭಾಗಗಳಲ್ಲಿ ಮಚ್ಚೆಗಳಿದ್ದರೆ ಬಹಳ ಬೇಗ ಸಿರಿವಂತರಾಗುತ್ತಾರೆ.!

Moles on Body Meaning: ದೇಹದ ಕೆಲವು ಭಾಗಗಳಲ್ಲಿ ಮಚ್ಚೆ ಇದ್ದರೆ,  ಅವರನ್ನು ಅದೃಷ್ಟವಂತರು ಎಂದು ಹೇಳಲಾಗುತ್ತದೆ. 

Written by - Ranjitha R K | Last Updated : Oct 13, 2022, 04:17 PM IST
  • ದೇಹದ ಮೇಲೆ ಮಚ್ಚೆ ಇಲ್ಲದ ವ್ಯಕ್ತಿಯೇ ಇರುವುದಿಲ್ಲ.
  • ಸಾಮುದ್ರಿಕ ಶಾಸ್ತ್ರದಲ್ಲಿ ದೇಹದಲ್ಲಿರುವ ಮಚ್ಚೆಗೆ ಬೇರೆ ಬೇರೆ ಅರ್ಥಗಳಿವೆ.
  • ದೇಹದ ಈ ಭಾಗದಲ್ಲಿ ಮಚ್ಚೆ ಇದ್ದವರು ಅದೃಷ್ಟವಂತರು
ದೇಹದ ಈ ಭಾಗಗಳಲ್ಲಿ ಮಚ್ಚೆಗಳಿದ್ದರೆ  ಬಹಳ ಬೇಗ ಸಿರಿವಂತರಾಗುತ್ತಾರೆ.! title=
Lucky Mole

Moles on Body Meaning : ದೇಹದ ಮೇಲೆ ಮಚ್ಚೆ ಇಲ್ಲದ ವ್ಯಕ್ತಿಯೇ ಇರುವುದಿಲ್ಲ. ದೇಹದ ಮೇಲಿನ ಮಚ್ಚೆ ಕೆಲವೊಮ್ಮೆ ಸೌಂದರ್ಯವನ್ನು ಕೂಡಾ ಹೆಚ್ಚಿಸುತ್ತದೆ. ಸಾಮುದ್ರಿಕ ಶಾಸ್ತ್ರದಲ್ಲಿ ದೇಹದಲ್ಲಿರುವ ಮಚ್ಚೆಗೆ ಬೇರೆ ಬೇರೆ  ಅರ್ಥಗಳಿವೆ. ದೇಹದ ಕೆಲವು ಭಾಗಗಳಲ್ಲಿ ಮಚ್ಚೆ ಇದ್ದರೆ,  ಅವರನ್ನು ಅದೃಷ್ಟವಂತರು ಎಂದು ಹೇಳಲಾಗುತ್ತದೆ. 

ಬಲಗಡೆಯ ಭುಜದ ಮೇಲಿನ ಮಚ್ಚೆ  :
ಬಲಗಡೆ ಭುಜದ ಮೇಲೆ ಮಚ್ಚೆ ಇರುವವರಿಗೆ ಜೀವನದಲ್ಲಿ ಹಣದ ಕೊರತೆ  ಎದುರಾಗುವುದೇ ಇಲ್ಲ. ಅವರು ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯವನ್ನು ಪಡೆಯುತ್ತಾರೆ. ಪ್ರತಿಯೊಂದು ಕಾರ್ಯಕ್ಷೇತ್ರದಲ್ಲೂ ತಮ್ಮ ಶ್ರಮದ ಆಧಾರದ ಮೇಲೆ  ಯಶಸ್ಸು ಪಡೆಯುತ್ತಾರೆ. 

ಇದನ್ನೂ ಓದಿ : ಮಂಗಳ ಮುಖಿಯರಿಗೆ ಅಪ್ಪಿತಪ್ಪಿಯೂ ದಾನ ಮಾಡಬೇಡಿ ಈ 4 ವಸ್ತು!

ಬಲ ಕೆನ್ನೆಯ ಮೇಲೆ ಮಚ್ಚೆ :
ವ್ಯಕ್ತಿಯ ಬಲ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇವರ ಮೇಲೆ ಮಹಾಲಕ್ಷ್ಮೀ ಕೃಪೆ ಇರುತ್ತದೆ. ಇವರು ತಮ್ಮ ಸಂಗಾತಿಯ ಬಗ್ಗೆ ಪ್ರಾಮಾಣಿಕವಾಗಿರುತ್ತಾರೆ.  ನೋವು ನಲಿವಿನಲ್ಲಿ ಸಂಗಾತಿಯ ಜೊತೆಯಾಗಿರುತ್ತಾರೆ. 

ಎದೆಯ ಮಧ್ಯದಲ್ಲಿ ಮಚ್ಚೆ  :
ಎದೆಯ ಮಧ್ಯದಲ್ಲಿ ಮಚ್ಚೆ ಇರುವ ವ್ಯಕ್ತಿಯನ್ನು ಅದೃಷ್ಟವಂತ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮೀ ದೇವಿಯ ಅನುಗ್ರಹ ಸದಾ ಇವರ ಮೇಲಿರುತ್ತದೆ.  ಇವರ ಜೀವನದಲ್ಲಿ ಹಣದ ಕೊರತೆ ಇರುವುದೇ ಇಲ್ಲ. ಜೀವದಲ್ಲಿ ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುತ್ತದೆ. ಮನಸ್ಸಿನ ಸಣ್ಣ ಸಣ್ಣ ಆಸೆಗಳು ಕೂಡಾ ಈಡೇರುತ್ತದೆ.  

ಹಣೆಯ ಬಲಭಾಗದಲ್ಲಿ ಮಚ್ಚೆ :
ಹಣೆಯ ಬಲಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ.  ಇವರ ಜೀವನದಲ್ಲಿ  ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗುವುದೇ ಇಲ್ಲ. ಇವರು ಶ್ರಮಕ್ಕೆ ತಕ್ಕ ಫಲ ಪಡೆದೇ  ಪಡೆಯುತ್ತಾರೆ. 

ಇದನ್ನೂ ಓದಿ : Peacock Dream : ಕನಸಿನಲ್ಲಿ ನವಿಲು ಕಂಡರೆ ನಿಜವಾಗಿಯೂ ಶ್ರೀಮಂತರಾಗ್ತಾರಾ?

ಬಲ ಅಂಗೈಯಲ್ಲಿ  ಮಚ್ಚೆ  :
ನಿಮ್ಮ ಬಲ ಅಂಗೈಯಲ್ಲಿ ಮಚ್ಚೆ ಇದ್ದರೆ, ಅಂತಹ ವ್ಯಕ್ತಿಯು ತುಂಬಾ ಅದೃಷ್ಟಶಾಲಿ. ಇವರು ಯಾವ ಕೆಲಸ ಮಾಡಿದರೂ ಯಶಸ್ಸು ಖಂಡಿತಾ. ಉದ್ಯೋಗವಾಗಲಿ ಅಥವಾ ವ್ಯಾಪಾರವಾಗಲಿ ಜಯ ಇವರದ್ದೇ. ನಾಲ್ಕು ದಿಕ್ಕಿನಲ್ಲೂ ಅದೃಷ್ಟ ಇವರನ್ನು ಬೆಂಬಲಿಸುತ್ತದೆ.

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News