Rules for Tulsi Plants: ತುಳಸಿ ಗಿಡದ ಈ ನಿಯಮ ಪಾಲಿಸಿದ್ರೆ ಲಕ್ಷ್ಮಿದೇವಿ ಕೃಪೆ ದೊರೆಯಲಿದೆ

ತುಳಸಿ ಸಸ್ಯಗಳಿಗೆ ನಿಯಮ: ಸನಾತನ ಧರ್ಮ ಮತ್ತು ತುಳಸಿ ಗಿಡಗಳನ್ನು ಪರಸ್ಪರ ಸಮಾನಾರ್ಥಕವೆಂದು ಪರಿಗಣಿಸಲಾಗುತ್ತದೆ. ನೀವೂ ಕೂಡ ಮನೆಯಲ್ಲಿ ತುಳಸಿ ಗಿಡವನ್ನು ನೆಡಬೇಕೆಂದಿದ್ದರೆ ಮೊದಲು ಅದರ ನಿಯಮಗಳನ್ನು ತಿಳಿದುಕೊಳ್ಳಿ. ಇಲ್ಲದಿದ್ದರೆ ಲಕ್ಷ್ಮಿದೇವಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು.

Written by - Puttaraj K Alur | Last Updated : Jul 2, 2022, 07:02 AM IST
  • ಋತುಮಾನಗಳಿಗೆ ತಕ್ಕಂತೆ ತುಳಸಿ ಗಿಡಕ್ಕೆ ವಿಶೇಷ ಆರೈಕೆ ಮಾಡಬೇಕು
  • ಭಾನುವಾರ, ಏಕಾದಶಿ, ಚಂದ್ರಗ್ರಹಣ & ಸೂರ್ಯಗ್ರಹಣದಂದು ತುಳಸಿಗೆ ನೀರು ಅರ್ಪಿಸಬಾರದು
  • ವಾಸ್ತು ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಮಾತ್ರ ತುಳಸಿ ಗಿಡವನ್ನು ನೆಡಬೇಕು
Rules for Tulsi Plants: ತುಳಸಿ ಗಿಡದ ಈ ನಿಯಮ ಪಾಲಿಸಿದ್ರೆ ಲಕ್ಷ್ಮಿದೇವಿ ಕೃಪೆ ದೊರೆಯಲಿದೆ title=
ತುಳಸಿ ಸಸ್ಯಗಳಿಗೆ ನಿಯಮ

ನವದೆಹಲಿ: ಪ್ರಪಂಚದ ಯಾವುದೇ ಹಿಂದೂ ಕುಟುಂಬದ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ನೀವು ಕಾಣಬಹುದು. ಸನಾತನ ಧರ್ಮ ಮತ್ತು ತುಳಸಿ ಪರಸ್ಪರ ಸಮಾನಾರ್ಥಕವೆಂದು ಹೇಳಲಾಗುತ್ತದೆ. ತುಳಸಿಯಲ್ಲಿ ಮಾತಾ ಲಕ್ಷ್ಮಿದೇವಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಆದ್ದರಿಂದ, ಈ ಸಸ್ಯವನ್ನು ಸಹ ಚಿಕ್ಕ ಮಗುವಿನ ರೀತಿಯಲ್ಲಿಯೇ ನೋಡಿಕೊಳ್ಳಲಾಗುತ್ತದೆ. ತುಳಸಿ ಗಿಡವನ್ನು ಆರೈಕೆ ಮಾಡುವಾಗ ನೀವು ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿರಿ.  

ಹವಾಮಾನದ ಪರಿಣಾಮ  

ತುಳಸಿಯನ್ನು ಬಹಳ ಸೂಕ್ಷ್ಮವಾದ ಸಸ್ಯವೆಂದು ಪರಿಗಣಿಸಲಾಗಿದೆ. ಹವಾಮಾನ ಬದಲಾದಾಗ ವ್ಯಕ್ತಿಯು ಶೀತ ಮತ್ತು ಶಾಖವನ್ನು ಅನುಭವಿಸುವಂತೆಯೇ, ತುಳಸಿ ಸಸ್ಯಗಳು ಹವಾಮಾನದಲ್ಲಿನ ಹಠಾತ್ ಬದಲಾವಣೆಗಳಿಂದ ಬಳಲುತ್ತವೆ. ಆದ್ದರಿಂದ ಮೇ-ಜೂನ್‌ನಂತಹ ಬಲವಾದ ಶಾಖ ಅಥವಾ ಡಿಸೆಂಬರ್-ಜನವರಿಯಂತಹ ತೀವ್ರ ಚಳಿ ಇದ್ದಾಗ ನೀವು ತುಳಸಿ ಗಿಡವನ್ನು ಕೆಂಪು ಬಟ್ಟೆಯಿಂದ ಮುಚ್ಚಬೇಕು. ಇದಿರಂದ ತುಳಸಿಯನ್ನು ರಕ್ಷಿಸಿದಂತಾಗುತ್ತದೆ.

ಇದನ್ನೂ ಓದಿ: July 2022 Rashifal: ಈ ತಿಂಗಳಲ್ಲಿ ಹಣಕಾಸಿನ ವಿಚಾರದಲ್ಲಿ ಭಾರೀ ಎಚ್ಚರಿಕೆಯಿಂದ ಇರಬೇಕು ಈ ನಾಲ್ಕು ರಾಶಿಯವರು

ಈ ದಿನಗಳಲ್ಲಿ ತುಳಸಿಗೆ ನೀರನ್ನು ಅರ್ಪಿಸಬೇಡಿ

ಕುಟುಂಬದಲ್ಲಿ ಉತ್ತಮ ಪ್ರಯೋಜನಗಳಿಗಾಗಿ ತುಳಸಿ ಗಿಡಗಳಿಗೆ ಪ್ರತಿದಿನ ನೀರನ್ನು ಅರ್ಪಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ ಭಾನುವಾರ, ಏಕಾದಶಿ, ಚಂದ್ರಗ್ರಹಣ ಮತ್ತು ಸೂರ್ಯಗ್ರಹಣದಂದು ತುಳಸಿಗೆ ನೀರನ್ನು ಅರ್ಪಿಸಬಾರದು. ಹೀಗೆ ಮಾಡುವುದು ಧರ್ಮಗ್ರಂಥಗಳಿಗೆ ವಿರುದ್ಧವಾಗಿದೆ. ಇದರೊಂದಿಗೆ ಭಾನುವಾರದಂದು ತುಳಸಿ ಎಲೆಗಳನ್ನು ಸಹ ಹರಿಯಬಾರದು. ಹೀಗೆ ಮಾಡುವುದರಿಂದ ಸೂರ್ಯದೇವನು ಅಸಮಾಧಾನಗೊಳ್ಳುತ್ತಾನೆ, ಅದು ನಿಮ್ಮ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ.

ಭಾನುವಾರ ದೀಪ ಹಚ್ಚಬೇಡಿ

ಅನೇಕ ಭಕ್ತರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ತುಳಸಿ ಗಿಡಗಳಿಗೆ ನೀರನ್ನು ಅರ್ಪಿಸಿ ದೀಪವನ್ನು ಬೆಳಗಿಸುತ್ತಾರೆ. ಇದರಿಂದ ಯಾವುದೇ ಹಾನಿಯಿಲ್ಲ, ಆದರೆ ಗರಿಷ್ಠ ಪ್ರಯೋಜನಕ್ಕಾಗಿ ನೀವು ಸಂಜೆ ಮಾತ್ರ ತುಳಸಿಯ ಮೇಲೆ ದೀಪವನ್ನು ಬೆಳಗಿಸಬೇಕು. ಇದರೊಂದಿಗೆ ಭಾನುವಾರ ತುಳಸಿಗೆ ಅಪ್ಪಿತಪ್ಪಿಯೂ ದೀಪ ಹಚ್ಚಬಾರದು. ಗುರುವಾರ ತುಳಸಿ ಗಿಡಕ್ಕೆ ಹಾಲನ್ನು ಅರ್ಪಿಸಬೇಕೆಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ ಮತ್ತು ತನ್ನ ಭಕ್ತರಿಗೆ ಅನುಗ್ರಹವನ್ನು ನೀಡುತ್ತಾಳೆ ಎಂದು ನಂಬಲಾಗಿದೆ.

ಇದನ್ನೂ ಓದಿ: Planet Retrograde: 11 ದಿನಗಳ ನಂತರ 6 ತಿಂಗಳ ಅವಧಿಗೆ 5 ರಾಶಿಗಳಿಗೆ ಈ ಗ್ರಹದ ಪ್ರಕೋಪದಿಂದ ಮುಕ್ತಿ ಸಿಗಲಿದೆ

ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡ ನೆಡಬೇಕು

ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಎಂಬ ಬಗ್ಗೆ ಭಕ್ತರಲ್ಲಿ ಗೊಂದಲವಿರುತ್ತದೆ. ಸರಿಯಾದ ದಿಕ್ಕಿನಲ್ಲಿ ತುಳಸಿ ಗಿಡ ನೆಡದಿದ್ದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ. ವಾಸ್ತು ಪ್ರಕಾರ ತುಳಸಿ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ಮಾತ್ರ ನೆಡಬೇಕು. ಹಾಗೆಯೇ ಮುಸ್ಸಂಜೆಯ ನಂತರ ತುಳಸಿಯ ಎಲೆಗಳನ್ನು ಕೀಳಬಾರದು. ಹೀಗೆ ಮಾಡುವುದರಿಂದ ಪಾಪದ ಪಾಲಾಗಬೇಕಾಗುತ್ತದೆ. ಹೀಗಾಗಿ ಈ ಬಗ್ಗೆ ಎಚ್ಚರವಹಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News