Chanakya Niti: ಈ ರೀತಿಯ ಮಹಿಳೆಯ ಸಾಂಗತ್ಯ ಜೀವನವನ್ನೇ ನರಕವನ್ನಾಗಿಸುತ್ತದೆ

Chanakya Niti for Wife: ಉತ್ತಮ ಮಡದಿಯ ಸಾಥ್ ಪತಿಯನ್ನು ಜೀವನದಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಇನ್ನೊಂದೆಡೆ ಕೆಟ್ಟ ಮಹಿಳೆಯ ಸಾಂಗತ್ಯದಿಂದ ವ್ಯಕ್ತಿಯ ಜೀವನವೇ ಹಾಳಾಗುತ್ತದೆ. ಹೀಗಾಗಿ ಈ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು ಎನ್ನಲಾಗಿದೆ.   

Written by - Nitin Tabib | Last Updated : Jun 30, 2022, 02:52 PM IST
  • ಇಡೀ ವಿಶ್ವಕ್ಕೆ ರಾಜತಾಂತ್ರಿಕತೆ, ರಾಜಕೀಯ, ಅರ್ಥಶಾಸ್ತ್ರದಂತಹ ಮಹತ್ವದ ವಿಷಯಗಳ ಜ್ಞಾನವನ್ನು ನೀಡಿದ ಆಚಾರ್ಯ ಚಾಣಕ್ಯರು
  • ವ್ಯವಹಾರಿಕ ಜೀವನದ ಮಹತ್ವದ ಸಂಗತಿಗಳನ್ನು ಕೂಡ ಹೇಳಿದ್ದಾರೆ.
  • ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರವಾಗಿರುವ ಚಾಣಕ್ಯ ನೀತಿಯಲ್ಲಿ ಸ್ತ್ರೀಯರ ಗುಣಲಕ್ಷಣಗಳ ಬಗ್ಗೆ ಉಲ್ಲೇಖಿಸಿದ್ದಾರೆ.
Chanakya Niti: ಈ ರೀತಿಯ ಮಹಿಳೆಯ ಸಾಂಗತ್ಯ ಜೀವನವನ್ನೇ ನರಕವನ್ನಾಗಿಸುತ್ತದೆ title=
Chanakya Niti For Happy Life

Chanakya Niti for Women: ಇಡೀ ವಿಶ್ವಕ್ಕೆ  ರಾಜತಾಂತ್ರಿಕತೆ, ರಾಜಕೀಯ, ಅರ್ಥಶಾಸ್ತ್ರದಂತಹ ಮಹತ್ವದ ವಿಷಯಗಳ ಜ್ಞಾನವನ್ನು ನೀಡಿದ ಆಚಾರ್ಯ ಚಾಣಕ್ಯರು ವ್ಯವಹಾರಿಕ ಜೀವನದ ಮಹತ್ವದ ಸಂಗತಿಗಳನ್ನು ಕೂಡ ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರವಾಗಿರುವ ಚಾಣಕ್ಯ ನೀತಿಯಲ್ಲಿ ಸ್ತ್ರೀಯರ ಗುಣಲಕ್ಷಣಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಇದರ ಪ್ರಕಾರ, ಮಹಿಳೆಯರ ಕೆಲ ಒಳ್ಳೆಯ ಗುಣಗಳು ಅವಳ ಜೀವನವನ್ನು ಮಾತ್ರವಲ್ಲದೆ ಅವಳಿಗೆ ಸಂಬಂಧಿಸಿದ ಎಲ್ಲಾ ಸಂಬಂಧಗಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎನ್ನಲಾಗಿದೆ. ನ್ಯೂನ್ಯತೆಯನ್ನು ಒಳಗೊಂಡ ಮಹಿಳೆಯ ಸಾಂಗತ್ಯದಿಂದ ಅವಳ ಜೊತೆಗೆ ಸಂಬಂಧ ಹೊಂದಿರುವವರ ಜೀವನವನ್ನು ಕೂಡ ನರಕವನ್ನಾಗಿಸುತ್ತದೆ ಎನ್ನಲಾಗಿದೆ. ಚಾಣಕ್ಯ ನೀತಿಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಇಂತಹ ಗುಣಗಳು ಮತ್ತು ದೋಷಗಳ ಬಗ್ಗೆ ಏನನ್ನು ಹೇಳಲಾಗಿದೆ ತಿಳಿದುಕೊಳ್ಳೋಣ ಬನ್ನಿ,

ಚಾಣಕ್ಯ ನೀತಿಯಲ್ಲಿ ಸ್ತ್ರೀಯರ ಗುಣಲಕ್ಷಣಗಳ ಉಲ್ಲೇಖ
>> ಚಾಣಕ್ಯ ನೀತಿಯ ಪ್ರಕಾರ ಪತಿಯನ್ನು ಅತಿಯಾಗಿ ಪ್ರೀತಿಸುವ ಪತ್ನಿಯು ಆತನಿಗೆ ಸದಾ ಸತ್ಯವನ್ನೇ ಹೇಳಬೇಕು ಮತ್ತು ಎಲ್ಲಾ ಸಂದರ್ಭಗಳಲ್ಲಿ ಆತನನ್ನು ಬೆಂಬಲಿಸಬೇಕು ಎನ್ನಲಾಗಿದೆ. ಇಂತಹ ಮಡದಿಯ ಒಡನಾಟ ಆಕೆಯ ಪತಿಯ ಜೀವನವನ್ನೇ  ಬದಲಾಯಿಸುತ್ತದೆ. ಎಲ್ಲ ಕ್ಷೇತ್ರದಲ್ಲೂ ಆಕೆಯ ಪತಿ ಯಶಸ್ಸನ್ನು ಪಡೆಯುತ್ತಾನೆ.

>> ಪತಿ ಒಂದು ವೇಳೆ ಹಣ, ಗೌರವದ ಅಭಾವದಿಂದ ತೊಂದರೆಗೀಡಾಗಿದ್ದು, ಅಂತಹ ಸಂದರ್ಭದಲ್ಲಿಯೂ ಕೂಡ ಪತ್ನಿ ಆತನನ್ನು ಬೆಂಬಲಿಸುತ್ತಿದ್ದರೆ, ಅಂತಹ ಪತ್ನಿಯನ್ನು ತುಂಬಾ ಗೌರವಿಸಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ. ತುಂಬಾ ಅದೃಷ್ಟಶಾಲಿಗಳಿಗೆ ಮಾತ್ರ ಇಂತಹ ಪತ್ನಿ ಸಿಗುತ್ತಾಳೆ ಎನ್ನಲಾಗಿದೆ. 

ಇದನ್ನೂ ಓದಿ-Zodiac Sign Nature: ಮಹಾ ಸೋಮಾರಿಗಳು ಈ ಮೂರು ರಾಶಿಯವರು

>> ಪತ್ನಿಯ ನಡವಳಿಕೆಯು ಸರಿಯಾಗಿಲ್ಲದಿದ್ದರೆ, ಅವಳು ಕುಟುಂಬದ ಮಾನನಷ್ಟಕ್ಕೆ ಕಾರಣವಾಗುತ್ತಾಳೆ, ಹೀಗಿರುವಾಗ ಅಂತಹ ಪತ್ನಿಯನ್ನು ತ್ಯಜಿಸುವುದು ಉತ್ತಮ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ದುಷ್ಟ ಮಹಿಳೆಯ ಸಾಂಗತ್ಯ ಪತಿಯ ಒಳ್ಳೆಯ ಜೀವನವನ್ನು ಕೂಡ ನರಕ ಮಾಡುತ್ತದೆ ಎನ್ನಲಾಗಿದೆ.

ಇದನ್ನೂ ಓದಿ-30 ವರ್ಷಗಳ ಬಳಿಕ ರೂಪುಗೊಳ್ಳುತ್ತಿರುವ ಗ್ರಹಗಳ ಸಂಯೋಗದಿಂದ ನಾಲ್ಕು ರಾಶಿಯವರಿಗೆ ರಾಜ ಯೋಗ

>> ಅತೃಪ್ತ, ಜಗಳಗಂಟಿ, ತಾಳ್ಮೆ ಮತ್ತು ಸಂಸ್ಕಾರವಿಲ್ಲದ ಪತ್ನಿ ಇರುವ ಕುಟುಂಬವನ್ನು ಸರ್ವನಾಶದಿಂದ ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಚಾರ್ಯ ಚಾಣಕ್ಯ ನೀತಿ ಹೇಳುತ್ತದೆ, ಅಂತಹ ಕುಟುಂಬದಲ್ಲಿ ಎಂದಿಗೂ ಶಾಂತಿ ಮತ್ತು ಸಂತೋಷ ಇರಲು ಸಾಧ್ಯವಿಲ್ಲ ಎನ್ನಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News