Shravan 2022: ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಇಂದೇ ಈ ಉಪಾಯ ಮಾಡಿ, ಇಂದೇ ನಿರ್ಮಾಣಗೊಂಡಿದೆ ಈ ಶುಭ ಕಾಕತಾಳೀಯ

Shravan 2022 Remedies: ಇಂದು ಜುಲೈ 29, 2022 ಶುಕ್ರವಾರ. ಶ್ರಾವಣ ಮಾಸ ಆರಂಭದ ದಿನ. ಈ ದಿನ ಎಲಕ್ಕಿಯಿಂದ ಮಾಡಲಾಗುವ ಒಂದು ಉಪಾಯದಿಂದ ನಿಮ್ಮ ಭಾಗ್ಯ ಬದಲಾಗುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ?   

Written by - Nitin Tabib | Last Updated : Jul 29, 2022, 02:30 PM IST
  • ಸಂಪತ್ತಿನ ಅಧಿದೇವತೆ ಎಂದೇ ಕರೆಯಲಾಗುವ ತಾಯಿ ಲಕ್ಷ್ಮಿ ಯಾರ ಮೇಲೆ ತನ್ನ ಕೃಪಾಕಟಾಕ್ಷ ಬೀರುತ್ತಾಳೆಯೋ ಆ ವ್ಯಕ್ತಿಯ ದಿನಗಳು ಬದಲಾಗಲು ಸಮಯವೇ ಬೇಕಾಗುವುದಿಲ್ಲ ಎನ್ನಲಾಗುತ್ತದೆ.
  • ಶ್ರಾವಣ ಶುಕ್ರವಾರದಂದು ಶಿವ ಶಂಭುವಿನ ಜೊತೆಗೆ ತಾಯಿ ಲಕ್ಷ್ಮಿ ಆರಾಧನೆಯು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
Shravan 2022: ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಇಂದೇ ಈ ಉಪಾಯ ಮಾಡಿ, ಇಂದೇ ನಿರ್ಮಾಣಗೊಂಡಿದೆ ಈ ಶುಭ ಕಾಕತಾಳೀಯ title=
Shravan 2022

Shravan 2022 Friday Remedies - ಸಂಪತ್ತಿನ ಅಧಿದೇವತೆ ಎಂದೇ ಕರೆಯಲಾಗುವ ತಾಯಿ ಲಕ್ಷ್ಮಿ ಯಾರ ಮೇಲೆ ತನ್ನ ಕೃಪಾಕಟಾಕ್ಷ ಬೀರುತ್ತಾಳೆಯೋ ಆ ವ್ಯಕ್ತಿಯ ದಿನಗಳು ಬದಲಾಗಲು ಸಮಯವೇ ಬೇಕಾಗುವುದಿಲ್ಲ ಎನ್ನಲಾಗುತ್ತದೆ. ಶ್ರಾವಣ   ಶುಕ್ರವಾರದಂದು ಶಿವ ಶಂಭುವಿನ ಜೊತೆಗೆ ತಾಯಿ ಲಕ್ಷ್ಮಿ ಆರಾಧನೆಯು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಶುಕ್ರವಾರವನ್ನು ಶುಕ್ರನ ದಿನ ಎಂದೂ ಪರಿಗಣಿಸಲಾಗುತ್ತದೆ. ಶ್ರಾವಣ ಶುಕ್ರವಾರದ ದಿನ ಧರ್ಮಶಾಸ್ತ್ರಗಳಲ್ಲಿ ಕೆಲ ಉಪಾಯಗಳನ್ನು ಹೇಳಲಾಗಿದೆ. ಈ ದಿನ ಏಲಕ್ಕಿಯ ಸಹಾಯದಿಂದ ಮಾಡಲಾಗುವ ಕೆಲ ಉಪಾಯಗಳಿಂದ ಕಾರ್ಯಸಿದ್ಧಿ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಇಂದು 29ನೇ ಜುಲೈ 2022,  ಶ್ರಾವಣ ಮಾಸದ ಮೊದಲ ಶುಕ್ರವಾರ. ಈ ದಿನ ಏಳಕ್ಕಿಯಿಂದ ಮಾಡಲಾಗುವ ಒಂದು ಉಪಾಯ ನಿಮ್ಮ ಭಾಗ್ಯವನ್ನೇ ಬದಲಾಯಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಬನ್ನಿ ತಿಳಿದುಕೊಳ್ಳೋಣ

ಉದ್ಯೋಗ ಪ್ರಗತಿ
ಎಷ್ಟೋ ಸಲ ಕಷ್ಟಪಟ್ಟು ಕೆಲಸ ಮಾಡಿದರೂ ಉದ್ಯೋಗದಲ್ಲಿ ಬಡ್ತಿ ಸಿಗುವುದಿಲ್ಲ. ಕಾರ್ಯಸಿದ್ಧಿ ಪ್ರಾಪ್ತಿಯಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಶುಕ್ರವಾರದಂದು ಹಸಿರು ಬಟ್ಟೆಯಲ್ಲಿ 4 ಏಲಕ್ಕಿಗಳನ್ನು ಕಟ್ಟಿಕೊಳ್ಳಿ. ಅದನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟು ಮಲಗಿ. ನಂತರ ಮಾರನೆಯದಿನ ಬೆಳಗ್ಗೆ ಅದನ್ನು ಯಾರಿಗಾದರೂ ದಾನ ಮಾಡಿ. ಐದು ಶುಕ್ರವಾರದವರೆಗೆ ನಿರಂತರವಾಗಿ ಈ ಉಪಾಯವನ್ನು ಅನುಸರಿಸಿ. ಇದು ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ.

ಹಣ ಲಾಭ
ಕೈತುಂಬಾ ದುಡಿದರೂ ಕೆಲವೊಮ್ಮೆ ಕೈಯಲ್ಲಿ ಹಣ ನಿಲ್ಲುವುದೇ ಇಲ್ಲ. ಇದಕ್ಕಾಗಿ  ಏಲಕ್ಕಿಯ ಉಪಾಯ ಪರಿಣಾಮಕಾರಿಯಾಗಿದೆ. ಶುಕ್ರವಾರ, 5 ಸಣ್ಣ ಏಲಕ್ಕಿಗಳನ್ನು ಪರ್ಸ್ ಅಥವಾ ಹಣವಿಡುವ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಉಳಿತಾಯವೂ ಆಗುತ್ತದೆ ಮತ್ತು ಸಂಪತ್ತು ಕೂಡ ವೃದ್ಧಿಯಾಗುತ್ತದೆ.

ಇದನ್ನೂ ಓದಿ-Astro Tips: ದೇವ-ದೇವತೆಗಳ ಲಾಕೆಟ್ ಕೊರಳಲ್ಲಿ ಧರಿಸುವುದು ಎಷ್ಟು ಉಚಿತ? ನೀವೂ ಧರಿಸುತ್ತಿದ್ದರೆ, ಈ ಸಂಗತಿ ನಿಮಗೆ ತಿಳಿದಿರಲಿ

ಮದುವೆಯಲ್ಲಿ ವಿಳಂಬ
ವಿವಾಹಿತ ಯುವಕರ ವಿವಾಹದಲ್ಲಿ ಒಂದುವೇಳೆ ಅಡೆತಡೆಗಳು ಎದುರಗುತ್ತಿದ್ದರೆ ಅಥವಾ ಪದೇ ಪದೇ ಸಂಬಂಧ ಮುರಿದುಹೋಗುತ್ತಿದ್ದರೆ, ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರದಂದು, ಶಿವಾಳಯದಲ್ಲಿರುವ ಶಿವಲಿಂಗಕ್ಕೆ ನೀರನ್ನು ಅರ್ಪಿಸಿ ಮತ್ತು ಎರಡು ಏಲಕ್ಕಿಗಳನ್ನು ಬೆರೆಸಿದ 5 ವಿಧದ ಸಿಹಿತಿಂಡಿಗಳನ್ನು ಅರ್ಪಿಸಿ. ಹಸುವಿನ ತುಪ್ಪದ ದೀಪವನ್ನು ಬೆಳಗಿ ಮತ್ತು ಶಿವ-ಪಾರ್ವತಿಯ ಮುಂದೆ ಶಿವ ಚಾಲೀಸವನ್ನು ಪಠಿಸಿ. ಇದರಿಂದ ವಿವಾಹದಲ್ಲಿ ಅಥವಾ ದಾಂಪತ್ಯ ಜೀವನದಲ್ಲಿ ಬರುವ ಅಡೆತಡೆಗಳು ದೂರಾಗುತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ-Astro Tips: ಖರ್ಚು ಮತ್ತು ಸಾಲ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೇ? ಇಲ್ಲಿದೆ ನೋಡಿ ಪರಿಹಾರ

ನಿರ್ವಿಘ್ನ ಕೆಲಸ ಕಾರ್ಯಗಳು ಪೂರ್ಣಗೊಳ್ಳಲು ಈ ಉಪಾಯ ಅನುಸರಿಸಿ
ನೀವು ಯಾವುದಾದರು ಶುಭ ಕಾರ್ಯಕ್ಕೆ ಹೋಗುತ್ತಿದ್ದರೆ, ಹೋಗುವ ಮುನ್ನ ಕೈಯಲ್ಲಿ ಮೂರು ಏಲಕ್ಕಿಗಳನ್ನು ತೆಗೆದುಕೊಂಡು ಶ್ರೀ ಶ್ರೀ ಎಂದು ಹೇಳಿ ನಂತರ ಅವುಗಳನ್ನು ತಿಂದು ಮನೆಯಿಂದ ಹೊರಡಿ. ನೀವು ಮಾಡಬೇಕಿರುವ ಕಾರ್ಯ ನಿರ್ವಿಘ್ನ ನೆರವೇರುತ್ತದೆ ಎನ್ನಲಾಗುತ್ತದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News