Wearing Religious Pendant Niyam: ಜೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಸಂಗತಿಯ ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರಭಾವ ವ್ಯಕ್ತಿಯ ಜೀವನದ ಮೇಲಾಗುತ್ತದೆ. ಹಲವು ಬಾರಿ ಜನರು ತಮ್ಮ ಕೊರಳಲ್ಲಿ ಹಾಗೂ ಕೈಯಲ್ಲಿ ದೇವ-ದೇವತೆಗಳ ಲಾಕೆಟ್ ಧರಿಸುವುದನ್ನು ನೀವು ನೋಡಿರಬಹುದು. ಆದರೆ, ಕೆಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳದೆ ಹೋದರೆ ಅವು ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ. ದೇವ-ದೇವತೆಗಳ ಲಾಕೆಟ್ ಧರಿಸಿದ ಬಳಿಕ ಸಾಕಷ್ಟು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಅವುಗಳ ಸ್ವಚ್ಚತೆ, ಕೊಳೆ, ಶುದ್ಧಿ ಇತ್ಯಾದಿಗಳ ಮೇಲೆ ವಿಶೇಷ ಗಮನ ಹರಿಸಬೇಕಾಗುತ್ತದೆ.
ಹಾಗೆ ನೋಡಿದರೆ, ಜೋತಿಷ್ಯ ಶಾಸ್ತ್ರದ ಪ್ರಕಾರ ಕೊರಳಲ್ಲಿ ದೇವ-ದೇವತೆಗಳ ಲಾಕೆಟ್ ಧರಿಸುವುದು ಉಚಿತವಲ್ಲ ಎನ್ನಲಾಗುತ್ತದೆ. ಏಕೆಂದರೆ, ಧರಿಸುವಾಗ ಕೆಲ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳದೆ ಹೋದರೆ, ಅವು ನಕಾರಾತ್ಮಕ ಪ್ರಭಾವ ಬೀರುತ್ತವೆ. ಹೀಗಾಗಿ ಈ ರೀತಿಯ ಲಾಕೆಟ್ ಧರಿಸುವಾಗ ವಿಶೇಷ ಕಾಳಜಿ ವಹಿಸಬೇಕು. ಬನ್ನಿ ತಿಳಿದುಕೊಳ್ಳೋಣ,
ಲಾಕೆಟ್ ಧರಿಸುವಾಗ ಈ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
ದೇವ-ದೇವತೆಗಳ ಅಥವಾ ಅವರ ಮುಖ ಚಿತ್ರವಿರುವ ಲಾಕೆಟ್ ಅನ್ನು ಧರಿಸುವುದು ಒಳ್ಳೆಯದಲ್ಲ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ನಿತ್ಯದ ಓಡಾಟದಿಂದ ಕೂಡಿದ ಜೀವನದಲ್ಲಿ ಮೈಮೇಲೆ ಕೊಳೆ ಸಂಗ್ರಹವಾಗುವ ಜಾಗದಲ್ಲಿಯೇ ಲಾಕೆಟ್ ಇರುತ್ತದೆ ಎನ್ನಲಾಗುತ್ತದೆ. ಇದಲ್ಲದೆ, ಕೆಲವೊಮ್ಮೆ ಅಚಾತುರ್ಯದಿಂದ ನಾವು ನಮ್ಮ ಕೊಳೆಯಾದ ಕೈಗಲಿಂದಲೇ ಲಾಕೆಟ್ ಅನ್ನು ಸ್ಪರ್ಶಿಸುತ್ತೇವೆ. ಇದರಿಂದ ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕ ಶಕ್ತಿ ಸಂಚಾರವಾಗುತ್ತದೆ. ಈ ಕಾರಣಕ್ಕಾಗಿ, ಅಂತಹ ಲಾಕೆಟ್ಗಳನ್ನು ಧರಿಸುವುದು ಸರಿ ಎಂದು ಪರಿಗಣಿಸಲಾಗುವುದಿಲ್ಲ.
ಇದನ್ನೂ ಓದಿ-Soft Waxing Tips: ಮನೆಯಲ್ಲಿಯೇ ಮಾಡಿಕೊಳ್ಳಿ ಸಾಫ್ಟ್ ವ್ಯಾಕ್ಸಿಂಗ್
ಈ ರೀತಿಯ ಲಾಕೆಟ್ ಅನ್ನು ಧರಿಸಬಹುದು
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶುಭ ಪರಿಣಾಮಗಳನ್ನು ಪಡೆಯಲು, ಯಾವುದೇ ಜೋತಿಷ್ಯ ಪಂಡಿತರ ಸಲಹೆಯನ್ನು ಪಡೆದು ದೇವ-ದೇವತೆಗಳಿಗೆ ಸಂಬಂಧಿಸಿದ ಯಂತ್ರಗಳನ್ನು ಹೊಂದಿರುವ ಲಾಕೆಟ್‌ಗಳನ್ನು ಧರಿಸಬಹುದು. ಈ ಯಂತ್ರವನ್ನು ಹೊಂದಿರುವ ಲಾಕೆಟ್ ಅನ್ನು ಸರಿಯಾದ ರೀತಿಯಲ್ಲಿ ಧರಿಸಿದರೆ, ಜೀವನದಲ್ಲಿ ಧನಾತ್ಮಕ ಶಕ್ತಿಯು ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಜಾತಕದಿಂದ ಗ್ರಹ ದೋಷಗಳು ಕೂಡ ನಿವಾರಣೆಯಾಗುತ್ತವೆ.
ಇದನ್ನೂ ಓದಿ-Astro Tips: ಖರ್ಚು ಮತ್ತು ಸಾಲ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೇ? ಇಲ್ಲಿದೆ ನೋಡಿ ಪರಿಹಾರ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.