ನೈಸರ್ಗಿಕ ಕಪ್ಪು ಕೂದಲಿಗೆ ಈ ಎಲೆವೊಂದಿದ್ದರೆ ಸಾಕು! ಡೈ ಮಾಡುವ ಅಗತ್ಯವೇ ಇಲ್ಲ !

 ನಾವು ಅನುಸರಿಸುವ ತಪ್ಪು ಆಹಾರ ಪದ್ದತಿ ಕೂದಲು ಉದುರುವುದು, ಕಿರಿ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು, ಶುಷ್ಕ ಕೂದಲು, ತಲೆ ಹೊಟ್ಟು ಮುಂತಾದ ಅನೇಕ    ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈಗ  ನಾವು ಹೇಳುವ ಮನೆಮದ್ದನ್ನು ಬಳಸಿದರೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ಖಚಿತ.   

Written by - Ranjitha R K | Last Updated : Mar 27, 2023, 03:17 PM IST
  • ನಮ್ಮ ಆರೋಗ್ಯ ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ.
  • ಎಲ್ಲರೂ ಆರೋಗ್ಯಕರ ಆಹಾರದಿಂದ ದೂರ ಸರಿಯುತ್ತಿದ್ದಾರೆ
  • ನಾವು ಸೇವಿಸುವ ಆಹಾರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
ನೈಸರ್ಗಿಕ ಕಪ್ಪು ಕೂದಲಿಗೆ ಈ ಎಲೆವೊಂದಿದ್ದರೆ ಸಾಕು! ಡೈ ಮಾಡುವ ಅಗತ್ಯವೇ ಇಲ್ಲ !  title=

ಬೆಂಗಳೂರು : ನಮ್ಮ ಆರೋಗ್ಯ ನಾವು ಸೇವಿಸುವ ಆಹಾರವನ್ನು  ಅವಲಂಬಿಸಿರುತ್ತದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ  ಆರೋಗ್ಯಕರ ಆಹಾರದಿಂದ ದೂರ ಸರಿಯುತ್ತಿದ್ದಾರೆ, ಮಾತ್ರವಲ್ಲ ಜಂಕ್ ಫುಡ್ ಗೆ ಹತ್ತಿರವಾಗುತ್ತಿದ್ದಾರೆ. ಇದು ನಮ್ಮ ಆರೋಗ್ಯದ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಎಲ್ಲರೂ  ಆರೋಗ್ಯಕರ ಆಹಾರದಿಂದ ದೂರ ಸರಿಯುತ್ತಿದ್ದಾರೆ, ವುದಲ್ಲದೆ, ಕೂದಲಿನ ಮೇಲೆ ಕೂಡಾ ಬಹಳವಾಗಿ ಪರಿಣಾಮ ಬೀರುತ್ತದೆ. ನಾವು ಅನುಸರಿಸುವ ತಪ್ಪು ಆಹಾರ ಪದ್ದತಿ ಕೂದಲು ಉದುರುವುದು, ಕಿರಿ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು, ಶುಷ್ಕ ಕೂದಲು, ತಲೆ ಹೊಟ್ಟು ಮುಂತಾದ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮಾರುಕಟ್ಟೆಯಲ್ಲಿ ಅನೇಕ ಪರ್ಯಾಯ ಸಾಧನಗಳು ಲಭ್ಯವಿದೆ. ಶಾಂಪೂ, ಕಂಡಿಷನರ್, ಎಣ್ಣೆ, ಹೇರ್ ಕಲರ್ ಇತ್ಯಾದಿಗಳು ಸಮಸ್ಯೆಗೆ ಪರಿಹಾರ ಎನ್ನುವಂತೆ ಸೂಚಿಸಲಾಗುತ್ತದೆ. ಆದರೆ ಇವುಗಳಲ್ಲಿ ಅಪಾಯಕಾರಿ ರಾಸಾಯನಿಕ ಸೇರಿರುತ್ತವೆ. ಮಾತ್ರವಲ್ಲ ಬೆಲೆ ಕೂಡಾ ದುಬಾರಿ. ಈ ವಸ್ತುಗಳನ್ನು ಬಳಸುವುದರಿಂದ ಒಂದು ಸಮಸ್ಯೆ ಬಗೆಹರಿದಂತೆ ಕಂಡರೂ ಮತ್ತೊಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಈಗ  ನಾವು ಹೇಳುವ ಮನೆಮದ್ದನ್ನು ಬಳಸಿದರೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ಖಚಿತ. 

ಕೂದಲಿಗೆ ಬಳಸಿ ಕರಿಬೇವು : 
ಮೆಲನಿನ್ ಕೊರತೆಯಿಂದಾಗಿ, ನಮ್ಮ ಕೂದಲು ಬಿಳಿಯಾಗುತ್ತವೆ. ಕರಿಬೇವಿನ ಎಲೆಗಳು ಕೂದಲಿನಲ್ಲಿರುವ ಮೆಲನಿನ್ ಕೊರತೆಯನ್ನು ಹೋಗಲಾಡಿಸುತ್ತದೆ. ಹೀಗಾದಾಗ ಕ್ರಮೇಣ ಕೂದಲು ಬಿಳಿಯಾಗುವುಡು ನಿಲ್ಲುತ್ತದೆ. ಬಿಳಿ ಕೂದಲಿನ ಜಾಗದಲ್ಲಿ ಕಪ್ಪು ಕೂದಲು ಹುಟ್ಟಿಕೊಳ್ಳುತ್ತದೆ. ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಕೂದಲು ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ. 

ಇದನ್ನೂ ಓದಿ : ಇದೇ ನೋಡಿ ಮಧುಮೇಹಿಗಳೂ ಸಹ ಮನಃಪೂರ್ತಿ ಸೇವಿಸಬಹುದಾದ ಸಿಹಿ ಹಣ್ಣು

ಕೂದಲಿಗೆ ಬಳಸಿ ಕರಿಬೇವಿನ ಎಲೆಗಳ ಹೇರ್ ಮಾಸ್ಕ್ : 
ಹೇರ್ ಮಾಸ್ಕ್ ಮಾಡಲು, ಕರಿಬೇವಿನ ಎಲೆ, ತೆಂಗಿನ ಎಣ್ಣೆ, ಬೇವಿನ ಎಲೆ, ವಿಟಮಿನ್ ಇ ಕ್ಯಾಪ್ಸುಲ್ ಗಳು ಮತ್ತು ಮೊಸರು ಬೇಕಾಗುತ್ತದೆ. ಮಾಸ್ಕ್ ಮಾಡಲು ಕರಿಬೇವಿನ ಸೊಪ್ಪು ಮತ್ತು ಬೇವಿನ ಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ತೆಂಗಿನೆಣ್ಣೆ, ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಮೊಸರು ಹಾಕಿ ಸರಿಯಾಗಿ ಬೀಟ್ ಮಾಡಿ. ಈಗ ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ. ಅದು ತಣ್ಣಗಾದ ನಂತರ ಕರಿಬೇವಿನ ಸೊಪ್ಪು ಮತ್ತು ಬೇವಿನ ಸೊಪ್ಪಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ. ನಿಮ್ಮ ಹೇರ್ ಮಾಸ್ಕ್ ರೆಡಿಯಾಗುತ್ತದೆ. 

 ಕೂದಲಿಗೆ ಹಚ್ಚುವುದು ಹೇಗೆ :  
ಕೂದಲಿಗೆ ಹೇರ್ ಮಾಸ್ಕ್ ಅನ್ನು ಹಚ್ಚುವ ಮೊದಲು, ಕೂದಲನ್ನು ಸರಿಯಾಗಿ ತೊಳೆದು ಒಣಗಿಸಿ. ನಂತರ ಕೂದಲು ಮತ್ತು ನೆತ್ತಿಯ ಮೇಲೆ ಹೇರ್ ಮಾಸ್ಕ್ ಅನ್ನು  ಹಚ್ಚಿ. ಒಂದು ಗಂಟೆಯ ನಂತರ ಮತ್ತೆ ಕೂದಲನ್ನು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ಮನೆಮದ್ದನ್ನು  ಅನುಸರಿಸುತ್ತಾ ಬನ್ನಿ, ಶೀಘ್ರದಲ್ಲಿಯೇ ಪರಿಣಾಮ ಗೋಚರಿಸುತ್ತದೆ.

ಇದನ್ನೂ ಓದಿ : ಬೆಳಗಿನ ಉಪಹಾರಕ್ಕೆ ಈ ಆಹಾರ ಸೇವಿಸಿದರೆ ನಿಮ್ಮ ಕೈಯ್ಯಾರ ಆರೋಗ್ಯ ಕೆಡಿಸಿದಂತೆ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News