Vastu Tips: ಈ 3 ಅದ್ಭುತ ಟಿಪ್ಸ್ ಅನುಸರಿಸಿದರೆ, ನಿಮ್ಮ ಪರ್ಸ್ ಎಂದಿಗೂ ಖಾಲಿ ಆಗಲ್ಲ

Vastu Tips: ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಬಳಿ ಸಾಕಷ್ಟು ಹಣವಿರಲಿ ಮತ್ತು ಆತನ ಪರ್ಸ್ ಯಾವಾಗಲೂ ಹಣದಿಂದ ತುಂಬಿರಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಈ ಆಸೆಯನ್ನು ಈಡೇರಿಸಲು, ಈ 3 ವಾಸ್ತು ಸಲಹೆಗಳನ್ನು ಅನುಸರಿಸಿ. ಈ ಮೂಲಕ ನೀವು ಖಂಡಿತವಾಗಿಯೂ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ.

Written by - Yashaswini V | Last Updated : Sep 16, 2021, 09:24 AM IST
  • ಮಾ ಲಕ್ಷ್ಮಿಯ ಆಶೀರ್ವಾದ ಪಡೆಯಲು ಈ ಸಿಂಪಲ್ ಸಲಹೆಗಳನ್ನು ಅನುಸರಿಸಿ
  • ನೀವು ತಾಯಿ ಲಕ್ಷ್ಮಿಯ ಚಿತ್ರವನ್ನು ಪರ್ಸ್‌ನಲ್ಲಿ ಇರಿಸಬಹುದು
  • ಲಕ್ಷ್ಮಿ ದೇವಿಯ ಪೂಜೆಯಲ್ಲಿ ಬೆಳ್ಳಿ ನಾಣ್ಯಗಳಿಗೆ ಹೆಚ್ಚಿನ ಮಹತ್ವವಿದೆ
Vastu Tips: ಈ 3 ಅದ್ಭುತ ಟಿಪ್ಸ್ ಅನುಸರಿಸಿದರೆ, ನಿಮ್ಮ ಪರ್ಸ್ ಎಂದಿಗೂ ಖಾಲಿ ಆಗಲ್ಲ title=
Vastu Tips for Money

ಬೆಂಗಳೂರು: Vastu Tips- ಪ್ರತಿಯೊಬ್ಬರ ಜೀವನದಲ್ಲೂ ಹಣ ತುಂಬಾ ಮುಖ್ಯ. ಹಣವಿಲ್ಲದೆ ಏನನ್ನೂ ಕೊಳ್ಳಲು ಸಾಧ್ಯವಿಲ್ಲ. ಪ್ರೀತಿ ವಿಶ್ವಾಸದ ಹೊರತಾಗಿ ಬೇರೆಲ್ಲದಕ್ಕೂ ಹಣ ಬೇಕೇ ಬೇಕು. ಹಾಗಾಗಿಯೇ ಪ್ರತಿ ವ್ಯಕ್ತಿಯೂ ಹಣ ಗಳಿಸಲು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಬಳಿ ಸಾಕಷ್ಟು ಹಣವಿರಲಿ ಮತ್ತು ಆತನ ಪರ್ಸ್ ಯಾವಾಗಲೂ ಹಣದಿಂದ ತುಂಬಿರಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಪ್ರಪಂಚದಲ್ಲಿ ಏನನ್ನಾದರೂ ಹಣದಿಂದ ಸಾಧಿಸಬಹುದು. ಹಣ ಒಂದಿದ್ದರೆ ನಮಗೆ ಅಗತ್ಯವಾದ ಎಲ್ಲಾ ಸೌಕರ್ಯಗಳು ಸಿಗುತ್ತವೆ. ಆದರೆ ಕೆಲವು ಬಾರಿ ಎಷ್ಟೇ ಕಷ್ಟ ಪಟ್ಟು ದುಡಿದರೂ ಎಷ್ಟೇ ಶ್ರಮ ವಹಿಸಿದರೂ ಆರ್ಥಿಕ ಸಮಸ್ಯೆಯಿಂದ ಹೊರಬರಲು ಹರಸಾಹಸ ಪಡಬೇಕಾಗುತ್ತದೆ. ಹಾಗಾಗಿಯೇ, ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಲು ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಇರಬೇಕು ಎಂದು ಹೇಳಲಾಗುತ್ತದೆ. ನಿಮ್ಮ ಪರ್ಸ್ ಯಾವಾಗಲೂ ಹಣದಿಂದ ತುಂಬಿರಬೇಕು ಎಂದು ನೀವು ಬಯಸಿದರೆ, ಈ ಮೂರು ಸಲಹೆಗಳನ್ನು ಅನುಸರಿಸಿ, ಇದರಿಂದ ನಿಮಗೆ ಎಂದಿಗೂ ಹಣದ ಕೊರತೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ.

ಸಮೃದ್ಧಿಯ ಸಾಧನ: 
ನಿಮ್ಮ ಪರ್ಸ್ ಯಾವಾಗಲೂ ಹಣದಿಂದ ತುಂಬಿರಬೇಕು ಎಂದು ನೀವು ಬಯಸಿದರೆ, ವಿಧಿ-ವಿಧಾನದಿಂದ ಪೂಜಿಸಿದ ಬಳಿಕ ಸಣ್ಣ ಗಾತ್ರದ ಶ್ರೀ ಯಂತ್ರವನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ. ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಶ್ರೀ ಯಂತ್ರವನ್ನು ತನ್ನ ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳುವ ವ್ಯಕ್ತಿಯು ಯಾವಾಗಲೂ ಲಕ್ಷ್ಮಿಯಿಂದ (Goddess Lakshmi) ಆಶೀರ್ವಾದ ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಈ ಪರಿಹಾರ ಮಾಡುವುದರಿಂದ ನೀವು ಬೇಗನೆ ಅದರ ಪರಿಣಾಮವನ್ನು ನೋಡುತ್ತೀರಿ.

ಇದನ್ನೂ ಓದಿ- Home Vastu: ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೇ? ಈ 4 ಚಿಹ್ನೆಗಳೊಂದಿಗೆ ಸುಲಭವಾಗಿ ಕಂಡುಹಿಡಿಯಿರಿ

ಲಕ್ಷ್ಮಿಯ ಚಿತ್ರ: 
ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬರೂ ಆಕೆಯ ಕೃಪೆಗೆ ಪಾತ್ರರಾಗಲು ಪ್ರಯತ್ನಿಸುತ್ತಲೇ ಇರುತ್ತಾರೆ. ತಾಯಿ ಲಕ್ಷ್ಮಿಯ ಕೃಪೆಯಿಂದ ನಿಮ್ಮ ಪರ್ಸ್ ತುಂಬಬೇಕು ಎಂದು ನೀವು ಬಯಸಿದರೆ, ನೀವು ಅದರಲ್ಲಿ ತಾಯಿ ಲಕ್ಷ್ಮಿಯ ಚಿತ್ರವನ್ನು ಇಟ್ಟುಕೊಳ್ಳಬಹುದು. ಲಕ್ಷ್ಮಿ ಚಿತ್ರವನ್ನು ನಿಮ್ಮ ಕೈ ಚೀಲದಲ್ಲಿ ಇಡುವುದರಿಂದ ಆರ್ಥಿಕ ಸಂಕಷ್ಟಗಳಿಂದ (Financial Problems) ಮುಕ್ತರಾಗಬಹುದು. ಆದರೆ, ನಿಮ್ಮ ಪರ್ಸ್‌ನಲ್ಲಿರುವ ಮಾ ಲಕ್ಷ್ಮಿಯ ಚಿತ್ರದಲ್ಲಿ ಯಾವುದೇ ಭಿನ್ನ ಆಗಬಾರದು ಎಂದು ನೆನಪಿನಲ್ಲಿಡಿ.

ಇದನ್ನೂ ಓದಿ- Vastu Tips: ಮನೆಯಲ್ಲಿನ ಗಣೇಶನ ವಿಗ್ರಹಕ್ಕೆ ಸಂಬಂಧಿಸಿದ ಈ ಸಂಗತಿ ನಿಮಗೆ ತಿಳಿದಿದೆಯೇ?

ಬೆಳ್ಳಿ ನಾಣ್ಯ:
ಲಕ್ಷ್ಮಿ ದೇವಿಯ ಪೂಜೆಯಲ್ಲಿ ಬೆಳ್ಳಿ ನಾಣ್ಯಗಳಿಗೆ (Silver Coins) ಹೆಚ್ಚಿನ ಮಹತ್ವವಿದೆ. ಆದ್ದರಿಂದ, ಪೂಜಿಸಿದ ಬೆಳ್ಳಿ ನಾಣ್ಯವನ್ನು ಪರ್ಸ್‌ನಲ್ಲಿ ಇರಿಸಿದರೆ, ನಿಮ್ಮ ಪರ್ಸ್‌ನ ಹಣ ಖರ್ಚಾಗುವುದಿಲ್ಲ ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲಾಗುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ಲಕ್ಷ್ಮಿ ದೇವಿಯ ಚಿತ್ರವನ್ನು ಆ ಬೆಳ್ಳಿ ನಾಣ್ಯದಲ್ಲಿ ಮುದ್ರಿಸಿರಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ ಮತ್ತು ಪೂಜೆಯ ನಂತರವೇ ಅದನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ. ಅದೇ ರೀತಿ, ನೀವು ಬಯಸಿದರೆ, ನೀವು ತಾಮ್ರದ ಪಟ್ಟಿಯಲ್ಲಿ ತಯಾರಿಸಲಾಗಿರುವ ಕುಬೇರ್ ಮತ್ತು ಶ್ರೀ ಯಂತ್ರವನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಬಹುದು.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News