Weight Loss tips : ದೇಹ ಸಣ್ಣಗಾಗಬೇಕಾದರೆ ಈ ಎಲೆಯನ್ನು ಬಳಸಿ ನೋಡಿ

ಜನರು ತೂಕ ಇಳಿಸುವ ಔಷಧಿಗಳನ್ನು ಕೂಡಾ ಸೇವಿಸುತ್ತಾರೆ. ಆದರೆ ಇದು ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪೇರಳೆ ಎಲೆಗಳಿಂದಲೂ ತುಕ ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ.  

Written by - Ranjitha R K | Last Updated : Apr 1, 2022, 03:54 PM IST
  • ಕಳಪೆ ಜೀವನಶೈಲಿ, ಆಹಾರ ಪದ್ಧತಿಯಿಂದಾಗಿ, ತೂಕ ಹೆಚ್ಚುತ್ತದೆ
  • ಪೇರಳೆ ಎಲೆ ಸೇವಿಸಿದರೆ ಏನಾಗುತ್ತದೆ ?
  • ಪೇರಳೆ ಎಲೆಗಳ ಪ್ರಯೋಜನಗಳೇನು?
Weight Loss tips : ದೇಹ ಸಣ್ಣಗಾಗಬೇಕಾದರೆ ಈ ಎಲೆಯನ್ನು ಬಳಸಿ ನೋಡಿ    title=
guava leaf benefits (File photo)

 ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿ ಫಿಟ್ ಆಗಿರುವವರು ಬಹಳ ಕಡಿಮೆ. ಹೆಚ್ಚಿನ ಜನರು ಹೆಚ್ಚುತ್ತಿರುವ ತೂಕದ ಕಾರಣದಿಂದಾಗಿ ಅನೇಕ ಸಮಸ್ಯೆಗಳಿಗೆ ಬಲಿಯಾಗುತ್ತಾರೆ. ಕಳಪೆ ಜೀವನಶೈಲಿ, ಮತ್ತು ಆಹಾರ ಪದ್ಧತಿಯಿಂದಾಗಿ, ಜನರು ವೇಗವಾಗಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.  ಹೀಗಿರುವಾಗ ಪ್ರತಿಯೊಬ್ಬರೂ ತೂಕ ಇಳಿಸಿಕೊಳ್ಳಲು ಬಯಸುತ್ತಾರೆ (Weight Loss tips). ಇದಕ್ಕಾಗಿ ಕೆಲವರು ಜಿಮ್‌ಗೆ ಹೋಗುತ್ತಾರೆ, ಇನ್ನು ಕೆಲವರು ಮನೆಯಲ್ಲಿಯೇ  ವ್ಯಾಯಾಮ ಮಾಡುತ್ತಾರೆ. ಆದರೆ ತೂಕ ನಷ್ಟಕ್ಕೆ ವ್ಯಾಯಾಮ ಮಾತ್ರ ಮುಖ್ಯ ಅಲ್ಲ, ಸರಿಯಾದ ಆಹಾರವನ್ನು ಸೇವಿಸುವುದು ಕೂಡಾ ಮುಖ್ಯ. 

ಜನರು ತೂಕ ಇಳಿಸುವ ಔಷಧಿಗಳನ್ನು ಕೂಡಾ ಸೇವಿಸುತ್ತಾರೆ. ಆದರೆ ಇದು ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪೇರಳೆ ಎಲೆಗಳಿಂದಲೂ ತೂಕ ಕಳೆದುಕೊಳ್ಳುವುದು ಸಾಧ್ಯವಾಗುತ್ತದ (guava leaf benefits).  ಪೇರಳೆ ಎಲೆಗಳು ತೂಕವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿಯಾಗಿದೆ.  ಪೇರಳೆ ಎಲೆಗಳ ಸೇವನೆಯಿಂದ ಹಲವು ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ. 

ಇದನ್ನೂ ಓದಿ : Health Tips: ಉರಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ನೀವು ಅನುಸರಿಸಬೇಕಾದ ಕ್ರಮಗಳು

ಪೇರಳೆ ಎಲೆ ತಿಂದರೆ ಏನಾಗುತ್ತದೆ?
ವಾಸ್ತವವಾಗಿ, ಪೇರಳೆ ಎಲೆಗಳು ಕ್ಯಾಲೋರಿ ಮುಕ್ತವಾಗಿವೆ. ಇದರಿಂದಾಗಿ ಅವು ತೂಕ ನಷ್ಟ ಮಾಡುವುದರಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ (. Guava Leaves for wieght loss) ಪೇರಳೆ  ಎಲೆಗಳನ್ನು ಸೇವಿಸುವುದರಿಂದ, ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ. ಪೇರಳೆ ಎಲೆಗಳನ್ನು ಹಾಗೆಯೇ ತಿನ್ನುವುದು ಸಾಧ್ಯವಿಲ್ಲ. ಹಾಗಾಗಿ ಅದರ ರಸವನ್ನು ತಯಾರಿಸಿ, ಕುಡಿಯಬಹುದು. 

ಪೇರಳೆ ಎಲೆಗಳ ಪ್ರಯೋಜನಗಳೇನು?
ಪೇರಳೆ ಎಲೆಗಳು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿವೆ. ಇದು ಹೊಟ್ಟೆಯ ಹುಣ್ಣುಗಳಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಗ್ಯಾಸ್ಟ್ರಿಕ್, ಅಲ್ಸರ್ ನಿಂದ ತೊಂದರೆಗೀಡಾಗಿದ್ದರೆ ಪೇರಳೆ ಎಲೆಗಳನ್ನು ಸೇವಿಸಬಹುದು. 

ಇದನ್ನೂ ಓದಿ : Coffee: ಅತಿಯಾದ ಕಾಫಿ ಸೇವನೆಯಿಂದ ಏನಾಗುತ್ತದೆ ಗೊತ್ತಾ..?

ಪೇರಳೆ ಎಲೆಗಳು ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ದೇಹದ ರಕ್ತ ಸಂಚಾರವನ್ನು ಸುಧಾರಿಸುತ್ತದೆ ಮತ್ತು ಹೃದ್ರೋಗದ ಸಮಸ್ಯೆಗಳನ್ನು ದೂರವಿಡುತ್ತದೆ.

ಪೇರಳೆ ಎಲೆಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಪೇರಳೆ ಎಲೆಗಳ ಕಷಾಯವನ್ನು ಕುಡಿಯುವುದರಿಂದ  ರಕ್ತದಲ್ಲಿನ ಸಕ್ಕರೆ  ಮಟ್ಟ ಕಡಿಮೆಯಾಗುತ್ತದೆ (Blood sugar level). ಮಲಬದ್ಧತೆ, ಅತಿಸಾರದ ಸಂದರ್ಭದಲ್ಲಿಯೂ ಪೇರಳೆ ಎಲೆ ಪ್ರಯೋಜನಕಾರಿಯಾಗಿದೆ. .

ಪೇರಳೆ ಎಲೆಗಳನ್ನು ಹೇಗೆ ಸೇವಿಸುವುದು  : 
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆ ಎಲೆಗಳಿಂದ ಮಾಡಿದ ಚಹಾವನ್ನು ಸೇವಿಸಬೇಕು. ಇದರಿಂದ ದೇಹದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹಾಗಾದರೆ ಪೇರಳೆ ಎಲೆಗಳ ಟೀ ಮಾಡುವುದು ಹೇಗೆ ನೋಡೋಣ. 

1- ಮೊದಲನೆಯದಾಗಿ ಸುಮಾರು 5-6 ಎಲೆಗಳನ್ನು ತೆಗೆದುಕೊಳ್ಳಿ
2- ಅದನ್ನು ಚೆನ್ನಾಗಿ ತೊಳೆಯಿರಿ
3- ಈಗ ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ನೀರನ್ನು ಹಾಕಿ.  
4- ಈಗ ಎಲೆಗಳನ್ನು 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.
5- ನಂತರ  ಅದನ್ನು ಫಿಲ್ಟರ್ ಮಾಡಿ ಮತ್ತು ಚಹಾದಂತೆ ಸೇವಿಸಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News