ಈ ಸಮಸ್ಯೆಗಳಿಂದ ಬಳಲುವವರು ಖಂಡಿತಾ ತಿನ್ನಬೇಕು ಪೇರಳೆ ಹಣ್ಣು

 ಈ ಹಣ್ಣಿನಲ್ಲಿ ಕಂಡು ಬರುವ ಔಷಧೀಯ ಗುಣಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿವೆ.   ವಿಟಮಿನ್ ಸಿ, ಲೈಕೋಪೀನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ಹೆಚ್ಚಿನ ಪ್ರಮಾಣದಲ್ಲಿ ಇದರಲ್ಲಿ ಕಂಡುಬರುತ್ತವೆ.

Written by - Ranjitha R K | Last Updated : Aug 1, 2021, 01:09 PM IST
  • ಪೇರಳೆ ಹಣ್ಣು ಕೆಲವೊಂದು ಸಮಸ್ಯೆಗಳಿಗೆ ರಾಮಬಾಣವಾಗಿದೆ.
  • ಈ ಹಣ್ಣಿನಲ್ಲಿ ಕಂಡು ಬರುವ ಔಷಧೀಯ ಗುಣಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿವೆ.
  • ಬಾಯಿ ಹುಣ್ಣುಗಳಿಗೆ ಪೇರಳೆ ಎಲೆಗಳು ಪ್ರಯೋಜನಕಾರಿ.
ಈ ಸಮಸ್ಯೆಗಳಿಂದ ಬಳಲುವವರು ಖಂಡಿತಾ ತಿನ್ನಬೇಕು ಪೇರಳೆ ಹಣ್ಣು  title=
ಪೇರಳೆ ಹಣ್ಣು ಕೆಲವೊಂದು ಸಮಸ್ಯೆಗಳಿಗೆ ರಾಮಬಾಣವಾಗಿದೆ (file photo)

ನವದೆಹಲಿ : ಪೇರಳೆ ಬಹುತೇಕ ಎಲ್ಲರು ಇಷ್ಟ ಪಟ್ಟು ತಿನ್ನುವ ಹಣ್ಣು. ಪೇರಳೆ ಹಣ್ಣು ಕೆಲವೊಂದು ಸಮಸ್ಯೆಗಳಿಗೆ ರಾಮಬಾಣವಾಗಿದೆ.  ಪೇರಳೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ( Benefits of Guava) ಪ್ರಯೋಜನಗಳಿವೆ.  ಪೇರಳೆ ಹಣ್ಣನ್ನು ಪೋಷಕಾಂಶಗಳ ಭಂಡಾರ ಎಂದು ಕರೆಯಲಾಗುತ್ತದೆ. ಈ ಹಣ್ಣಿನಲ್ಲಿ ಕಂಡು ಬರುವ ಔಷಧೀಯ ಗುಣಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿವೆ.   ವಿಟಮಿನ್ ಸಿ, ಲೈಕೋಪೀನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ಹೆಚ್ಚಿನ ಪ್ರಮಾಣದಲ್ಲಿ ಇದರಲ್ಲಿ ಕಂಡುಬರುತ್ತವೆ. ಹಾಗಾಗಿ ಇದು ಅನೇಕ ರೋಗಗಳಿಂದ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಪೇರಳೆ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆ ಮತ್ತು ಕೂದಲಿಗೂ (Guava for skin and hair care) ತುಂಬಾ ಪ್ರಯೋಜನಕಾರಿಯಾಗಿದೆ. ಕೇವಲ ಪೇರಳೆ ಹಣ್ಣು ಮಾತ್ರವಲ್ಲ, ಅದರ ಎಲೆಗಳನ್ನು ಸಹ ಬಹಳ ಪ್ರಯೋಜನಕಾರಿಯಾಗಿದೆ.  ಪೇರಳೆ  ಎಲೆಗಳಿಂದ ಮಾಡಿದ ಪೇಸ್ಟ್ ಅನ್ನು ಬಳಸುವುದರಿಂದ ಚರ್ಮದ ಅನೇಕ  ಸಮಸ್ಯೆಗಳನ್ನು ನಿವಾರಿಸಬಹುದು. ಬಾಯಿ ಹುಣ್ಣುಗಳಿಗೆ ಪೇರಳೆ ಎಲೆಗಳು ಪ್ರಯೋಜನಕಾರಿ. 

ಪೇರಳೆ ಹಣ್ಣಿನ ಪ್ರಯೋಜನಗಳು: 
 1. ಮಧುಮೇಹಕ್ಕೆ ಸಹಾಯಕ: ಮಧುಮೇಹ ರೋಗಿಗಳಿಗೆ ಪೇರಳೆ ಹಣ್ಣು ಬಹಳ ಪ್ರಯೋಜನಕಾರಿಯಾಗಿದೆ.  ಪೇರಳೆಯನ್ನು (Guava benefits) ನಿಯಮಿತವಾಗಿ ಸೇವಿಸುವುದರಿಂದ, ಅದರಲ್ಲಿರುವ ಗ್ಲೈಸೆಮಿಕ್ ಇಂಡೆಕ್ಸ್  ಕಾರಣದಿಂದಾಗಿ, ಮಧುಮೇಹವನ್ನು ನಿಯಂತ್ರಿಸಬಹುದು. ಪೇರಳೆ ಹಣ್ಣಿನಲ್ಲಿ ನ್ಯಾಚುರಲ್ ಶುಗರ್ ಇರುತ್ತದೆ. ಇದು ಮಧುಮೇಹಕ್ಕೆ (diabetic) ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ : Health Tips : ಮೊಟ್ಟೆಯ ಜೊತೆ ತಿನ್ನಬೇಡಿ ಈ ಆಹಾರಗಳನ್ನ : ಸೇವಿಸಿದ್ರೆ ತಪ್ಪಿದಲ್ಲ ಅಪಾಯ!

2. ಮಲಬದ್ಧತೆಯ ರೋಗಿಗಳಿಗೆ : ಮಲಬದ್ದತೆಯ (Constipation) ರೋಗಿಗಳಿಗೆ ಇದು ಸಹಾಯಕ. ಪೇರಳೆ ಹಣ್ಣಿನ ಬೀಜಗಳು ಜೀರ್ಣಕ್ರಿಯೆಯ ಸಮಸ್ಯೆಗಳನ್ನು (Digestion problem) ತೆಗೆದುಹಾಕಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆದರೆ ಮಲಬದ್ದತೆಯ ಸಮಸ್ಯೆ ಕೂಡ ಇರುವುದಿಲ್ಲ.  

3.ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ : ಪೇರಳೆ ಹಣ್ಣಿನಲ್ಲಿ ಕಂಡುಬರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿ (Immunity)ಹೆಚ್ಚಿಸುತ್ತದೆ. ಇತರ ಹಣ್ಣುಗಳಿಗೆ ಹೋಲಿಸಿದೆ ಪೇರಳೆಯಲ್ಲಿ ನಾಲ್ಕು ಪಟ್ಟು ವಿಟಮಿನ್ ಸಿ ಕಂಡುಬರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. 

4.ದೃಷ್ಟಿಗೆ ಸಹಾಯಕ: ಕಣ್ಣುಗಳನ್ನು ಆರೋಗ್ಯವಾಗಿಡಲು (Eye health) ಪೇರಳೆ ಹಣ್ಣನ್ನು ಅತ್ಯುತ್ತಮ ಹಣ್ಣು ಎಂದು ಪರಿಗಣಿಸಲಾಗಿದೆ. ವಿಟಾಮಿನ್ ಎ ಈ ಹಣ್ಣಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಪೇರಳೆ ಸೇವನೆಯಿಂದ ದೃಷ್ಟಿಯ ಸಮಸ್ಯೆಯನ್ನು ತಪ್ಪಿಸಬಹುದು.

ಇದನ್ನೂ ಓದಿ : Pumpkin Benefits : ಈ ಆರೋಗ್ಯ ಕಾರಣಗಳಿಗಾಗಿ ತಿನ್ನಲೇಬೇಕು ಕುಂಬಳಕಾಯಿ

 5. ಸ್ಥೂಲಕಾಯದಲ್ಲಿ ಸಹಕಾರಿ: ಬೊಜ್ಜನ್ನು (Fat) ಕಡಿಮೆ ಮಾಡಲು ಆಹಾರದಲ್ಲಿ ಪೇರಳೆಯನ್ನು ಸೇರಿಸಿಕೊಳ್ಳಬಹುದು. ಪೇರಲೆಯಲ್ಲಿ  ಪ್ರೋಟೀನ್, ವಿಟಮಿನ್ ಮತ್ತು ಫೈಬರ್ ಸಮೃದ್ಧವಾಗಿರುತ್ತದೆ. ಚಯಾಪಚಯವನ್ನು ನಿಯಂತ್ರಿಸುವಲ್ಲಿಯೂ ಇದು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News