ನವದೆಹಲಿ: ಮಧ್ಯಪ್ರದೇಶ, ಗುಜರಾತ್ ಮತ್ತು ಕರ್ನಾಟಕದ ಬಳಿಕ ಇದೀಗ ಗೋವಾದಲ್ಲಿಯೂ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಸೋಮವಾರ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಿದ ಬಳಿಕ ಮಾತನಾಡಿದ ಗೋವಾ ಮಾಜಿ ಸಿಎಂ ಮತ್ತು ಬಿಜೆಪಿ ನಾಯಕ ಪ್ರಮೋದ್ ಸಾವಂತ್(Pramod Sawant) ಅವರು ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
ಜಮ್ಮು-ಕಾಶ್ಮೀರ(Jammu and Kashmir)ದಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧ ನಡೆದ ದೌರ್ಜನ್ಯಗಳ ಕರಾಳ ಮುಖವನ್ನು ಬಿಚ್ಚುಡುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರವನ್ನು ನಿರ್ದೇಶಿಸಿರುವ ವಿವೇಕ್ ಅಗ್ನಿಹೋತ್ರಿ(Vivek Agnihotri)ಗೆ ಪ್ರೇಕ್ಷಕ ಮಹಾಪ್ರಭು ಜೈ ಜೈ ಎಂದಿದ್ದಾರೆ. ಈಗಾಗಲೇ ಗಲ್ಲಾಪೆಟ್ಟಿಯಲ್ಲಿ ಸಖತ್ ಸದ್ದು ಮಾಡುತ್ತಿರುವ ಈ ಸಿನಿಮಾ ಬಾಲಿವುಡ್ ನಲ್ಲಿ ದಾಖಲೆ ಬರೆಯುತ್ತಿದೆ.
'The Kashmir Files' movie will be declared tax-free in Goa, says former CM & BJP leader Pramod Sawant after watching the film based on the life of Kashmiri Pandits in 1990 in J&K pic.twitter.com/x7ihBAR78v
— ANI (@ANI) March 14, 2022
ಇದನ್ನೂ ಓದಿ: Puneeth Rajkumar : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್
ಸ್ವತಃ ಪ್ರಧಾನಿ ಮೋದಿ(PM Modi) ಅವರೇ ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಶ್ಮೀರಿ ಪಂಡಿತರ(Kashmiri Pandits) ಜೀವನ ಕಥನವು ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಜನರು ಈ ಚಿತ್ರವನ್ನು ವೀಕ್ಷಿಸಿ ಕಾಶ್ಮೀರಿ ಪಂಡಿತರ ಬಗೆಗಿನ ಸಂತ್ಯಾಂಶವನ್ನು ತಿಳಿದುಕೊಳ್ಳಲಿ ಎಂದು ಮಧ್ಯಪ್ರದೇಶ, ಗುಜರಾತ್ ಮತ್ತು ಕರ್ನಾಟಕ ತೆರಿಗೆ ವಿನಾಯಿತಿ ಘೋಷಿಸಿದ್ದವು. ಈಗ ಇದೇ ರಾಜ್ಯಗಳ ಹಾದಿಯಲ್ಲಿ ನಡೆದಿರುವ ಗೋವಾ ಕೂಡ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ.
The Kashmir Files movie brings the truth about what happened in Kashmir during the 80s & 90s. I hope all Kashmiri Pandits will get back their land, property & settled down there. Declared movie tax-free in the state: Karnataka CM Basavaraj Bommai pic.twitter.com/Q1CgXTyPtd
— ANI (@ANI) March 14, 2022
ಭಾನುವಾರವಷ್ಟೇ ಸಿನಿಮಾ ವೀಕ್ಷಿಸಿದ ಬಳಿಕ ಟ್ವೀಟ್ ಮಾಡಿದ್ದ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai), ‘ಕಾಶ್ಮೀರಿ ಪಂಡಿತರು ತಮ್ಮ ನೆಲದಿಂದ ವಲಸೆ ಹೋಗುವಂತೆ ಮಾಡಿದ ಪರಿಸ್ಥಿತಿಯ ಕುರಿತ ಸಿನಿಮಾ ಮಾಡಿರುವ ವಿವೇಕ್ ಅಗ್ನಿಹೋತ್ರಿಗೆ ವಂದನೆಗಳು. ಈ ಸಿನಿಮಾಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ’ ಎಂದು ಹೇಳಿದ್ದರು.
Kudos to @vivekagnihotri for #TheKashmirFiles, a blood-curdling, poignant & honest narrative of the exodus of Kashmiri Pandits from their home land.
To lend our support to the movie & encourage our people to watch it, we will make the movie tax-free in Karnataka.
— Basavaraj S Bommai (@BSBommai) March 13, 2022
ಇದನ್ನೂ ಓದಿ: ಧರೆಗಿಳಿದ ಸಿನಿಮಾ ಸ್ವರ್ಗಲೋಕ..! ಎಲ್ಲೆಲ್ಲೂ ಕಾಣುತ್ತಿದ್ದಾರೆ ಡಾ. ಪುನೀತ್ ರಾಜ್ಕುಮಾರ್..!
ನೈಜ ಘಟನೆಗಳ ಆಧಾರಿತ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ(The Kashmir Files Film) ದಲ್ಲಿ ಹಿರಿಯ ನಟ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಸೇರಿ ಅನೇಕ ದಿಗ್ಗಜ ನಟ-ನಟಿಯರು ನಟಿಸಿದ್ದಾರೆ. ಮಾರ್ಚ್ 11ರಂದು ತೆರೆಕಂಡಿದ್ದ ಈ ಸಿನಿಮಾ ಮೊದಲ ದಿನವೇ ಬರೋಬ್ಬರಿ 3.55 ಕೋಟಿ ರೂ. ಗಳಿಕೆ ಮಾಡಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.