ಕ್ಯಾಟ್ ವಾಕ್ ಮಾಡುತ್ತಲೇ ಎದೆ ಹಾಲುಣಿಸಿದ ಮಾಡೆಲ್

    

Last Updated : Jul 18, 2018, 05:52 PM IST
ಕ್ಯಾಟ್ ವಾಕ್ ಮಾಡುತ್ತಲೇ ಎದೆ ಹಾಲುಣಿಸಿದ ಮಾಡೆಲ್ title=
Photo courtesy: twitter

ನವದೆಹಲಿ: ಸಾರ್ವಜನಿಕವಾಗಿ ಎದೆಹಾಲುಹಾಲು ಉಣಿಸುವುದೆ ದೊಡ್ಡ ಸಂಗತಿಯಾಗಿರುವ ಈ ಸಂದರ್ಭದಲ್ಲಿ  ಅಮೇರಿಕಾದ ಮಿಯಾಮಿಯಲ್ಲಿ ಮಾಡೆಲ್ ಮಾರಾ ಮಾರ್ಟಿನ್  ಫ್ಯಾಶನ್ ಷೋ ವೊಂದರಲ್ಲಿ ಈಗ ಬಿಕಿನಿ ಧರಿಸಿ ಎದೆ ಹಾಲು ಉನಿಸುತ್ತಲೇ  ಕ್ಯಾಟ್ ವಾಕ್ ಮಾಡಿರುವುದು ಈಗ ಸಾಕಷ್ಟು ಚರ್ಚೆಗೆ ಗ್ರಾಸ್ ವಾಗಿದೆ.

ಇದಾದ ನಂತರ ತನ್ನ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಈ ಮಾಡೆಲ್ " ನನಗೆ ನಿಜಕ್ಕೂ ನಂಬಲಿಕ್ಕೆ ಆಗುತ್ತಿಲ್ಲ. ನಾನು ನನ್ನ ಮಗಳಿಗೆ ಪ್ರತಿದಿನ ಮಾಡುವವ ಕಾರ್ಯವನ್ನು ಹೆಡ್ ಲೈನ್ ಸುದ್ದಿಯಾಗುತ್ತದೆ ಎಂದು ನಾನು ಬಾವಿಸಿರಲಿಲ್ಲ "ಎಂದು ಅವರು ತಿಳಿಸಿದ್ದಾರೆ.

ಇನ್ನು ಮುಂದುವರೆದು ಇದೆ ಸಂದರ್ಭದಲ್ಲಿ ಎದೆ ಹಾಲು ಉನಿಸುವುದರ ಪ್ರಾಮುಖ್ಯತೆ ಬಗ್ಗೆ ಮಾತನಾಡುತ್ತಾ" ನಾನು ಪ್ರಾಮಾಣಿಕವಾಗಿ ಹೇಳಲು ಇಚ್ಚಿಸುತ್ತೇನೆ ನಾನೇಕೆ ಈ ಸುದ್ದಿಯನ್ನು ನಮ್ಬಲಿಲ್ಲವೆಂದರೆ ಇದು ಹೆಡ್ ಲೈನ್ ಸುದ್ದಿಯಾಗಿರುವುದು.ನನ್ನ ಕಥೆ ಇಷ್ಟೇ ಒಬ್ಬ ತಾಯಿಯಾಗಿ ಮಗಳಿಗೆ ನಡೆಯುತ್ತಾ ಹಾಲುಣಿಸಿದ್ದಷ್ಟೇ" ಎಂದು ಹೇಳಿದ್ದಾರೆ. ಈ ವಿಷಯವನ್ನು ಇತರ ಮಹಿಳೆಯರು ಕೂಡ ಚರ್ಚಿಸಬೇಕಾಗಿದೆ.

Trending News