Astrology: ಈ ತಿಂಗಳಿನಲ್ಲಿ ಈ 4 ರಾಶಿಗಳ ಭಾಗ್ಯವೇ ಬದಲಾಗಲಿದೆ, ಒಂದು ರಾಶಿಯ ಜನರಿಗೆ ಶನಿಪೀಡೆಯಿಂದ ಸಂಪೂರ್ಣ ಮುಕ್ತಿ

Planet Transit Effect On Zodiac Signs - ಜ್ಯೋತಿಷ್ಯಶಾಸ್ತ್ರದ (Astrology) ದೃಷ್ಟಿಯಿಂದ ಏಪ್ರಿಲ್ ತಿಂಗಳು ಬಹಳ ವಿಶೇಷವಾಗಿರಲಿದೆ. ಈ ಮಾಸದಲ್ಲಿ ಎಲ್ಲಾ ಗ್ರಹಗಳ (Mangal Rashi Parivartan April 2022) ಚಲನೆ ಬದಲಾಗಲಿದೆ. ಈ ಹಿನ್ನೆಲೆ ಕೆಲವು ರಾಶಿಗಳಿಗೆ ಸೇರಿದ ಜನರ ಜೀವನದಲ್ಲಿ ಗಮನಾರ್ಹ ಬದಲಾವಣೆ ಕಂಡುಬರಲಿದ್ದು, ಅವರ ಭಾಗ್ಯವೇ ಬದಲಾಗಲಿದೆ.
 

ನವದೆಹಲಿ: Planet Transit April 2022 - ಜ್ಯೋತಿಷ್ಯ ಶಾಸ್ತ್ರದ (Astrology) ದೃಷ್ಟಿಯಿಂದ ಏಪ್ರಿಲ್ ತಿಂಗಳು ಅತ್ಯಂತ ವಿಶೇಷವಾಗಿರಲಿದೆ. ವಾಸ್ತವದಲ್ಲಿ, ಈ ತಿಂಗಳು ಸೌರವ್ಯೂಹದ ಎಲ್ಲಾ ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸಲಿವೆ. ಇದು ಶನಿ, ಮಂಗಳ, ರಾಹು-ಕೇತು ಸೇರಿದಂತೆ ಎಲ್ಲಾ ಇತರ ಗ್ರಹಗಳನ್ನು ಒಳಗೊಂಡಿದೆ. ಈ ತಿಂಗಳ ಶನಿಯ ರಾಶಿ ಪರಿವರ್ತನೆ (Shani Gochar April 2022) ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ. ಇದಲ್ಲದೇ 18 ತಿಂಗಳ ನಂತರ ರಾಹು-ಕೇತು ಗ್ರಹಗಳು (Rahu Rashi Parivartan April 2022) ಸಹ ರಾಶಿಯನ್ನು ಬದಲಾಯಿಸಲಿವೆ. ಜ್ಯೋತಿಷ್ಯ ತಜ್ಞರ ಪ್ರಕಾರ ಇದು ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ವಿಶೇಷ ಪರಿಣಾಮ ಬೀರಲಿದೆ. ಆದರೆ, ಈ ತಿಂಗಳು ನಾಲ್ಕು ರಾಶಿಯ ಜನರ ಪಾಲಿಗೆ ಅತ್ಯಂತ ವಿಶೇಷವಾಗಿರಲಿದ್ದು ಅವರ ಭಾಗ್ಯವೇ ಬದಲಾಗಲಿದೆ.

 

ಇದನ್ನೂ ಓದಿ-Weekly Horoscope: ಮುಂದಿನ 7 ದಿನ ಈ ರಾಶಿಗಳ ಜನರ ಭಾಗ್ಯ ಹೊಳೆಯಲಿದೆ, ನಿಮ್ಮ ರಾಶಿ ಯಾವುದು?

 


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
 

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಮಿಥುನ (Gemini) - ಏಪ್ರಿಲ್ 2022 ಮಿಥುನ ಜಾತಕದ ಜನರ ಪಾಲಿಗೆ ಅತ್ಯಂತ ವಿಶೇಷವಾಗಿರಲಿದೆ. ಕಾರಣ, ಗ್ರಹಗಳ ರಾಶಿ ಪರಿವರ್ತನೆ ಈ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗಲಿದೆ. ಇದರ ಜೊತೆಗೆ ಈ ಜನರ ಪಾಲಿಗೆ ದೊಡ್ಡ ದೊಡ್ಡ ಅವಕಾಶಗಳೇ ಪ್ರಾಪ್ತಿಯಾಗಲಿವೆ. ಇದಲ್ಲದೆ, ಈ ಜಾತಕದವರಿಗೆ ಸಹನೀಯ ಎರಡೂವರೆ ವರ್ಷಗಳ ಕಾಟದಿಂದ ಮುಕ್ತಿ ಸಿಗಲಿದೆ. ಈ ತಿಂಗಳು ಮಿಥುನ ರಾಶಿಯ ಜನರಿಗೆ ಹಲವು ಆರ್ಥಿಕ ಲಾಭಗಳು ಪ್ರಾಪ್ತಿಯಾಗಲಿವೆ. ನೌಕರಿ-ವ್ಯಾಪಾರದ ವಿಷಯದಲ್ಲಿಯೂ ಕೂಡ ಇವರಿಗೆ ಸಮಯ ಅನುಕೂಲಕರವಾಗಿರಲಿದೆ.

2 /4

2. ಕನ್ಯಾ (Virgo) - ಕನ್ಯಾ ರಾಶಿಯ ಜಾತಕದವರ ಮೇಲೆ ಗೃಹಗಳ ರಾಶಿ ಪರಿವರ್ತನೆ ವಿಶೇಷ ಪ್ರಭಾವ ಬೀರಲಿದೆ. ನೌಕರಿಯಲ್ಲಿರುವ ಜನರ ಪಾಲಿಗೆ ವಿಶೇಷ ಲಾಭ ಕಾದಿದೆ. ಸರ್ಕಾರಿ ನೌಕರಿಯಲ್ಲಿರುವವರಿಗೆ ವಿಶೇಷ ಲಾಭ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಮಾನ-ಸನ್ಮಾನ ದ್ವಿಗುಣಗೊಳ್ಳಲಿದೆ. ಆದಾಯದ ಹೊಸ ಬಾಗಿಲುಗಳು ತೆರೆದುಕೊಳ್ಳಲಿವೆ. ಕೌಟುಂಬಿಕ ಜೀವನ ಖುಷಿಯಿಂದ ಕೂಡಿರಲಿದೆ.

3 /4

3. ಮಕರ (Capricorn) -  ಮಕರ ರಾಶಿಯ ಜಾತಕ ಹೊಂದಿದವರಿಗೆ ಏಪ್ರಿಲ್ ತಿಂಗಳು ಅತ್ಯಂತ ಶುಭವಾಗಿರಲಿದೆ. ಈ ತಿಂಗಳಿನಲ್ಲಿ ನಿಮ್ಮ ಎಲ್ಲಾ ನಿಂತು ಹೋದ ಕೆಲಸ ಕಾರ್ಯಗಳು ಫಲಿಸಲಿವೆ. ಶನಿದೇವ ನಿಮ್ಮ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲ್ಲಿದ್ದಾನೆ. ಇದರ ನೇರ ಲಾಭ ನಿಮಗೆ ಸಿಗಲಿದೆ. ಈ ತಿಂಗಳು ನಿಮ್ಮ ಆರ್ಥಿಕ ಸ್ಥಿತಿ ಬಲಿಷ್ಠಗೊಳ್ಳಲಿದೆ. ಆದರೆ, ಕೋಪದ ಮೇಲೆ ನಿಯಂತ್ರಣವಿರಲಿ.

4 /4

4. ಮೀನ ರಾಶಿ -  ಮೀನ ರಾಶಿಯ ಜನರಿಗೆ ಏಪ್ರಿಲ್ ತಿಂಗಳು ಅತ್ಯಂತ ಶುಭಕರವಾಗಿರಲಿದೆ. ದೇವಗುರು ಬೃಹಸ್ಪತಿಯ ರಾಶಿ ಪರಿವರ್ತನೆಯಿಂದ (Guru Gochar April 2022) ಮನೆ-ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ. ಬಿಸ್ನೆಸ್ ನಲ್ಲಿರುವವರಿಗೆ ದೊಡ್ಡ ಗುತ್ತಿಗೆ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬಿಸ್ನೆಸ್ ಅನ್ನು ಬದಲಾಯಿಸಲು ಬಯಸುತ್ತಿರುವವರಿಗೆ ಈ ಸಮಯ ಅತ್ಯುತ್ತಮ ಸಾಬೀತಾಗಲಿದೆ. ನೌಕರಿಯಲ್ಲಿರುವವರಿಗೂ ಕೂಡ ಹೊಸ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ.