April 2022 ರಲ್ಲಿ ನಿರ್ಮಾಣಗೊಳ್ಳಲಿದೆ ಈ ದುರ್ಲಭ ಸಂಯೋಗ, 9 ಗ್ರಹಗಳ ರಾಶಿ ಬದಲಾವಣೆ, ಪ್ರಭಾವ ಹೇಗಿರಲಿದೆ?

Planetary Changes - ಜ್ಯೋತಿಷ್ಯದ (Astrology) ದೃಷ್ಟಿಯಿಂದ 2022 ರ ಏಪ್ರಿಲ್ ತಿಂಗಳು ಬಹಳ ವಿಶೇಷವಾಗಿರಲಿದೆ. ಈ ತಿಂಗಳಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 9 ಗ್ರಹಗಳು ತನ್ನ ರಾಶಿಗಳು (Horoscope) ಬದಲಾಯಿಸಲಿವೆ.  

Written by - Nitin Tabib | Last Updated : Mar 27, 2022, 09:04 PM IST
  • ಏಪ್ರಿಲ್ ನಲ್ಲಿ ಈ ದುರ್ಲಭ ಸಂಯೋಗ ನಿರ್ಮಾಣಗೊಳ್ಳಲಿದೆ
  • 9 ಗ್ರಹಗಳ ರಾಶಿ ಬದಲಾವಣೆ
  • ಎಲ್ಲಾ ಜನರ ಜೀವನದ ಮೇಲೆ ಪ್ರಭಾವ
April 2022 ರಲ್ಲಿ ನಿರ್ಮಾಣಗೊಳ್ಳಲಿದೆ ಈ ದುರ್ಲಭ ಸಂಯೋಗ, 9 ಗ್ರಹಗಳ ರಾಶಿ ಬದಲಾವಣೆ, ಪ್ರಭಾವ ಹೇಗಿರಲಿದೆ? title=
Planetary Changes In April

ನವದೆಹಲಿ: Astrology - ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) 9 ಗ್ರಹಗಳು ಮತ್ತು 27 ನಕ್ಷತ್ರಗಳ ಸ್ಥಾನದ ಲೆಕ್ಕಾಚಾರದ ಆಧಾರದ ಮೇಲೆ ಎಲ್ಲ ಭವಿಷ್ಯವಾಣಿಗಳನ್ನು ಮಾಡಲಾಗುತ್ತದೆ. ಪ್ರತಿಯೊಂದು ಗ್ರಹವು ತನ್ನ ರಾಶಿಯನ್ನು ವಿವಿಧ ಅವಧಿಗಳಲ್ಲಿ ಬದಲಾಯಿಸುತ್ತದೆ. ಚಂದ್ರನು ಅತ್ಯಂತ ಕಡಿಮೆ ಅಂದರೆ, ಎರಡೂವರೆ ದಿನಗಳಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತಾನೆ ಮತ್ತು ಶನಿಯು ಅತಿ ಹೆಚ್ಚು ಅಂದರೆ ಎರಡೂವರೆ ವರ್ಷಗಳಲ್ಲಿ ಒಮ್ಮೆ ತನ್ನ ರಾಶಿ ಬದಲಾಯಿಸುತ್ತಾನೆ. ಆದರೆ ಈ ವರ್ಷದ ಏಪ್ರಿಲ್‌ನಲ್ಲಿ ಇಂತಹ ಅಪರೂಪದ ಸಂಯೋಗ ಸೃಷ್ಟಿಯಾಗುತ್ತಿದ್ದು, ಈ ತಿಂಗಳಲ್ಲಿ ಎಲ್ಲಾ 9 ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಜ್ಯೋತಿಷಿಗಳ ಪ್ರಕಾರ, ಒಂದೇ ತಿಂಗಳಲ್ಲಿ ಎಲ್ಲಾ ಗ್ರಹಗಳ ರಾಶಿ ಪರಿವರ್ತನೆಯಾಗುವ ಕಾಕತಾಳೀಯತೆಯು ತುಂಬಾ ಅಪರೂಪ ಎನ್ನಲಾಗಿದೆ. ಸೌರವ್ಯೂಹದ ಎಲ್ಲಾ ಗ್ರಹಗಳ ಸ್ಥಾನದಲ್ಲಿ ಸಂಭವಿಸುವ ಈ ದೊಡ್ಡ ಬದಲಾವಣೆಯು ದೇಶ, ಪ್ರಪಂಚ ಮತ್ತು ಜನರ ಮೇಲೆ ಪ್ದ್ರಭಾವ ಬೀರಲಿದೆ.

ಯಾವ ಗ್ರಹವು ತನ್ನ ರಾಶಿಯನ್ನು ಯಾವಾಗ ಬದಲಾಯಿಸಲಿದೆ?
1. ಏಪ್ರಿಲ್ 2022 ರಲ್ಲಿ, ಗ್ರಹಗಳ ರಾಶಿ ಬದಲಾವಣೆ ಮಂಗಳ ಗ್ರಹದಿಂದ ಆರಂಭವಾಗಲಿದೆ. ಏಪ್ರಿಲ್ 7 ರಂದು ಮಂಗಳನು ​​ಮಕರ ರಾಶಿಯಿಂದ ಹೊರಟು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.
2. ಬುಧವು ಏಪ್ರಿಲ್ 8 ರಂದು ರಾಶಿ ಬದಲಾಯಿಸಲಿದೆ. ಮೀನ ರಾಶಿಯನ್ನು ತೊರೆದ ನಂತರ, ಅದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಮತ್ತು ಏಪ್ರಿಲ್ 24 ರಂದು, ಮತ್ತೆ ಅದು ವೃಷಭ ರಾಶಿಗೆ ಸಾಗಲಿದೆ.
3. ಇದರ ನಂತರ, ಏಪ್ರಿಲ್ 11 ರಂದು, ರಾಹು ವಿರುದ್ಧ ದಿಕ್ಕಿನಲ್ಲಿ ತನ್ನ ಚಲನೆ ಆರಂಭಿಸಲಿದ್ದಾನೆ, ವೃಷಭ ರಾಶಿಯನ್ನು ಬಿಟ್ಟು ಮೇಷ  ರಾಶಿಗೆ ರಾಹುವಿನ ಪ್ರವೆಶವಾಗಲಿದೆ.
4. ಏಪ್ರಿಲ್ 11 ರಂದು ಕೇತು ವೃಶ್ಚಿಕ ರಾಶಿಯನ್ನು ಬಿಟ್ಟು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ.
5. ಏಪ್ರಿಲ್ 13 ರಂದು 2 ದಿನಗಳ ನಂತರ, ಗುರು ಗ್ರಹವು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸಲಿದೆ.
6. ನಂತರ ಏಪ್ರಿಲ್ 14 ರಂದು ಗ್ರಹಗಳ ರಾಜ ಸೂರ್ಯ ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೆಶಿಸಲಿದ್ದಾನೆ
7. ನಂತರ ಏಪ್ರಿಲ್ 27 ರಂದು ಶುಕ್ರ ಗ್ರಹ ಕುಂಭ ರಾಶಿಯನ್ನು ತೊರೆದು ಮೀನ ರಾಶಿ ಪ್ರವೇಶಿಸಲಿದೆ.
8. ಮರುದಿನ, ಏಪ್ರಿಲ್ 28 ರಂದು, ನ್ಯಾಯದ ದೇವರು ಶನಿ ಎರಡೂವರೆ ವರ್ಷಗಳ ನಂತರ ತನ್ನದೇ ಆದ ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೆಶಿಸಲಿದ್ದಾನೆ.
9. ಏತನ್ಮಧ್ಯೆ, ಚಂದ್ರನು ತಿಂಗಳಾದ್ಯಂತ ಪ್ರತಿ ಎರಡೂವರೆ ದಿನಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತಾನೆ.

ಶನಿಯ ರಾಶಿ ಬದಲಾವಣೆಯು ದೊಡ್ಡ  ಪ್ರಭಾವ ಬೀರಲಿದೆ (Saturn's Zodiac Change)
ಎಲ್ಲಾ 9 ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯು ಎಲ್ಲಾ 12 ರಾಶಿಗಳ ಜನರ ಮೇಲೆ ಶುಭ ಮತ್ತು ಅಶುಭ ಪರಿಣಾಮವನ್ನು ಬೀರಲಿದೆ. ಆದರೆ ಇವಗಳಲ್ಲಿ ಶನಿಯ ಸ್ಥಾನಪಲ್ಲಟ ಹೆಚ್ಚು ಪ್ರಭಾವ ಬೀರಲಿದೆ ಏಕೆಂದರೆ ಇದರ ಪರಿಣಾಮವು ಹೆಚ್ಚು ಕಾಲ ಇರಲಿದೆ. ಏಪ್ರಿಲ್ 2022 ರಲ್ಲಿ ಸಂಭವಿಸಲಿರುವ ಶನಿಯ ರಾಶಿ ಬದಲಾವಣೆಯು ಧನು ರಾಶಿಯ ಜನರ ಸಾಡೇಸಾತಿಗೆ ಅಂತ್ಯಹಾಡಲಿದೆ. ಆದರೆ ಇದರೊಂದಿಗೆ ಮೀನ ರಾಶಿಯ ಜನರ ಸಾಡೇಸಾತಿ ಆರಂಭಗೊಳ್ಳಲಿದೆ.

ಇದನ್ನೂ ಓದಿ-Know Your Personality: ಕುರ್ಚಿಯ ಮೇಲೆ ನೀವು ಕುಳಿತುಕೊಳ್ಳುವ ಶೈಲಿ ನಿಮ್ಮ ಸ್ವಭಾವ ಹೇಳುತ್ತದೆ

ಇದಲ್ಲದೆ, ಕುಂಭ ರಾಶಿಯ ಜನರ ಸಾಡೇಸಾತಿಯ (Saturn Horoscope) ಎರಡನೇ ಹಾಗೂ ಮಕರ ರಾಶಿಯ ಜನರ ಅಂತಿಮ ಚರಣ ಆರಂಭಗೊಳ್ಳಲಿದೆ. ಮಿಥುನ ಹಾಗೂ ತುಲಾ ರಾಶಿಗಳ ಶನಿಕಾಟ ಅಂತ್ಯವಾಗಲಿದೆ.ಇದರ ಜೊತೆಗೆ ಕರ್ಕ ಹಾಗೂ ವೃಶ್ಚಿಕ ರಾಶಿಗಳಿಗೆ ಶನಿಕಾಟ ಆರಂಭವಾಗಲಿದೆ. ಹೀಗಾಗಿ ಶನಿಯ ರಾಶಿ ಪರಿವರ್ತನೆಯಿಂದ  ಮೀನ, ಕರ್ಕ, ವೃಶ್ಚಿಕ ರಾಶಿಗಳ ಜಾತಕದವರ ಸಂಕಷ್ಟ ಹೆಚ್ಚಾಗಿದೆ. 

ಇದನ್ನೂ ಓದಿ-Chanakya Niti: ಇಂತಹ ಜನರ ಮಧ್ಯೆ ಎಂದಿಗೂ ಇರಬೇಡಿ, ಇಲ್ದಿದ್ರೆ ಲೈಫ್ ಲಾಂಗ್ ದುಃಖದಲ್ಲಿರಬೇಕಾಗುತ್ತದೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ  ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News