Budget Smartphone: ಕೇವಲ 8 ಸಾವಿರಕ್ಕೆ ಅದ್ಭುತ ವೈಶಿಷ್ಟ್ಯ ಹೊಂದಿರುವ Realme ಸ್ಮಾರ್ಟ್‍ಫೋನ್‍

ಗ್ರಾಹಕರ ಕೈಗೆಟುವ ದರದಲ್ಲಿ Realme C30s ಸ್ಮಾರ್ಟ್‍ಫೋನ್‍ ಸೆಪ್ಟೆಂಬರ್ 14ರಂದು ಮಧ್ಯಾಹ್ನ 12ಗಂಟೆಗೆ ರಿಲೀಸ್  ಆಗಲಿದೆ.

ನವದೆಹಲಿ: Realme ಭಾರತದಲ್ಲಿ ಹೊಸ ಬಜೆಟ್-ಶ್ರೇಣಿಯ ಸ್ಮಾರ್ಟ್‍ಫೋನ್‍ ಬಿಡುಗಡೆಗೆ ಸಜ್ಜಾಗಿದೆ. ಗ್ರಾಹಕರಿಗೆ ಕೈಗೆಟುವ ದರದಲ್ಲಿ Realme C30s ಸ್ಮಾರ್ಟ್‍ಫೋನ್‍ಅನ್ನು ಸೆಪ್ಟೆಂಬರ್ 14ರಂದು ಮಧ್ಯಾಹ್ನ 12ಗಂಟೆಗೆ ರಿಲೀಸ್ ಮಾಡಲಿದೆ. ಇದರ ಬೆಲೆ ಕೇವಲ 8 ಸಾವಿರ ರೂ. ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‍ಫೋನ್‍ ವೈಶಿಷ್ಟ್ಯಗಳು ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವರದಿಗಳ ಪ್ರಕಾರ ಈ ಹ್ಯಾಂಡ್‌ಸೆಟ್ 2 RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುತ್ತದೆ. 2GB RAM ಜೊತೆಗೆ 32GB ಸ್ಟೋರೇಜ್ ಮತ್ತು 3GB RAM ಜೊತೆಗೆ 32GB ಸ್ಟೋರೇಜ್ ಇರುತ್ತದೆ. ಬೇಸ್ ಮಾಡೆಲ್ ಬೆಲೆ 7,999 ರೂ (2GB RAM ಮತ್ತು 32GB ಸ್ಟೋರೇಜ್) ಮತ್ತು 3GB RAM ಮತ್ತು 32GB ಸ್ಟೋರೇಜ್ ರೂಪಾಂತರದ ಬೆಲೆ 8,799 ರೂ. ಇರಲಿದೆ.

2 /5

Realme C30sನ ಸ್ಮಾರ್ಟ್‌ಫೋನ್ 6.5-ಇಂಚಿನ ಡಿಸ್‍ಪ್ಲೇಯನ್ನು ಡ್ಯೂ-ಡ್ರಾಪ್ ನಾಚ್‌ನೊಂದಿಗೆ ಹೊಂದಿರುತ್ತದೆ. ಇದು ಕಡಿಮೆ-ವೆಚ್ಚದ ಫೋನ್ ಆಗಿದ್ದು, ಪ್ರಮಾಣಿತ 60Hz ರಿಫ್ರೆಶ್ ರೇಟ್‍ನೊಂದಿಗೆ HD+ ಡಿಸ್‍ಪ್ಲೇ ಹೊಂದಿರುತ್ತದೆ. ಈ ಡಿಸ್‍ಪ್ಲೇ 16.7 ಮಿಲಿಯನ್ ಬಣ್ಣಗಳನ್ನು ಮತ್ತು 88.7% ಸ್ಕ್ರೀನ್-ಟು-ಬಾಡಿ Ratio ಹೊಂದಿರುತ್ತದೆ.

3 /5

ಈ ಫೋನ್ ದೀರ್ಘಕಾಲಿನ 5,000 mAh ಬ್ಯಾಟರಿ ಹೊಂದಿರುತ್ತದೆ. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಹೊಂದಿರುತ್ತದೆ. ಸಾಫ್ಟ್‌ವೇರ್ ಕುರಿತು ಹೇಳುವುದಾದರೆ ಈ ಹ್ಯಾಂಡ್‌ಸೆಟ್ Android 12 ಆಧಾರಿತ Realme UI S ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

4 /5

Realme C30sನ ಕ್ಯಾಮೆರಾದ ಬಗ್ಗೆ ಹೇಳುವುದಾದರೆ, ಈ ಫೋನ್ ಎಲ್ಇಡಿ ಫ್ಲ್ಯಾಷ್ ಜೊತೆಗೆ ಸಾಧನದ ಹಿಂಭಾಗದಲ್ಲಿ ಒಂದೇ 8MP ಕ್ಯಾಮೆರಾವನ್ನು ಹೊಂದಿರುತ್ತದೆ. ಮುಂಭಾಗದಲ್ಲಿ ಇದು 5MP ಕ್ಯಾಮೆರಾ ಹೊಂದಿರುತ್ತದೆ.

5 /5

ಈ ಸಾಧನದ ಚಿಪ್‌ಸೆಟ್ ಕುರಿತು ವಿವರಗಳನ್ನು ಇನ್ನೂ ರಹಸ್ಯವಾಗಿಡಲಾಗಿದೆ. ಆದಾಗ್ಯೂ, ಇದು UNISOC T612 SoC ನಿಂದ ಚಾಲಿತವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಸ್ಮಾರ್ಟ್‍ಫೋನ್ ನೀಲಿ ಮತ್ತು ಕಪ್ಪು 2 ಬಣ್ಣಗಳ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.