ಆಗಸ್ಟ್ ತಿಂಗಳಿನಿಂದ ಈ ರಾಶಿಯವರ ಅದೃಷ್ಟದಾಟ ! ಹರಿಯುವುದು ಹಣದ ಹೊಳೆ

 ಸೂರ್ಯನ ಅಧಿಪತ್ಯದ ಸಿಂಹದಲ್ಲಿ ಮಂಗಳ ಮತ್ತು ಸೂರ್ಯನ ಸಂಯೋಗವು ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. 

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಎಲ್ಲಾ 9 ಗ್ರಹಗಳು ವಿವಿಧ ಸಮಯಗಳಲ್ಲಿ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಆಗಸ್ಟ್ ತಿಂಗಳಲ್ಲಿ, ಅಂತಹ ಪ್ರಮುಖ 2 ಗ್ರಹಗಳ ಸಂಕ್ರಮಣಗಳು ನಡೆಯಲಿವೆ. ಇದು ಕೆಲವು ರಾಶಿಯವರಿಗೆ ಭರ್ಜರಿ ಲಾಭವನ್ನು ನೀಡಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

1 /5

ಸಿಂಹರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದ ಒಂದು ವರ್ಷದ ನಂತರ ಮಂಗಳ ಮತ್ತು ಸೂರ್ಯ ಒಂದೇ ರಾಶಿಯಲ್ಲಿ ಅಂದರೆ ಸಿಂಹರಾಶಿಯಲ್ಲಿ ಸೇರಿಕೊಳ್ಳಲಿವೆ. ಸೂರ್ಯನ ಅಧಿಪತ್ಯದ ಸಿಂಹದಲ್ಲಿ ಮಂಗಳ ಮತ್ತು ಸೂರ್ಯನ ಸಂಯೋಗವು ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. 

2 /5

ಆಗಸ್ಟ್ 16 ರಿಂದ ಸೂರ್ಯನು ಸಿಂಹರಾಶಿಗೆ ಪ್ರವೇಶಿಸಲಿದ್ದಾನೆ. ಮಂಗಳ ಈಗಾಗಲೇ ಅದೇ ರಾಶಿಯಲ್ಲಿದ್ದಾನೆ. ಈ ಕಾರಣದಿಂದ ಆಗಸ್ಟ್ 16ರಿಂದ  ಈ ಕೆಳಗಿನ ರಾಶಿಯವರ ಅದೃಷ್ಟದ ದಿನಗಳು ಆರಂಭವಾಗಲಿವೆ. ಈ ರಾಶಿಯವರು ಹಿಂದೆಂದೂ ಕಾಣದ ಯಶಸ್ಸು ಗಳಿಸಲಿದ್ದಾರೆ.  

3 /5

ಮೇಷ : ಮೇಷ ರಾಶಿಯ ಅಧಿಪತಿ ಮಂಗಳ. ಸಿಂಹ ರಾಶಿಯಲ್ಲಿ ಮಂಗಳ-ಸೂರ್ಯನ ಸಂಯೋಗವು ಮೇಷ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಈ ರಾಶಿಯವರ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಇದು ಅನುಕೂಲಕರ ಸಮಯ. ನಿಮಗೆ ಗೊತ್ತಿಲ್ಲದ ಮೂಲದಿಂದ ಹಣ ಹರಿದು ಬರುವುದು. ಇಲ್ಲಿಯವರೆಗೆ ಯಾವ ಸಮಸ್ಯೆಗಳು ಎದುರಾಗಿತ್ತೋ ಅವೆಲ್ಲವೂ ಮಾಯವಾಗುವುದು.   

4 /5

ಕರ್ಕಾಟಕ: ಸೂರ್ಯ ಮತ್ತು ಮಂಗಳನ ಸಂಯೋಜನೆಯು ಕರ್ಕಾಟಕ ರಾಶಿಯವರ ಅದೃಷ್ಟವನ್ನು ಬೆಳಗುವುದು. ಆದಾಯದಲ್ಲಿ ಹೆಚ್ಚಳವಾಗಬಹುದು. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕೆಲವು ಪ್ರಮುಖ ಕೆಲಸಗಳು ಪೂರ್ಣಗೊಂಡು ಅದರ ಪ್ರಯೋಜನ ಸಿಗುವುದು. ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಸಮಯ ಉತ್ತಮವಾಗಿರಲಿದೆ.  

5 /5

ಸಿಂಹ: ಸಿಂಹ ರಾಶಿಯ ಅಧಿಪತಿ ಸೂರ್ಯ. ಸಿಂಹ ರಾಶಿಯಲ್ಲಿ ಮಂಗಳ-ಸೂರ್ಯ ಸಂಯೋಗ ನಡೆಯುತ್ತಿದ್ದು, ಇದರಿಂದ ಸಿಂಹ ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ-ಇನ್ಕ್ರಿಮೆಂಟ್  ಸಿಗಲಿದೆ. ವ್ಯಾಪಾರ ವರ್ಗದವರ ಲಾಭ ಕೂಡಾ ಹೆಚ್ಚಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)