ಕಿಡ್ನಿ ಸಮಸ್ಯೆ ಇರುವವರು ಈ ರೀತಿಯ ಲಘು ವ್ಯಾಯಾಮಗಳನ್ನು ಮಾಡಿ ನೋಡಿ , ಪರಿಹಾರ ಸಿಗಲಿದೆ

ಪ್ರಸ್ತುತ ಭಾರತದಲ್ಲಿ 75 ಲಕ್ಷಕ್ಕೂ ಹೆಚ್ಚು ಜನರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ, ಪ್ರತಿ ವರ್ಷ 2 ಲಕ್ಷ ಮಂದಿ ಕಿಡ್ನಿ ವೈಫಲ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. 

Exercises for kidney patients : ಅನಾರೋಗ್ಯಕರ ಮೂತ್ರಪಿಂಡದ ಕಾರಣದಿಂದಾಗಿ, ಜನರು ದೈನಂದಿನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅಂಕಿಅಂಶಗಳ ಪ್ರಕಾರ, ಪ್ರಸ್ತುತ ಭಾರತದಲ್ಲಿ 75 ಲಕ್ಷಕ್ಕೂ ಹೆಚ್ಚು ಜನರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ, ಪ್ರತಿ ವರ್ಷ 2 ಲಕ್ಷ ಮಂದಿ ಕಿಡ್ನಿ ವೈಫಲ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಅಧ್ಯಯನಗಳ ಪ್ರಕಾರ, ಮೂತ್ರಪಿಂಡದ ಕಾಯಿಲೆ ಇರುವ ಜನರು ನಿಯಮಿತ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಯಿಂದ ಪ್ರಯೋಜನ ಪಡೆಯಬಹುದು. ತಜ್ಞರ ಪ್ರಕಾರ ಕಿಡ್ನಿ ರೋಗಿಗಳು ಪ್ರತಿದಿನ 15-20 ನಿಮಿಷ ವ್ಯಾಯಾಮ ಮಾಡಿದರೆ ಸಾಕು. ಸಮತೋಲಿತ ಆಹಾರದೊಂದಿಗೆ ಲಘು ವ್ಯಾಯಾಮ ಕೂಡ ಮೂತ್ರಪಿಂಡದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ವಾಕಿಂಗ್  : ದಿನದ ಯಾವುದೇ ಸಮಯದಲ್ಲಿ ಯಾವುದೇ ವಯಸ್ಸಿನವರು ಮಾಡಬಹುದಾದ ಸುಲಭವಾದ ಮತ್ತು ಸರಳವಾದ ವ್ಯಾಯಾಮ ಇದಾಗಿದೆ. ವ್ಯಾಯಾಮ ಮಾಡಲು ಸಮಯ ಸಿಗದವರಿಗೆ ಅಥವಾ ವ್ಯಾಯಾಮವನ್ನೇ ಮಾಡದವರಿಗೆ ವಾಕಿಂಗ್ ಉತ್ತಮ ವ್ಯಾಯಾಮ. ಆರಂಭದಲ್ಲಿ 10-15 ನಿಮಿಷಗಳ ಕಾಲ ನಡೆಡು, ನಂತರ ಕ್ರಮೇಣ ಇದರ ಅವಧಿಯನ್ನು ಹೆಚ್ಚಿಸಬಹುದು. 

2 /4

ಯೋಗಾಭ್ಯಾಸವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಲು ಉತ್ತಮ ಮಾರ್ಗವಾಗಿದೆ. ಇದನ್ನು ಜನರು ಕ್ರಮೇಣ ಅಳವಡಿಸಿಕೊಳ್ಳುತ್ತಿದ್ದಾರೆ. ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ.  ಮೂತ್ರಪಿಂಡದ ಕಾಯಿಲೆಯಿಂದ ಉಂಟಾಗುವ ಆತಂಕ ಮತ್ತು ಒತ್ತಡವನ್ನು ನಿವಾರಿಸುತ್ತದೆ.  ವೈದ್ಯರು ಮತ್ತು ಯೋಗ ತರಬೇತುದಾರರೊಂದಿಗೆ ಚರ್ಚಿಸಿ ಸುಲಭವಾದ ಯೋಗ ಭಂಗಿಗಳ ಬಗ್ಗೆ ಮಾಹಿತಿ ಪಡೆದು, ಅವುಗಳನ್ನು ಅಭ್ಯಾಸ ಮಾಡಿ.  

3 /4

ಈಜುವುದು ಮೋಜಿನ ಚಟುವಟಿಕೆ ಮಾತ್ರವಲ್ಲ, ಇದು ಉತ್ತಮ ಮತ್ತು ಸುಲಭವಾದ ವ್ಯಾಯಾಮವೂ ಹೌದು. ನೀರಿನಲ್ಲಿ ಈಜುವಾಗ ಕೀಲುಗಳ ಮೇಲೆ ಒತ್ತಡ ಕಡಿಮೆಯಾಗುವುದರಿಂದ ಕಿಡ್ನಿ, ಅಧಿಕ ತೂಕದಿಂದ ಪರಿಹಾರ ಸಿಗಲಿದೆ.  

4 /4

ನೃತ್ಯವನ್ನು ಉತ್ತಮ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ. ಜನರು ಅದನ್ನು ಆನಂದಿಸುವುದು ಮಾತ್ರವಲ್ಲ, ನೃತ್ಯವು ದೇಹಕ್ಕೆ ವ್ಯಾಯಾಮವನ್ನು ನೀಡುತ್ತದೆ. ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ನೃತ್ಯವು ಉತ್ತಮ ವ್ಯಾಯಾಮ ಎಂದು ಸಾಬೀತಾಗಲಿದೆ.